Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್
Shubman Gill: ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ವಿವಾಹ ಸಮಾರಂಭಕ್ಕೆ ಟೀಂ ಇಂಡಿಯಾ ತಂಡದ ನಾಯಕ ಶುಭ್ಮನ್ ಗಿಲ್ ಹಾಜರಾಗದಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಸ್ವರೂಪ ಪಡೆದುಕೊಂಡಿದ್ದು, ನೆಟ್ಟಿಗರು ಹಲವು ರೀತಿಯಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಅವರ ವಿವಾಹ ಸಮಾರಂಭ ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಹಲವು ಕ್ರಿಕೆಟಿಗರು ಆಗಮಿಸಿದ್ದರು. ಆದರೆ, ಭಾರತ ತಂಡದ ನಾಯಕ ಶುಭ್ಮನ್ ಗಿಲ್ ಹಾಜರಾಗದಿರುವುದು ಹಾಗೂ ಸಾಮಾಜಿಕ ಜಾಲತಾಣದಲ್ಲೂ ಅರ್ಜುನ್ ಅವರಿಗೆ ಯಾವುದೇ ಶುಭಾಶಯಗಳನ್ನು ತಿಳಿಸಿಲ್ಲದಿರುವುದು ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇವರಿಬ್ಬರೂ ಆತ್ಮೀಯ ಸ್ನೇಹಿತರು ಅಂತಲೂ ಹೇಳಲಾಗುತ್ತಿದೆ.

ಗಿಲ್-ಸಾರಾ ತೆಂಡೂಲ್ಕರ್ ಬ್ರೇಕಪ್?
ಈ ವಿವಾಹ ಸಮಾರಂಭಕ್ಕೆ ಭಾರತ ತಂಡದ ನಾಯಕ ಸುಬ್ಮನ್ ಗಿಲ್ ಗೈರಾಗಿದ್ದು, ಇದರಿಂದ ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ನಡುವೆ ಬ್ರೇಕಪ್ ಆಗಿದೆಯೇ ಎಂಬ ಅನುಮಾನಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಸಾರಾ ಮತ್ತು ಗಿಲ್ ಅವರ ಸ್ನೇಹದ ಬಗ್ಗೆ ಈ ಹಿಂದೆ ಹಲವು ವದಂತಿಗಳಿದ್ದವು. ಆದರೆ, ಅರ್ಜುನ್ ಅವರ ಮದುವೆಯಲ್ಲಿ ಗಿಲ್ ಕಾಣಿಸಿಕೊಳ್ಳದಿರುವುದು ಮತ್ತು ವಿಶ್ ಕೂಡ ಮಾಡದಿರುವುದು ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಮತ್ತೊಂದೆಡೆ, ಸಾರಾ ತೆಂಡೂಲ್ಕರ್‌ಗಿಂತ ಮೊದಲೇ ಅವರ ಸೋದರ ಅರ್ಜುನ್ ತೆಂಡೂಲ್ಕರ್ ವಿವಾಹವಾಗಿರುವುದು ಚರ್ಚೆಗೆ ಕಾರಣವಾಗಿದೆ. ಸಚಿನ್ ಅವರ ಕುಟುಂಬದ ಸಂಪ್ರದಾಯದಂತೆ ಮೊದಲು ಮಗಳ ಮದುವೆ ಆಗಬೇಕಿತ್ತು ಎಂಬ ಮಾತುಗಳಿದ್ದರೂ, ಅರ್ಜುನ್ ಮದುವೆ ಅದ್ದೂರಿಯಾಗಿ ನಡೆದಿದೆ. ಇದೀಗ ಎಲ್ಲರ ದೃಷ್ಟಿ ಸಾರಾ ಅವರತ್ತ ನೆಟ್ಟಿದೆ. ಸಾರಾ ಪ್ರಸ್ತುತ ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಜೊತೆಗೆ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು, ತಮ್ಮದೇ ಆದ ಗುರುತನ್ನು ಮೂಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಅರ್ಜುನ್ ಮದುವೆಗೆ ಯಾರೆಲ್ಲಾ ಬಂದಿದ್ದರು?
ಇನ್ನೂ ಸೋದರ ಅರ್ಜುನ್ ಮದುವೆ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಅನಿಲ್ ಅಂಬಾನಿ ಮತ್ತು ನೀತಾ ಅಂಬಾನಿ ಸೇರಿದಂತೆ, ಕ್ರಿಕೆಟ್ ದಿಗ್ಗಜರಾದ ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಆಶಿಶ್ ನೆಹ್ರಾ ಭಾಗವಹಿಸಿದ್ದರು.
ಅಷ್ಟೇ ಅಲ್ಲದೆ, ಎಂ.ಎಸ್. ಧೋನಿ - ಸಾಕ್ಷಿ ಧೋನಿ ದಂಪತಿ, ರೋಹಿತ್ ಶರ್ಮಾ - ರಿತಿಕಾ ಸಜ್‌ದೇಹ್ ದಂಪತಿ, ಪೃಥ್ವಿ ಶಾ, ಪಿಯೂಷ್ ಚಾವ್ಲಾ, ಬಾಲಿವುಡ್ ನಟ ಆಮೀರ್ ಖಾನ್, ಅಭಿಷೇಕ್ ಬಚ್ಚನ್ ಮತ್ತು ಮಹಾರಾಷ್ಟ್ರದ ಅನೇಕ ಪ್ರಮುಖ ರಾಜಕೀಯ ನಾಯಕರು ಭಾಗವಹಿಸಿ ನವಜೋಡಿಗೆ ಆಶೀರ್ವದಿಸಿದರು. ಇಷ್ಟೆಲ್ಲಾ ಗಣ್ಯರು ಭಾಗವಹಿಸಿದ್ದರು. ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ ಅನುಪಸ್ಥಿತಿ ಚರ್ಚೆ ಹುಟ್ಟುಹಾಕಿದೆ. ಅರ್ಜುನ್ ತೆಂಡೂಲ್ಕರ್ ಅವರ ಆಪ್ತ ಸ್ನೇಹಿತರಾಗಿದ್ದರೂ ಕೂಡ, ಗಿಲ್ ಈ ಕಾರ್ಯಕ್ರಮಕ್ಕೆ ಏಕೆ ಬರಲಿಲ್ಲ ಎಂಬುದು ಈಗ ಕುತೂಹಲದ ವಿಷಯವಾಗಿದೆ.
ಶುಭ್ಮನ್ ಗಿಲ್-ಸಾರಾ ಡೇಟಿಂಗ್?
ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಅವರು 2021ರಿಂದಲೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ನಡೆಯುತ್ತಲಿವೆ. ಇತ್ತೀಚಿನ ಇಂಗ್ಲೆಂಡ್ ಪ್ರವಾಸದ ವೇಳೆ, ಸಾರಾ ಅವರ ಸಮ್ಮುಖದಲ್ಲೇ ರವೀಂದ್ರ ಜಡೇಜಾ ಮತ್ತು ಕೆ.ಎಲ್.ರಾಹುಲ್ ಶುಭ್ಮನ್ ಗಿಲ್ ಅವರನ್ನು ತಮಾಷೆಯಾಗಿ ಚುಡಾಯಿಸುತ್ತಿದ್ದ ದೃಶ್ಯಗಳು ವೈರಲ್ ಆಗಿದ್ದವು. ಇದು ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಮೂಡಿಸಿತ್ತು.
ಗಿಲ್ ಬ್ಯಾಟಿಂಗ್ ನೋಡಲು ಬಂದಿದ್ರಾ ಸಾರಾ?
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಸಂದರ್ಭದಲ್ಲೂ, ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಪ್ರದರ್ಶನ ವೀಕ್ಷಿಸಲು ಸಾರಾ ತೆಂಡೂಲ್ಕರ್ ಅವರು ಖುದ್ದು ಮೈದಾನಕ್ಕೆ ಆಗಮಿಸಿದ್ದರು. ಇದು ಅವರ ನಡುವೆ ಏನೋ ಇದೆ ಎಂಬ ವದಂತಿಗಳಿಗೆ ಬಲ ತುಂಬಿತು. ಗಿಲ್ ಅವರ ಪ್ರತಿ ಪಂದ್ಯದ ನಂತರವೂ ಇವರ ಹೆಸರು ಟ್ರೆಂಡಿಂಗ್‌ನಲ್ಲಿರುತ್ತದೆ. ಸಾರಾ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಾಗಲೆಲ್ಲಾ, ಕ್ಯಾಮೆರಾಗಳಲ್ಲಿ ಅವರನ್ನೇ ಹೆಚ್ಚಾಗಿ ತೋರಿಸಿದ ಘಟನೆಗಳು ಕೂಡ ನಡೆದಿವೆ.
ಸಚಿನ್ ತೆಂಡೂಲ್ಕರ್ ಬಳಿ ಮಾರ್ಗದರ್ಶನ
ಗಿಲ್ ಸೋದರಿ ಮತ್ತು ಸಾರಾ ತೆಂಡೂಲ್ಕರ್ ಅವರು ಅತ್ಯಂತ ಆಪ್ತ ಗೆಳತಿಯರು. ಇವರಿಬ್ಬರ ನಡುವಿನ ಉತ್ತಮ ಬಾಂಧವ್ಯದ ವಿಚಾರಗಳು ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನೂ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ, ತಾವು ಕ್ರಿಕೆಟ್ ತಂತ್ರಗಳ ಬಗ್ಗೆ ಸಚಿನ್ ತೆಂಡೂಲ್ಕರ್ ಬಳಿ ಮಾರ್ಗದರ್ಶನ ಪಡೆದಿದ್ದಾಗಿ ಸ್ವತಃ ಶುಭ್ಮನ್ ಗಿಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ಇಷ್ಟೆಲ್ಲಾ ಆತ್ಮೀಯತೆ ಇದ್ದರೂ, ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ವಿವಾಹ ಸಮಾರಂಭಕ್ಕೆ ಗಿಲ್ ಹಾಜರಾಗದಿರುವುದು ಅಚ್ಚರಿ ಮೂಡಿಸಿದೆ. ಸಾರಾ ಅವರ ಕುಟುಂಬದ ಕಾರ್ಯಕ್ರಮದಲ್ಲೇ ಗಿಲ್ ಭಾಗವಹಿಸದಿರುವುದು, ಇವರಿಬ್ಬರ ನಡುವೆ ಎಲ್ಲವೂ ಸರಿಯಿದೆಯೇ? ಅಥವಾ ಸಾರಾ ಮತ್ತು ಗಿಲ್ ನಡುವೆ ಬಿರುಕು ಮೂಡಿದೆಯೇ? ಎಂಬ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ಗಿಲ್ ಮತ್ತು ಸಾರಾ ತಮ್ಮ ವೈಯಕ್ತಿಕ ಸಂಬಂಧದ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಇವರಿಬ್ಬರ ನಡುವೆ ಎಲ್ಲವೂ ಸರಿಯಿದೆಯೇ ಅಥವಾ ಸಂಬಂಧ ಮುರಿದುಬಿದ್ದಿದೆಯೇ ಎಂಬುದು ಕೇವಲ ಊಹಾಪೋಹಗಳಷ್ಟೇ. 2021ರಿಂದಲೂ ಈ ರೀತಿಯ ಚರ್ಚೆಗಳು ನಡೆಯುತ್ತಲಿವೆ. ಆದರೆ ಯಾವುದಕ್ಕೂ ಸ್ಪಷ್ಟನೆ ಇಲ್ಲ. ವರದಿಗಳ ಪ್ರಕಾರ, ಗಿಲ್ ಅವರು ಪ್ರಸ್ತುತ ತಮ್ಮ ಐಪಿಎಲ್ ತಂಡವಾದ ಗುಜರಾತ್ ಟೈಟನ್ಸ್‌ನ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಮುಂಬೈನ ಉದ್ಯಮಿಯ ಮೊಮ್ಮಗಳಾದ ಸಾನಿಯಾ ಚಂದೋಕ್ ಅವರ ವಿವಾಹವು ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತು. ಸಾನಿಯಾ ಅವರು ಸಚಿನ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಆಪ್ತ ಸ್ನೇಹಿತೆಯಾಗಿದ್ದರು. ಅರ್ಜುನ್ ಮತ್ತು ಸಾನಿಯಾ ಪರಸ್ಪರ ಪ್ರೀತಿಸುತ್ತಿದ್ದು, ಎರಡು ಕುಟುಂಬದವರ ಒಪ್ಪಿಗೆಯೊಂದಿಗೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.












Click it and Unblock the Notifications