ಅಮ್ಮನ ಜನ್ಮದಿನಕ್ಕೆ ನರೇಂದ್ರ ಮೋದಿ ಸ್ಮರಿಸಿದ್ದ ಬಾಲ್ಯಸ್ನೇಹಿತ ಅಬ್ಬಾಸ್ ಯಾರು?
ನವದೆಹಲಿ, ಜೂನ್ 20: ಅಪ್ಪಟ ಸ್ನೇಹ ಮತ್ತು ಬಾಂಧವ್ಯಕ್ಕೆ ಜಾತಿ ಧರ್ಮ ಲಿಂಗ ವರ್ಣಗಳ ಭೇದ ಇರುವುದಿಲ್ಲ ಎಂಬುದಕ್ಕೆ ನರೇಂದ್ರ ಮೋದಿ ಜೀವನದಲ್ಲಿ ಒಂದು ನಿದರ್ಶನ ಇದೆ. ಅದೇ ನರೇಂದ್ರ ಮೋದಿ ಅವರ ಕುಟುಂಬ ಮತ್ತು ಅಬ್ಬಾಸ್ ನಡುವಿನ ಬಾಂಧವ್ಯ. ಮೋದಿ ತಾಯಿ ಹೀರಾಬೆನ್‌ರ ಜನ್ಮದಿನದಂದು ಅಬ್ಬಾಸ್ ಹೆಸರು ಜನಜನಿತವಾಗಿ ಹೋಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಮೊನ್ನೆಯಷ್ಟೇ ಶತಾಯುಷಿ ವರ್ಷಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಮೋದಿ ಜೂನ್ 18ರಂದು ತಮ್ಮ ವೆಬ್‌ಸೈಟ್‌ನ ಬ್ಲಾಗ್ ಪೇಜ್‌ನಲ್ಲಿ ತಮ್ಮ ತಾಯಿಗೆ ಗೌರವಾರ್ಪಣೆಯಾಗಿ ಲೇಖನ ಬರೆದಿದ್ದರು. ಆ ಲೇಖನದಲ್ಲಿ ಅಬ್ಬಾಸ್ ಅವರನ್ನು ನರೇಂದ್ರ ಮೋದಿ ಸ್ಮರಿಸಿದ್ದಾರೆ. ಅಬ್ಬಾಸ್‌ನ ತಂದೆ ನಿಧನರಾದ ಬಳಿಕ ಅವರು ವಡನಗರ್‌ನಲ್ಲಿದ್ದ ನರೇಂದ್ರ ಮೋದಿ ಅವರ ಮನೆಯಲ್ಲೇ ಇದ್ದು ವಿದ್ಯಾಭ್ಯಾಸ ನಡೆಸಿದ್ದರಂತೆ. ಹಾಗಂತ ಮೋದಿ ತಮ್ಮ ನೆನಪಿನ ಬುತ್ತಿಯಿಂದ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಮೋದಿ ಬರೆದದ್ದೇನು?
"ನನ್ನ ತಂದೆ ಆಪ್ತ ಸ್ನೇಹಿತರೊಬ್ಬರು ಸಮೀಪದ ಊರಿನಲ್ಲೇ ಇದ್ದರು. ಅವರು ಅಕಾಲಿಕ ಮರಣ ಅಪ್ಪಿದಾಗ ಅವರ ಮಗ ಅಬ್ಬಾಸ್‌ರನ್ನು ನನ್ನ ತಂದೆ ಮನೆಗೆ ಕರೆತಂದರು. ಅವರು ನಮ್ಮೊಂದಿಗೇ ಇದ್ದು ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ನನ್ನ ತಾಯಿ ನಮ್ಮೆಲ್ಲಾ ಕುಟುಂಬ ಸದಸ್ಯರನ್ನು ಹೇಗೆ ನೋಡಿಕೊಳ್ಳುತ್ತಿದ್ದರೋ ಅದೇ ರೀತಿಯ ಪ್ರೀತಿ, ಅಕ್ಕರೆಯಿಂದ ಅಬ್ಬಾಸ್‌ರನ್ನು ಕಾಣುತ್ತಿದ್ದರು. ಈದ್ ಹಬ್ಬ ಬಂದಾಗೆಲ್ಲಾ ಅಬ್ಬಾಸ್‌ಗೆ ಪ್ರಿಯವಾದ ತಿಂಡಿಗಳನ್ನು ಮಾಡಿಕೊಡುತ್ತಿದ್ದರು" ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಯಾರು ಈ ಅಬ್ಬಾಸ್?
ನರೇಂದ್ರ ಮೋದಿ ತಂದೆ ದಾಮೋದರದಾಸ್ ಮೋದಿ ಅವರ ಸ್ನೇಹಿತ ಮಿಯಾನ್‌ಭಾಯ್ ರಾಮಸದಾ ಎಂಬುವರ ಮಗ ಅಬ್ಬಾಸ್. ಮಿಯಾನ್‌ಭಾಯ್ ಸಾವನ್ನಪ್ಪಿದಾಗ ದಾಮೋದರದಾಸ್ ಅವರೇ ಖುದ್ದಾಗಿ ತಮ್ಮ ಸ್ನೇಹಿತನ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಅಬ್ಬಾಸ್‌ರನ್ನು ತಮ್ಮ ಮನೆಯಲ್ಲಿಟ್ಟುಕೊಳ್ಳುವುದಾಗಿ ಹೇಳಿ ಒಪ್ಪಿಸಿ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದರು.
ಅಬ್ಬಾಸ್ ಹತ್ತನೇ ತರಗತಿ ಮುಗಿಸುವವರೆಗೂ ನರೇಂದ್ರ ಮೋದಿ ಅವರ ಮನೆಯಲ್ಲೇ ಇದ್ದರು. ನರೇಂದ್ರ ಮೋದಿ ಅವರ ಸಹೋದರ ಪಂಕಜ್ ಮೋದಿ ಮತ್ತು ಅಬ್ಬಾಸ್ ಇಬ್ಬರೂ ಸಹಪಾಠಿಗಳಾಗಿದ್ದರು. ಕುತೂಹಲ ಎಂದರೆ ಇಬ್ಬರೂ ಕೂಡ ಮುಂದೆ ಸರಕಾರಿ ನೌಕರಿ ಪಡೆದರು. ಪಂಕಜ್ ಮೋದಿ ಮಾಹಿತಿ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರೆ, ಅಬ್ಬಾಸ್‌ಗೆ ನಾಗರಿಕ ಸರಬರಾಜು ಇಲಾಖೆಯಲ್ಲಿ ಕೆಲಸ ಸಿಕ್ಕಿತು.
This is #Abbas Bhai, whom PM @narendramodi mentioned in his blog today. Abbasbhai has retired from Gujarat govt s food and civil supplies department and lives in #Sidney #Australia with his family. PM Modi recalled him in his blog that he wrote on his mother's 100th birthday. pic.twitter.com/ur60eiphkw
— Deepal.Trivedi #Vo! (@DeepalTrevedie) June 18, 2022
ಈಗೆಲ್ಲಿದ್ದಾರೆ ಅಬ್ಬಾಸ್?
ಭಾರತಸ ಸರಕಾರಿ ಉದ್ಯೋಗದಿಂದ ನಿವೃತ್ತರಾಗಿರುವ ಅಬ್ಬಾಸ್ ಸದ್ಯ ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ತಮ್ಮ ಮಗನ ಜೊತೆ ಇದ್ದಾರೆ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಬಂದು ಅವರನ್ನು ಭೇಟಿಯಾಗಿದ್ದರು. ಇಬ್ಬರೂ ಕೂಡ ಬಹಳ ಹೊತ್ತು ಮಾತನಾಡಿದರೆಂದು ಹೇಳಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಬ್ಬಾಸ್ ಒಂದು ಪುಟ್ಟ ಪುಸ್ತಕ ಬರೆದಿದ್ದಾರೆ. ಅದರಲ್ಲಿ ತಮ್ಮ ಜೀವನ ಮತ್ತು ವೃತ್ತಿಯಲ್ಲಿ ನರೇಂದ್ರ ಮೋದಿ ಕುಟುಂಬದ ಪಾತ್ರ ಎಷ್ಟು ಮಹತ್ವದಿತ್ತು ಎಂದು ವಿವರಿಸಿದ್ದಾರಂತೆ.
ನರೇಂದ್ರ ಮೋದಿ ಅವರು ತಮ್ಮ ಬ್ಲಾಗ್‌ನಲ್ಲಿ ಅಬ್ಬಾಸ್ ಬಗ್ಗೆ ಬರೆದಾಗ ಅವರು ಯಾರು ಎಂಬುದು ಎಲ್ಲರಿಗೂ ಪ್ರಶ್ನೆಯಾಗಿತ್ತು. ಪತ್ರಕರ್ತೆ ದೀಪಾಲ್ ತ್ರಿವೇದಿ ಎಂಬುವವರು ಅಬ್ಬಾಸ್ ಭಾಯ್ ಅವರ ಫೋಟೋ ಲಗತ್ತಿಸಿ ಅವರ ಇರುವಿಕೆಯ ವಿವರ ನೀಡಿ ಟ್ವೀಟ್ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications