ಜೀವದ ಗೆಳೆಯ ಅಂಬರೀಶ್ ಬಗ್ಗೆ ರಜನೀಕಾಂತ್ ಹೇಳಿದರು ಮುತ್ತಿನಂತಾ ಮಾತು
ಬೆಂಗಳೂರು, ನವೆಂಬರ್ 25: ಅಂಬರೀಶ್ ಅವರಂತಹಾ ನಟರು ಹಲವರು ಸಿಗಬಹದು ಆದರೆ ಅವರಂತ ಹೃದಯವಂತ ವ್ಯಕ್ತಿ ಮತ್ತೊಬ್ಬರು ಸಿಗಲಾರರು ಎಂದು ರಜನೀಕಾಂತ್ ಕಣ್ಣೀರು ಹಾಕಿದರು.
ಜೀವದ ಗೆಳೆಯ ಅಂಬರೀಶ್ ನಿಧನದ ಬಗ್ಗೆ ರಜನೀಕಾಂತ್ ಭಾವುಕರಾಗಿ ಮಾತನಾಡಿದರು. ನನ್ನದು, ಅವನದ್ದು 30 ವರ್ಷಗಳ ಸ್ನೇಹ ಎಂದ ರಜನೀಕಾಂತ್ ಏಕವಚನದಲ್ಲಿಯೇ ತಮ್ಮ ಸ್ನೇಹದ ಬಗ್ಗೆ ಹೃದಯ ತುಂಬಿ ಮಾತನಾಡಿದರು.
ಪ್ರತಿ ಬಾರಿ ಕರ್ನಾಟಕಕ್ಕೆ ಬಂದಾಗ ಅಂಬರೀಶ್ ಮನೆಯಲ್ಲಿ ಊಟ ಮಾಡದೇ ಹೋಗುತ್ತಿರಲಿಲ್ಲ. ಕಲ್ಮಶವೇ ಇಲ್ಲದಂತಹಾ ಸ್ನೇಹ ಅವನದ್ದು ಅವನಂತಹಾ ಆತ್ಮೀಯತೆ ಮತ್ತೆ ಸಿಗುವುದಿಲ್ಲ ಎಂದು ರಜನೀ ನೆನೆಸಿಕೊಂಡರು.

ಒಂದು ವಾರದ ಹಿಂದೆ ಬೆಂಗಳೂರಿಗೆ ಬಂದಿದ್ದೆ ಆದರೆ ಅಂಬರೀಶ್ ಮನೆಗೆ ಹೋಗಲಾಗಲಿಲ್ಲ. ನನಗೆ ಕರೆ ಮಾಡಿದ್ದ ಅಂಬಿ, ಮುಂದಿನ ಬಾರಿ ಮನೆಗೆ ಬರದಿದ್ದರೆ ಕೊಂದು ಬಿಡುತ್ತೇನೆ ಎಂದು ಪ್ರೀತಿಯಿಂದ ಗದರಿಸಿದ್ದರು ಎಂದು ಹೇಳಿದ ರಜನೀಕಾಂತ್‌ಗೆ ದುಖಃ ತಡೆಹಿಡಿಲಾಗಲಿಲ್ಲ.











Click it and Unblock the Notifications