ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ನಾಲ್ಕು ದೇಶಗಳ ಪ್ರವಾಸ ಇಂದಿನಿಂದ ಆರಂಭ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮೇ 29: ದ್ವಿಪಕ್ಷೀಯ ಸಂಬಂಧ ವೃದ್ಧಿ ಹಾಗೂ ಬಂಡವಾಳ ಹೂಡಿಕೆಯ ಗುರಿ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನಾಲ್ಕು ದೇಶಗಳ ಪ್ರವಾಸ ಆರಂಭಿಸಿದ್ದಾರೆ. ಇಂದು ಪ್ರವಾಸ ಆರಂಭವಾಗಿದ್ದು ಅವರು ಜರ್ಮನಿ, ಸ್ಪೇನ್, ರಷ್ಯಾ ಹಾಗೂ ಫ್ರಾನ್ಸ್ ಗೆ ಭೇಟಿ ನೀಡಲಿದ್ದಾರೆ.

ಪ್ರವಾಸಕ್ಕೂ ಮೊದಲು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ಈ ದೇಶಗಳ ಪ್ರವಾಸ ಭಾರತದ ಆರ್ಥಿಕ ವ್ಯವಹಾರಗಳಿಗೆ ಉತ್ತೇಜನ ನೀಡಲಿದೆ. ಜತೆಗೆ ಹೆಚ್ಚಿನ ಹೂಡಿಕೆಯನ್ನೂ ಭಾರತದತ್ತ ಸೆಳೆಯಲಿದೆ," ಎಂದಿದ್ದಾರೆ.[ಮನ್ ಕೀ ಬಾತ್: ರಂಜಾನ್ ಶುಭಾಶಯ ಕೋರಿದ ಪ್ರಧಾನಿ ಮೋದಿ]

PM Modi begins four nation tour: What you should know about these crucial visits

ಇಂದು ಜರ್ಮನಿಯಿಂದ ಪ್ರವಾಸ ಆರಂಭವಾಗಲಿದೆ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜತೆಗೆ ಅಧ್ಯಕ್ಷ ಫ್ರಾಂಕ್ ವಾಲ್ಟರ್ ಸ್ಟೆಯ್ನ್'ಮರ್ ಜತೆಗೂ ಮಾತುಕತೆ ನಡೆಸಲಿದ್ದಾರೆ.

"ಭಾರತದ ಅಭಿವೃದ್ಧಿಗೆ ಜರ್ಮನಿಯ ಪಾತ್ರ ಪ್ರಮುಖವಾದುದು. ಭಾರತದ ಬದಲಾವಣೆಯ ನನ್ನ ಆಲೋಚನೆಗೆ ಜರ್ಮನಿ ಸರಿ ಹೊಂದುತ್ತದೆ," ಎಂದು ಪ್ರಧಾನಿ ಫೇಸ್ಬುಕ್ಕಿನಲ್ಲಿ ಹೇಳಿದ್ದಾರೆ.[ಫೇಸ್ಬುಕ್ ನಲ್ಲಿ ವಿಶ್ವಕ್ಕೆ ನಮ್ಮ ಮೋದಿನೇ ನಂಬರ್ 1]

ಅವರು ಮಂಗಳವಾರ ಸ್ಪೇನಿಗೆ ಭೇಟಿ ನೀಡಲಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಸ್ಪೇನಿಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. ಇಲ್ಲಿ ರಾಜ ಫಿಲಿಪ್ VI ಮತ್ತು ಅಧ್ಯಕ್ಷ ಮರಿಯಾನೋ ರಾಜೋಯ್ ಜತೆ ಹಣಕಾಸು ಹಾಗೂ ಭಯೋತ್ಪಾದನೆ ವಿಚಾರಗಳನ್ನು ಪ್ರಧಾನಿ ಚರ್ಚಿಸಲಿದ್ದಾರೆ. ಇದಲ್ಲದೆ ಉದ್ಯಮಿಗಳನ್ನೂ ಮೋದಿ ಭೇಟಿಯಾಗಲಿದ್ದು ಭಾರತದಲ್ಲಿ ಬಂದು ಬಂಡವಾಳ ಹೂಡುವಂತೆ ಆಹ್ವಾನಿಸಲಿದ್ದಾರೆ. "ಭಾರತ-ಸ್ಪೇನ್ ಹಣಕಾಸು ಸಂಬಂಧ ವೃದ್ಧಿಯನ್ನು ತಾವು ಎದುರು ನೋಡುತ್ತಿರುವುದಾಗಿ," ಪ್ರಧಾನಿ ಹೇಳಿದ್ದಾರೆ.[ಮೋದಿ ಅವರ ವಿದೇಶಿ ಪ್ರವಾಸ ಮತ್ತೆ ಆರಂಭ!]

ಇನ್ನು ಮೇ 31ರಿಂದ ಜೂನ್ 2ರವರೆಗೆ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಇರಲಿದ್ದಾರೆ. ಎರಡೂ ದೇಶಗಳು ತಮ್ಮ ರಾಜತಾಂತ್ರಿಕ ಸಂಬಂಧದ 70 ನೇ ವರ್ಷದ ಸಂಭ್ರಮಾಚರಣೆ ಮಾಡಲಿವೆ. ಜೂನ್ 2ರಂದು ಪ್ರಧಾನಿ ಮೋದಿ ಹಾಗೂ ವ್ಲಾದಿಮೀರ್ ಪುಟಿನ್ ಸೈಂಟ್ ಪೀಟರ್ಸ್ ಬರ್ಗ್ ಹಣಕಾಸು ವೇದಿಕೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಷ್ಯಾದ ರಾಜ್ಯಗಳ ಗವರ್ನರ್ ಗಳ ಜತೆಯೂ ಮೋದಿ ವಿವರವಾದ ಮಾತುಕತೆ ನಡೆಸಲಿದ್ದಾರೆ.

ತಮ್ಮ ಪ್ರವಾಸದ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಅವಧಿಗೆ ಫ್ರಾನ್ಸ್ ಗೆ ಭೇಟಿ ನೀಡಲಿದ್ದಾರೆ. ಜೂನ್ 3ರಂದು ನೂತನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಜತೆ ಪ್ರಧಾನಿ ಚರ್ಚೆ ನಡೆಯಲಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸುಧಾರಣೆ ಹಾಗೂ ಭಾರತದ ಶಾಶ್ವತ ಸದಸ್ಯತ್ವ ಕುರಿತು ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. ಅಂತರಾಷ್ಟ್ರೀಯ ಸೋಲಾರ್ ಒಕ್ಕೂಟ, ಭಯೋತ್ಪಾದನೆ ನಿಗ್ರಹ, ಹವಾಮಾನ ಬದಲಾವಣೆ ಮುಂತಾದ ವಿಚಾರಗಳೂ ಚರ್ಚೆಯ ವಿಷಯಗಳ ಪಟ್ಟಿಯಲ್ಲಿವೆ.

English summary
Prime Minister Narendra Modi has begun a four-nation tour today to boost bilateral relations and seek investment. Over the next six days, Modi will visit Germany, Spain, Russia and France.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X