ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೇಷ್ಯಾ ವಿಮಾನ ಸಮುದ್ರಕ್ಕೆ ಬಿದ್ದಿಲ್ಲ; ಹೈಜಾಕ್ ಆಗಿದೆ?

By Srinath
|
Google Oneindia Kannada News

ಕೌಲಾಲಂಪುರ,ಮಾರ್ಚ್ 10: ಕಳೆದ ಶನಿವಾರ ಬೆಳಗಿನ ಜಾವ 239 ಪ್ರಯಾಣಿಕರಿದ್ದ ಮಲೇಷಿಯಾದ ಬೋಯಿಂಗ್ ವಿಮಾನ ನಾಪತ್ತೆ ಪ್ರಕರಣ ನಿಗೂಢವಾಗಿ ಸಾಗುತ್ತಿದೆ. ಮೊದಲು, ವಿಮಾನವು ಕಣ್ಮರೆಯಾಗಿ ಸಮುದ್ರದೊಳಕ್ಕೆ ಬಿದ್ದಿದೆ ಎನ್ನಲಾಗಿತ್ತು. ಆದರೆ ತಾಜಾ ವರದಿಗಳ ಪ್ರಕಾರ ವಿಮಾನವು ಎಲ್ಲೂ ಅಪಘಾತಕ್ಕೀಡಾಗಿಲ್ಲ. ಅದರನ್ನು ಅಪಹರಿಸಲಾಗಿದೆ ಎನ್ನಲಾಗಿದೆ.

ಕೌಲಾಲಂಪುರದಿಂದ ಚೀನಾದ ಬೀಜಿಂಗ್ ಗೆ ಹೊರಟಿದ್ದ ಬೃಹತ್ ವಿಮಾನವನ್ನು ಭಯೋತ್ಪಾದಕರು ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕ ಈ ಬಗ್ಗೆ ತನಿಖೆಗೆ ಇಳಿದಿದೆ. ಇಬ್ಬರು ಪ್ರಯಾಣಿಕರು ಕಳವು ಮಾಡಿರುವ ಪಾಸ್ ಪೋರ್ಟ್ ಬಳಸಿ, ಪ್ರಯಾಣ ಮಾಡುತ್ತಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ. ಈ ಇಬ್ಬರು ಪ್ರಯಾಣಿಕರು ಇಟಲಿ ಮತ್ತು ಆಸ್ಟ್ರೇಲಿಯಾ ಪ್ರಜೆಗಳ ಪಾಸ್ ಪೋರ್ಟ್ ಕಳವು ಮಾಡಿದ್ದರು. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Malaysia Airlines Boeing plane missing - Phone of a passenger rings mysteriously
ಪ್ರಯಾಣಿಕರ ಮೊಬೈಲ್ ಕರೆ ನಿಗೂಢ: ಈ ಮಧ್ಯೆ ಮಲೇಷಿಯಾದ ಬೋಯಿಂಗ್ ವಿಮಾನದ ಪ್ರಯಾಣಿಕರೊಬ್ಬರು ತಮ್ಮ ಕುಟುಂಬದವರಿಗೆ ಮೊಬೈಲ್ ಮೂಲಕ ದೂರವಾಣಿ ಕರೆ ಮಾಡಿದ್ದಾರೆ ಎಂಬ ಮಾಹಿತಿಯೂ ಇದೆ. ಆದರೆ, ವಿಮಾನವು ಸಮುದ್ರದೊಳಕ್ಕೆ ಬಿದ್ದಿರುವುದು ಖಚಿತ ಪಟ್ಟಿದೆ. ವಿಮಾನದ ಅವಶೇಷಗಳು ಒಂದೊಂದಾಗಿ ಪತ್ತೆಯಾಗುತ್ತಿವೆ ಎಂದೂ ಮೂಲಗಳು ತಿಳಿಸಿವೆ.
Malaysia Airlines Boeing plane missing

ಪೂನಾದಲ್ಲಿ ವಾಸವಾಗಿದ್ದ 45 ಮಹಿಳೆಯೊಬ್ಬರು ನತದೃಷ್ಟ Malaysian Airlines flight MH370 ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಚಿತ್ರದಲ್ಲಿ, ತಮ್ಮ ಪುತ್ರನೊಂದಿಗಿರುವ MSc ಪದವೀಧರೆ 44 ವರ್ಷದ ಕ್ರಾಂತಿ ಶಿರಾಸತ್ ಅವರನ್ನು ಮೇಲಿನ ಚಿತ್ರದಲ್ಲಿ ಕಾಣಬಹುದು.

Boeing B777-200 ವಿಮಾನ ಸಂಸ್ಥೆಯ Flight MH 370 ವಿಮಾನವು ಕೌಲಾಲಂಪುರದಿಂದ ಶುಕ್ರವಾರ ಮಧ್ಯರಾತ್ರಿ 12.21ಕ್ಕೆ ತೆರಳಿತ್ತು. ಶನಿವಾರ ಬೆಳಗ್ಗೆ 6.30ಕ್ಕೆ ಬೀಜಿಂಗ್ ತಲುಪಬೇಕಿತ್ತು. ಆದರೆ ಪ್ರಯಾಣ ಆರಂಭಿಸಿದ 2 ಗಂಟೆಗಳ ತರುವಾಯ ಬೆಳಗಿನ ಜಾವ 2.40ರಲ್ಲಿ ಸಂಪರ್ಕ ಕಳೆದುಕೊಂಡಿದೆ.

English summary
While reports are rife that debris of the missing Boeing 777, which went off the air traffic radar on Saturday, have been spotted, investigators probing its sudden disappearance are facing yet another mystery. The family member of one of the missing passengers aboard the plane got through his mobile phone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X