• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Breaking News: ರೇಪ್ ಕೇಸ್, ಎಐಎಡಿಎಂಕೆ ಮಾಜಿ ಸಚಿವ ಬಂಧನ

|
Google Oneindia Kannada News

ಬೆಂಗಳೂರು, ಜೂನ್ 20: ಎಐಎಡಿಎಂಕೆ ಮಾಜಿ ಸಚಿವ ಎಂ ಮಣಿಕಂಠನ್ ಅವರನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿಂದು ಬಂಧಿಸಿರುವ ಸುದ್ದಿ ಬಂದಿದೆ.

   Tamil Nadu ಮಾಜಿ ಸಚಿವ ಬೆಂಗಳೂರಿನಲ್ಲಿ ಅರೆಸ್ಟ್ | Oneindia Kannada

   ಮಲೇಷ್ಯಾದ ಮಹಿಳೆಯೊಬ್ಬರನ್ನು ವಂಚಿಸಿ, ಅತ್ಯಾಚಾರ ಎಸಗಿದ ಆರೋಪ ಹೊತ್ತುಕೊಂಡಿದ್ದಾರೆ. ಮಣಿಕಂಠನ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಪಕ್ಕಕ್ಕೆ ತಳ್ಳಿತ್ತು.

   ಅಡ್ಯಾರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐಪಿಸಿ ಸೆಕ್ಷನ್ 376, 323, 417, 323, 506, ಐಟಿ ಕಾಯ್ದೆಯಡಿಯಲ್ಲಿ ಮಣಿಕಂಠನ್ ವಿರುದ್ಧ ಪ್ರಕರಣ ದಾಖಲಾಗಿದೆ.

   ''ಕಳೆದ ಐದು ವರ್ಷಗಳಿಂದ ನಾನು ಲಿವ್ ಇನ್ ಸಂಬಂಧದಲ್ಲಿದ್ದೆ, ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ, ಮೂರು ಬಾರಿ ಗರ್ಭಧರಿಸಿದ್ದೆ, ಬಲವಂತವಾಗಿ ಗರ್ಭಪಾತ ಮಾಡಿಸಿದರು,'' ಎಂದು ಮಲೇಷ್ಯಾ ಮೂಲದ ಭಾರತೀಯ ಮಹಿಳೆ ಶಾಂತಿನಿ ದೇವಾ(theva) ಆರೋಪಿಸಿದ್ದಾರೆ.

   ಎಐಎಡಿಎಂಕೆ ಸರ್ಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿದ್ದ ಮಣಿಕಂಠನ್‌ಗೆ 2017ರಲ್ಲಿ ಶಾಂತಿನಿ ಪರಿಚಯವಾಗಿದೆ. ದಕ್ಷಿಣ ಏಷ್ಯಾದ ಪ್ರವಾಸಿ ರಾಯಭಾರಿಯಾಗಿದ್ದ ಶಾಂತಿನಿಗೆ ಮಲೇಷ್ಯಾದಲ್ಲಿ ಹೂಡಿಕೆ ಸಂಬಂಧ ಮಾತುಕತೆ ಮಾಡಲು ಮಣಿಕಂಠನ್ ಕರೆಸಿಕೊಂಡಿದ್ದರು.

   ರಾಮನಾಥಪುರಂ ಕ್ಷೇತ್ರದಿಂದ 2016ರಿಂದ 2019ರ ತನಕ ಶಾಸಕರಾಗಿ ಆಯ್ಕೆಯಾಗಿರುವ ಮಣಿಕಂಠನ್ ಈಗಾಗಲೇ ಮದುವೆಯಾಗಿದೆ. ಆದರೂ ಶಾಂತಿನಿ ಜೊತೆ ಮಣಿಕಂಠನ್ ಲಿವ್ ಇನ್ ಸಂಬಂಧದಲ್ಲಿದ್ದರು. ಮದುವೆಯಾಗುವಂತೆ ಬೇಡಿಕೆ ಒಡ್ಡಿದರೆ, ಬೆದರಿಕೆ ಹಾಕುತ್ತಿದ್ದರು ಎಂದು ಶಾಂತಿನಿ ಆರೋಪ ಮಾಡಿದ್ದಾರೆ.

   English summary
   Ex-AIADMK Minister M.Manikandan arrest in Bengaluru by Chennai police. Manikandan facing Rape case filed by Malaysian -Indian women.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X