Fact check: ಅಸ್ಸಾಂ ಪ್ರವಾಹದ ನಡುವೆ ತೇಲುವ ಹಾಸಿಗೆಯ ಮೇಲೆ ವ್ಯಕ್ತಿ ಮಲಗಿದ್ದಾರಾ?
ಅಸ್ಸಾಂನಲ್ಲಿ ಮಳೆಯ ಅರ್ಭಟ ಜೋರಾಗಿದ್ದು ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಅಸ್ಸಾಂನ ವಿಡಿಯೋಗಳು ಮತ್ತು ಫೋಟೋಗಳು ಹರಿದಾಡುತ್ತಿವೆ. ಇದರ ಮಧ್ಯೆ, ಕೆಸರಿನ ನೀರಿನಲ್ಲಿ ತೇಲುತ್ತಿರುವಾಗ ಹಾಸಿಗೆಯ ಮೇಲೆ ಮಲಗಿರುವ ವ್ಯಕ್ತಿಯೊಬ್ಬನ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಜೊತೆಗೆ ಇದು ಅಸ್ಸಾಂನ ವಿಡಿಯೋ ಎಂದು ಹೇಳಿಕೊಳ್ಳಲಾಗುತ್ತಿದೆ.
ಇಂಡಿಯಾ ಟುಡೇಯ ಫೇಕ್ ನ್ಯೂಸ್ ವಾರ್ ರೂಮ್ (AFWA) ಈ ವಿಡಿಯೋ ಅಸ್ಸಾಂನದ್ದು ಅಲ್ಲ, ಜೊತೆಗೆ ಭಾರತದಿಂದಲೂ ಬಂದಿದ್ದಲ್ಲ ಎಂದು ಕಂಡುಹಿಡಿದಿದೆ. ಇದನ್ನು ಜನವರಿ 2021 ರಲ್ಲಿ ಮಲೇಷ್ಯಾದ ಜೋಹರ್ ಬಹ್ರುದಲ್ಲಿ ಪ್ರವಾಹದ ಸಮಯದಲ್ಲಿ ಚಿತ್ರೀಕರಿಸಲಾಗಿದೆ.
ಜನವರಿ 13, 2021 ರಂದು ಮಲಯ ಭಾಷೆಯ ಸುದ್ದಿ ವೆಬ್‌ಸೈಟ್ mStar ವೈರಲ್ ವಿಡಿಯೋವನ್ನು ವರದಿ ಮಾಡಿದೆ. ವರದಿಯ ಪ್ರಕಾರ, ವೈರಲ್ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿ ಮಲೇಷ್ಯಾದ ಜೋಹರ್ ಬಹ್ರು ಮೂಲದ ಮುಹಮ್ಮದ್ ಫಾರಿಸ್ ಸುಲೈಮಾನ್ ಎಂದು ತಿಳಿದು ಬಂದಿದೆ.

ಸುಲೈಮಾನ್ ಜನವರಿ 10, 2021 ರಂದು Instagram ನಲ್ಲಿ "ನಾನು ದಣಿದಿದ್ದರೆ ಎಲ್ಲಿಯಾದರೂ ಮಲಗಬಹುದು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ವಿಡಿಯೋ ಕೂಡ ವೈರಲ್ ಆಗಿತ್ತು. ವಿಡಿಯೋವನ್ನು ನಂತರ mStar ತನ್ನ Instagram ಪುಟದಲ್ಲಿ ಹಂಚಿಕೊಂಡಿದೆ.
ಜನವರಿ 2021 ರಲ್ಲಿ ಮಲೇಷ್ಯಾದ ಹಲವಾರು ಭಾಗಗಳು ಪ್ರವಾಹ ಕಂಡು ಬಂದಿದೆ. ವಿಡಿಯೋದ ಕುರಿತು ಮಾತನಾಡುತ್ತಾ, ಸುಲೈಮಾನ್ mStar ಗೆ ತನ್ನ ಮನೆಯು ಪ್ರವಾಹಕ್ಕೆ ಸಿಲುಕಿದ ಕಾರಣ ಮತ್ತು ತನ್ನ ಹತಾಶೆಯನ್ನು ಹೊರಹಾಕಲು ಬಯಸಿದ್ದರಿಂದ ನೀರಿನ ಮೇಲೆ ತೇಲುತ್ತಿರುವ ಹಾಸಿಗೆಯ ಮೇಲೆ ಮಲಗುವ ಮೂಲಕ ವಿಡಿಯೋ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಅವರ ತಾಯಿಯೇ ಚಿತ್ರೀಕರಿಸಿದ್ದಾರೆ ಎಂದು ಹೇಳಿದ್ದಾರೆ. ಪ್ರಕೃತಿ ವಿಕೋಪವನ್ನು ಎದುರಿಸುತ್ತಿರುವಾಗ ಇತರರಿಗೆ ಮನರಂಜನೆ ನೀಡಿದ ಖುಷಿಯೂ ಇದೆ ಎಂದಿದ್ದಾರೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ ದಕ್ಷಿಣ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ದಿಮಾ ಹಸಾವೊ ಮತ್ತು ಲಖಿಂಪುರ ಜಿಲ್ಲೆಗಳಲ್ಲಿ ಭೂಕುಸಿತದಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಪ್ರಸ್ತುತ, ರಾಜ್ಯದ 26 ಜಿಲ್ಲೆಗಳು ಪ್ರವಾಹವನ್ನು ಅನುಭವಿಸುತ್ತಿವೆ. ಹೀಗಾಗಿ ಈ ವೈರಲ್ ವಿಡಿಯೋ ನಿಸ್ಸಂದೇಹವಾಗಿ ಅಸ್ಸಾಂನಲ್ಲಿ ತೆಗೆದಿರೋದು ಅಲ್ಲ.

Fact Check
ಕ್ಲೇಮು
ಅಸ್ಸಾಂ ಪ್ರವಾಹದ ನಡುವೆ ತೇಲುವ ಹಾಸಿಗೆಯ ಮೇಲೆ ವ್ಯಕ್ತಿ ಮಲಗಿದ್ದಾರೆಂದು ವಿಡಿಯೋ ವೈರಲ್.
ಪರಿಸಮಾಪ್ತಿ
ಮಲೇಷ್ಯಾದ ವೈರಲ್ ವಿಡಿಯೋಕ್ಕೆ ಅಸ್ಸಾಂ ಪ್ರವಾಹ ಲಿಂಕ್ ಮಾಡಿ ವಿಡಿಯೋ ಹಂಚಿಕೊಳ್ಳಲಾಗಿದೆ.
Rating
-
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications