ಕಳೆದು ಹೋದ ಮೊಬೈಲ್ ಮತ್ತೆ ಸಿಕ್ತು,ಗ್ಯಾಲರಿಯಲ್ಲಿತ್ತು ಮಂಗಗಳ ಸೆಲ್ಫಿ
ಮಲೇಷಿಯಾ, ಸೆಪ್ಟೆಂಬರ್ 16: ಕಳೆದ ಹೋದ ಫೋನ್ ಮರಳಿ ಸಿಕ್ಕಾಗ, ಮೊಬೈಲ್ ಮಾಲೀಕನಿಗೆ ಅಚ್ಚರಿಯೊಂದು ಕಾದಿತ್ತು.
ಮೊಬೈಲ್‌ನಲ್ಲಿ ಮನುಷ್ಯರದ್ದಲ್ಲ ಬದಲಾಗಿ ಮಂಗಗಳ ಸೆಲ್ಫಿ ಇತ್ತು. ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಎಂದಾಕ್ಷಣ ಮಂಗಗಳ ರೀತಿ ಮುಖ ಮಾಡುವುದು, ನಾಲಿಗೆ ಹೊರಕ್ಕೆ ಚಾಚಿ ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯ ಆದರೆ ಇಲ್ಲಿ ನಿಜವಾಗಿ ಮಂಗಗಳೇ ಸೆಲ್ಫಿ ತೆಗೆದುಕೊಂಡಿವೆ.
ವ್ಯಕ್ತಿಯೊಬ್ಬ ನಿದ್ರಿಸುತ್ತಿದ್ದಾಗ ಪಕ್ಕದಲ್ಲಿದ್ದ ಮೊಬೈಲ್ ತೆಗೆದುಕೊಂಡು ಮಂಗಳಗಳು ಮರ ಹತ್ತಿದ್ದವು.ಆತಂಕಗೊಂಡ ಆತ ಎಲ್ಲೆಡೆ ಹುಡುಕಾಡಿದರೂ ಅದು ಸಿಗಲಿಲ್ಲ. ಆ ನಂತರ ಇನ್ನೊಂದು ಫೋನ್ನಿಂದ ಕಳೆದುಹೋದ ಫೋನ್ಗೆ ರಿಂಗ್ ಮಾಡಿದ್ದಾನೆ. ಆಗ ಅಲ್ಲಿಯೇ ಸಮೀಪವೇ ರಿಂಗ್ಟೋನ್ ಕೇಳಿದೆ. ಮಂಗವೊಂದು ಅದನ್ನು ಹಿಡಿದುಕೊಂಡಿತ್ತು.

ಮಂಗ ಓಡಿ ಹೋಗದಂತೆ ಬಹಳ ಕಷ್ಟಪಟ್ಟು, ಹರಸಾಹಸದಿಂದ ಅದರ ಕೈಯಲ್ಲಿದ್ದ ಫೋನ್ ಅನ್ನು ಪಡೆದುಕೊಳ್ಳುವಲ್ಲಿ ಯುವಕ ಯಶಸ್ವಿಯಾಗಿದ್ದಾನೆ. ಯುವಕನೊಬ್ಬನ ಕಳೆದುಹೋದ ಮೊಬೈಲ್ ವಾಪಸ್ ಸಿಕ್ಕಾಗ ಅದರಲ್ಲಿನ ಗ್ಯಾಲರಿ ಓಪನ್ ಮಾಡಿದಾಗ ಯುವಕ ಶಾಕ್ ಆಗಿದ್ದಾನೆ. ಏಕೆಂದರೆ ಅಲ್ಲಿಯೂ ಮಂಗನ ಮೂತಿಯ ಸೆಲ್ಫಿ ಕಂಡಿದೆ.

ಒಮ್ಮೆ ನೋಡಿದರೆ ಭಯಾನಕ ಎನಿಸುವಂತಿದ್ದ ಈ ಸೆಲ್ಫಿಯನ್ನು ಸೂಕ್ಷ್ಮವಾಗಿ ನೋಡಿದ ಯುವಕನಿಗೆ ತಿಳಿದದ್ದು ಇದು ನಿಜವಾಗಿಯೂ ಮಂಗ ಖುದ್ದು ತೆಗೆದುಕೊಂಡಿರುವ ಸೆಲ್ಫಿ ಎಂದು.
ಇದನ್ನು ಯುವಕ, ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಇದೀಗ ಅದು ಭಾರಿ ವೈರಲ್ ಆಗಿದೆ.












Click it and Unblock the Notifications