ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌ಎಎಲ್ ನಿರ್ಮಾಣದ ತೇಜಸ್ ಜೆಟ್‌ಗೆ ಬೆನ್ನು ಮಾಡಿತಾ ಮಲೇಷ್ಯಾ?

|
Google Oneindia Kannada News

ನವದೆಹಲಿ, ಸೆ. 16: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್‌)ನಿಂದ 18 ಎಲ್‌ಸಿಎ ತೇಜಸ್ ಫೈಟರ್ ಜೆಟ್‌ಗಳನ್ನು ಇನ್ನೇನು ಮಲೇಷ್ಯಾ ಕೊಂಡೇಬಿಟ್ಟಿತು ಎನ್ನುವಷ್ಟರಲ್ಲಿ ಕೈಬದಲಾಗಿ ಹೋಗಿದೆ. ದಕ್ಷಿಣ ಕೊರಿಯಾದ ಎಫ್-50 ಫೈಟರ್‌ಗಳನ್ನು ಖರೀದಿಸಲು ಮಲೇಷ್ಯಾ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಿದೆ ಎಂದು ಚೀನೀ ಮಾಧ್ಯಮದಲ್ಲಿ ವರದಿಯಾಗಿದೆ.

ಆದರೆ, ಈ ಬೆಳವಣಿಗೆ ಇನ್ನೂ ದೃಢಪಟ್ಟಿಲ್ಲ. ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ನಡುವೆ ಒಪ್ಪಂದಕ್ಕೆ ಇನ್ನೂ ಸಹಿ ಬಿದ್ದಿಲ್ಲ. ಹಾಂಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ ಎರಡೂ ದೇಶಗಳ ನಡುವಿನ ಮಾತುಕತೆ ಅಂತಿಮ ಹಂತಕ್ಕೆ ಬಂದಿದೆ. ದಕ್ಷಿಣ ಕೊರಿಯಾದಿಂದ 18 ಎಫ್‌ಎ-50 ಫೈಟರ್ ಜೆಟ್‌ಗಳನ್ನು ಖರೀದಿಸಲು ಮಲೇಷ್ಯಾ ನಿರ್ಧರಿಸಿರುವ ಸಾಧ್ಯತೆ ದಟ್ಟವಾಗಿದೆ ಎಂದು ಈ ಪತ್ರಿಕೆಯಲ್ಲಿ ತಿಳಿಸಲಾಗಿದೆ.

ಮಲೇಷ್ಯಾದಲ್ಲಿ ಎಚ್‌ಎಎಲ್‌ ಕಚೇರಿ ಆರಂಭಕ್ಕೆ ಒಡಂಬಡಿಕೆಮಲೇಷ್ಯಾದಲ್ಲಿ ಎಚ್‌ಎಎಲ್‌ ಕಚೇರಿ ಆರಂಭಕ್ಕೆ ಒಡಂಬಡಿಕೆ

ಅಮೆರಿಕದಂಥ ದೇಶವೇ ಭಾರತದ ಎಲ್‌ಸಿಎ ತೇಜಸ್ ಫೈಟರ್ ವಿಮಾನಗಳನ್ನು ಖರೀದಿಸಲು ಮುಂದಾಗಿರುವಾಗ ಮಲೇಷ್ಯಾ ತನ್ನ ನಿಲುವು ಬದಲಿಸಿರುವುದು ಅಚ್ಚರಿ ತಂದಿದೆ.

ಮಲೇಷ್ಯಾ ತನ್ನ ವೈಮಾನಿಕ ಬತ್ತಳಿಕೆಗೆ ಸೇರಿಸಲು ಫೈಟರ್ ಜೆಟ್‌ಗಳನ್ನು ಶೋಧಿಸಲು ಶುರು ಮಾಡಿದಾಗ ಹಲವು ದೇಶಗಳು ಯುದ್ಧವಿಮಾನಗಳನ್ನು ಮಾರಲು ಮುಂದಾಗಿದ್ದವು. ಭಾರತದ ತೇಜಸ್, ದಕ್ಷಿಣ ಕೊರಿಯಾದ ಎಫ್‌ಎ-50, ರಷ್ಯಾದ ಮಿಗ್-35, ಯಾಕ್-130, ಟರ್ಕಿಯ ಹುರ್ಜೆಟ್, ಚೀನಾದ ಜೆಎಫ್-17 ಮೊದಲಾದ ಯುದ್ಧವಿಮಾನಗಳ ಪಟ್ಟಿ ಮಲೇಷ್ಯಾ ಬಳಿ ಹೋಯಿತು. ಅಂತಿಮವಾಗಿ ಈ ಪಟ್ಟಿಯಲ್ಲಿ ಭಾರತ ಮತ್ತು ದಕ್ಷಿಣ ಕೊರಿಯಾದ ಯುದ್ಧವಿಮಾನಗಳು ಉಳಿದುಕೊಂಡಿವೆ.

ಕೊರಿಯಾ ಪಾಲು

ಕೊರಿಯಾ ಪಾಲು

ಎಚ್‌ಎಎಲ್‌ನಿಂದ ದೇಶೀಯವಾಗಿ ನಿರ್ಮಾಣವಾದ, ಬಹಳ ಹಗುರವಾದ ಮತ್ತು ಸಾಕಷ್ಟು ಸಾಮರ್ಥ್ಯ ಇರುವ ಎಲ್‌ಸಿಎ ತೇಜಸ್ ಫೈಟರ್ ಜೆಟ್ ಅನ್ನು ಮಲೇಷ್ಯಾ ಖರೀದಿಸಲು ಆರ್ಡರ್ ಕೊಟ್ಟಿದೆ ಎಂಬಂತಹ ಸುದ್ದಿ ಇತ್ತು. ಈಗ ಮಲೇಷ್ಯಾ ನಿರ್ಧಾರ ಬದಲಿಸಿರುವುದು ನಿಜವೇ ಆದಲ್ಲಿ ಭಾರತ ಮತ್ತು ಹೆಚ್‌ಎಎಲ್‌ಗೆ ಹಿನ್ನಡೆಯಂತಾಗಬಹುದು ಎಂಬುದು ತಜ್ಞರ ಅನಿಸಿಕೆ.

ಎಫ್‌ಎ-50 ಯುದ್ಧವಿಮಾನದ ತಯಾರಕ ಕೆಎಐ ಸಂಸ್ಥೆ ಕೂಡ ಇತ್ತೀಚೆಗೆ ಮಾಧ್ಯಮದೊಂದಿಗೆ ಮಾತನಾಡುತ್ತಾ, ಮಲೇಷ್ಯಾಗೆ ತಮ್ಮ ಫೈಟರ್ ಜೆಟ್ ಮಾರಾಟವಾಗಲಿರುವ ವಿಚಾರವನ್ನು ಹೊರಹಾಕಿದ್ದರು.

"ಮಲೇಷ್ಯಾದೊಂದಿಗೆ ಮಾತುಕತೆ ಮುಂದುವರಿದ ಹಂತಕ್ಕೆ ಹೋಗಿದೆ. ರಕ್ಷಣಾ ಉದ್ಯಮದಲ್ಲಿ ಎರಡೂ ದೇಶಗಳ ಮಧ್ಯೆ ದ್ವಿಪಕ್ಷೀಯ ಸಹಕಾರ ಇರುವುದು ಪರಸ್ಪರ ವಿಶ್ವಾಸದ ಸಂಕೇತವಾಗಿದೆ," ಎಂದು ಕೊರಿಯಾದ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೀದರ್: ಮೊದಲ ಬಾರಿಗೆ ಯುದ್ಧ ವಿಮಾನ ಹಾರಿಸಿದ ತಂದೆ- ಮಗಳುಬೀದರ್: ಮೊದಲ ಬಾರಿಗೆ ಯುದ್ಧ ವಿಮಾನ ಹಾರಿಸಿದ ತಂದೆ- ಮಗಳು

ಎಷ್ಟೆಷ್ಟು ಬೆಲೆ?

ಎಷ್ಟೆಷ್ಟು ಬೆಲೆ?

ಭಾರತ ಸೇರಿ ವಿವಿಧ ದೇಶಗಳ ಯುದ್ಧವಿಮಾನಗಳ ಬೆಲೆ ಪ್ರಸ್ತಾವ ಪಟ್ಟಿಯನ್ನು ಮಲೇಷ್ಯಾಗೆ ನೀಡಿರುವ ಪ್ರಕಾರ ಕೊರಿಯಾದ ಎಫ್ಎ-50 ಅತಿಹೆಚ್ಚು ಬೆಲೆ ಕೋಟ್ ಮಾಡಲಾಗಿದೆ.

ಪ್ರಸ್ತಾವಿತ ಬೆಲೆಗಳು (18 ವಿಮಾನಗಳಿಗೆ):
* ಎಫ್‌ಎ-50, ಕೊರಿಯಾ: 4.2 ಬಿಲಿಯನ್ ಆರ್‌ಎಂ (ಸುಮಾರು 7400 ಕೋಟಿ ರೂ)
* ತೇಜಸ್, ಭಾರತ: 3.75 ಬಿಲಿಯನ್ ಆರ್‌ಎಂ (6600 ಕೋಟಿ ರೂ)
* ಜೆಎಫ್-17, ಚೀನಾ: 3.4 ಬಿಲಿಯನ್ ಆರ್‌ಎಂ. (5987 ಕೋಟಿ ರೂ)

ಎಚ್‌ಎಎಲ್ ತಯಾರಿಸಿರುವ ತೇಜಸ್ ಎಲ್‌ಸಿಎಯ ಒಂದು ಯುದ್ಧವಿಮಾನ 28 ಮಿಲಿಯನ್ ಡಾಲರ್ (220 ಕೋಟಿ ರೂ) ಇದ್ದರೆ, ಕೊರಿಯನ್ ಯುದ್ಧವಿಮಾನದ ಬೆಲೆ ಒಂದಕ್ಕೆ 30 ಮಿಲಿಯನ್ (240 ಕೋಟಿ ರೂ) ಇದೆ.

ತೇಜಸ್ ವಿಶೇಷತೆಗಳು

ತೇಜಸ್ ವಿಶೇಷತೆಗಳು

ಎಚ್‌ಎಎಲ್ ನಿರ್ಮಾಣದ ತೇಜಸ್ ಎಲ್‌ಸಿಎ ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ಫೈಟರ್ ಜೆಟ್. ಬಹಳ ಹಗುರವಾದ ಸೂಪರ್‌ಸಾನಿಕ್ ಫೈಟರ್ ಆದ ಇದು ಎಂಥ ಕೆಟ್ಟ ಹವೆಯಲ್ಲೂ ಆಗಸಯುದ್ಧದಲ್ಲಿ ಭಾಗಿಯಾಗಬಲ್ಲ ಸಾಮರ್ಥ್ಯ ಹೊಂದಿದೆ.

ತೇಜಸ್‌ಗೆ ಇಂಧ ತುಂಬಿಸಲು ಕೆಳಗೆ ಇಳಿಯಬೇಕೆಂದಿಲ್ಲ. ಆಗಸದಲ್ಲಿರುವಾಗಲೇ ಇದಕ್ಕೆ ಇಂಧನ ತುಂಬಿಸಬಹುದು. ಎದುರಾಳಿ ವಿಮಾನವನ್ನು ದೂರದಿಂದ ಗುರುತಿಸಿ ಆಕ್ರಮಣ ಮಾಡಬಲ್ಲುದು. ಇದಕ್ಕೆ ಅತ್ಯಾಧುನಿಕ ಸ್ಟೀಲ್ತ್ ತಂತ್ರಜ್ಞಾನ ಇದ್ದು, ಎದುರಾಳಿಗಳ ರಾಡಾರ್ ಕಣ್ಣಿಂದ ತಪ್ಪಿಸಿಕೊಂಡು ಹೋಗಬಲ್ಲುದು.

ರಷ್ಯಾ, ಚೀನಾ, ಸೌತ್ ಕೊರಿಯಾದ ಯುದ್ಧವಿಮಾನಗಳಿಗಿಂತಲೂ ತೇಜಸ್ ಪರಿಣಾಮಕಾರಿಯಾಗಿದೆ. ಅಮೆರಿಕದಂಥ ಅಮೆರಿಕ ದೇಶವೇ ತೇಜಸ್ ಖರೀದಿಸಲು ಆಸಕ್ತಿ ತೋರಿರುವುದು ಆಶ್ವರ್ಯ ಮೂಡಿಸುತ್ತದೆ. ಅಮೆರಿಕ ಮಾತ್ರವಲ್ಲ ಅರ್ಜೆಂಟೀನಾ, ಈಜಿಪ್ಟ್, ಇಂಡೋನೇಷ್ಯಾ, ಫಿಲಿಪ್ಪೈನ್ಸ್ ದೇಶಗಳೂ ತೇಜಸ್ ಮೇಲೆ ಕಣ್ಣಿಟ್ಟಿವೆ.

ಮಲೇಷ್ಯಾ ಬೆನ್ನು ತಿರುಗಿಸಿದ್ದು ಆಶ್ಚರ್ಯ

ಮಲೇಷ್ಯಾ ಬೆನ್ನು ತಿರುಗಿಸಿದ್ದು ಆಶ್ಚರ್ಯ

ಮಲೇಷ್ಯಾ 18 ತೇಜಸ್ ಎಲ್‌ಸಿಎಗಳನ್ನು ಖರೀದಿಸಲು ಹೆಚ್‌ಎಎಲ್‌ಗೆ ಆರ್ಡರ್ ಕೊಟ್ಟಿದೆ ಎಂಬ ಮಾತು ಕೇಳಿಬಂದ ಬೆನ್ನಲ್ಲೇ ಬೆಳವಣಿಗೆ ಬೇರೆ ದಿಕ್ಕು ತಿರುಗಿದ್ದು ಆಶ್ಚರ್ಯ ತಂದಿದೆ.

ಇನ್ನೊಂದು ಮುಖ್ಯ ಸಂಗತಿ ಎಂದರೆ, ಮಲೇಷ್ಯಾ ಬಳಿ ರಷ್ಯಾ ನಿರ್ಮಿತ ಎಸ್‌ಯು-30 ಯುದ್ಧವಿಮಾನದ ಪಡೆ ಇದೆ. ತೇಜಸ್ ಫೈಟರ್ ಜೆಟ್‌ಗಳನ್ನು ಖರೀದಿಸಿದರೆ ಎಸ್‌ಯು-30 ಯುದ್ಧವಿಮಾನಗಳ ಮೈಂಟೆನೆನ್ಸ್ ಕೂಡ ಮಾಡುತ್ತೇವೆ ಎಂದು ಹೆಚ್‌ಎಎಲ್ ಆಫರ್ ಕೊಟ್ಟಿತ್ತು. ಎಸ್‌ಯು-30 ಯುದ್ಧವಿಮಾನಗಳ ಪಾಲನೆ ಮಾಡಲು ರಷ್ಯಾ ಬಿಟ್ಟರೆ ಬೇರಾವ ದೇಶಗಳ ತಂತ್ರಜ್ಞರಿಂದಲೂ ಸಾಧ್ಯವಿಲ್ಲ. ಆದರೂ ಮಲೇಷ್ಯಾ ಹೆಚ್‌ಎಎಲ್‌ಗೆ ಬೆನ್ನು ತಿರುಗಿಸಿದ್ದು ಅಚ್ಚರಿಯ ವಿಚಾರ.

ಎಚ್‌ಎಎಲ್ ವೈಫಲ್ಯ?

ಎಚ್‌ಎಎಲ್ ವೈಫಲ್ಯ?

ತೇಜಸ್ ಎಲ್‌ಸಿಎಯಂಥ ಒಳ್ಳೆಯ ಉತ್ಪನ್ನವನ್ನು ಮಾರಾಟ ಮಾಡಲು ಕಷ್ಟಸಾಧ್ಯವಾಗುತ್ತಿರುವುದಕ್ಕೆ ಕಾರಣ ಏನು? ಕೆಲ ತಜ್ಞರ ಪ್ರಕಾರ ಹೆಚ್‌ಎಎಲ್ ಶಸ್ತ್ರಾಸ್ತ್ರ ನಿರ್ಮಾಣಕ್ಕೆ ಕೊಡುವಷ್ಟು ಒತ್ತನ್ನು ಮಾರ್ಕೆಂಟಿಂಗ್‌ಗೂ ಕೊಡಬೇಕು ಎನ್ನುತ್ತಾರೆ. ಇಸ್ರೋದ ಕಮರ್ಷಿಯಲ್ ವಿಭಾಗದಂತೆ ಹೆಚ್‌ಎಎಲ್ ಕೂಡ ಒಂದು ಪ್ರತ್ಯೇಕ ಕಮರ್ಷಿಯಲ್ ವಿಂಗ್ ತೆರೆದು ತನ್ನ ಉತ್ಪನ್ನಗಳಿಗಾಗಿ ಲಾಬಿ ಇತ್ಯಾದಿ ಕೆಲಸವನ್ನು ಮಾಡಬೇಕು. ಜಗತ್ತಿನಲ್ಲಿ ಈಗ ಶಸ್ತ್ರಾಸ್ತ್ರ ವ್ಯಾಪಾರ ಬಹಳ ದೊಡ್ಡ ಬಿಸಿನೆಸ್ ಆಗಿದೆ. ದೇಶೀಯವಾಗಿ ಬಹಳಷ್ಟು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿರುವ ಭಾರತ ತನ್ನ ಉತ್ಪನ್ನಗಳನ್ನು ಹೊರದೇಶಗಳಿಗೆ ಮಾರಾಟ ಮಾಡುವ ಮೂಲಕ ವೆಚ್ಚವನ್ನು ಸರಿದೂಗಿಸುವ ಕೆಲಸ ಮಾಡಬೇಕು ಎಂಬ ಸಲಹೆಗಳು ಕೇಳಿಬರುತ್ತಿವೆ.

(ಒನ್ಇಂಡಿಯಾ ಸುದ್ದಿ)

English summary
South Korea's KAI is said to be in final stage of negotiations with Malaysia to sell its 18 FA-50 Fighter Jets. There were reports earlier that Malaysia may want to purchase Tejas LCAs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X