ವಿಮಾನ ದುರಂತ : ಗಣಿ ಉದ್ಯಮಿ ಸೇರಿದಂತೆ 7 ಜನ ಬಲಿ

Posted By:
Subscribe to Oneindia Kannada

ಸಾವೋ ಪಾಲೋ(ಬ್ರೆಜಿಲ್), ಮಾರ್ಚ್ 20: ಉತ್ತರ ಸಾವೋ ಪಾಲೋದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ವಿಮಾನ ದುರಂತದಲ್ಲಿ ವೆಲ್ ಕಂಪನಿಯ ಮಾಜಿ ಸಿಇಒ, ಗಣಿ ಉದ್ಯಮಿ ರೊಜರ್ ಅಗ್ನೇಲಿ ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ.

56 ವರ್ಷ ವಯಸ್ಸಿನ ರೊಜರ್ ಅಗ್ನೇಲಿ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪ್ರಯಾಣ ಬೆಳೆಸಿದ್ದರು. ಈ ದುರಂತದಲ್ಲಿ ರೊಜರ್ ಕುಟುಂಬದ ಎಲ್ಲಾ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. [ದುಬೈ ವಿಮಾನ ಪತನ: ಇಬ್ಬರು ಭಾರತೀಯರು ಸೇರಿ 62 ಸಾವು]

Seven killed including Roger Agnelli as plane crashes into Brazil house

ಉದ್ಯಮಿ ರೋಜರ್ ಅವರು, ರಿಯೋ ಡಿ ಜೆನೈರೋದಲ್ಲಿ ವಿವಾಹ ಸಮಾರಂಭವೊಂದಕ್ಕೆ ಪತ್ನಿ ಆಂಡ್ರಿಯಾ, ಪುತ್ರ ಜೋಆವೊ ಹಾಗೂ ಪುತ್ರಿ ಅನ್ನಾ ಕರೋಲಿನಾ ಮತ್ತು ಅವರ ಸಂಬಂಧಿಕರೊಂದಿಗೆ ತೆರಳುತ್ತಿದ್ದರು. ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ರೋಗರ್ ಕೊನೆಗೆ ವೇಲ್ ಕಂಪನಿ ಸಿಇಒ ಆಗಿದ್ದರು. ನಂತರ ಬ್ಯಾಂಕರ್ ಆಗಿ ಗಣಿ ಉದ್ಯಮಿಯಾಗಿ ಜಗತ್ತಿನಾದ್ಯಂತ ಮನ್ನಣೆ ಗಳಿಸಿದ್ದರು.

ಬ್ರೆಜಿಲ್ಲಿನ ಗಣಿ ಕಂಪನಿ ವೆಲ್ ನ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ರೋಜರ್ ಅವರು ಸಂಸ್ಥೆಯನ್ನು 10 ವರ್ಷಗಳ ಕಾಲ ಸಮರ್ಥವಾಗಿ ಮುನ್ನಡೆಸಿದ್ದರು. 2011ರಲ್ಲಿ ರೊಜರ್ ವೆಲ್ ಕಂಪನಿಯಿಂದ ನಿವೃತ್ತರಾಗಿದ್ದರು.

ಉತ್ತರ ಸಾವೋ ಪಾಲೋದ ಕ್ಯೋಪೊ ಡಿ ಮಾರ್ತೆ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ತಾಂತ್ರಿಕ ಕಾರಣದಿಂದ ನಿಯಂತ್ರಣ ಕಳೆದುಕೊಂಡಿದೆ.


ಸಮೀಪದ ಕಟ್ಟಡವೊಂದರ ಮೇಲೆ ಅಪ್ಪಳಿಸಿದೆ. ಕಟ್ಟಡದಲ್ಲಿರುವವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನದ ಪೈಲಟ್ ಹಾಗೂ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least seven people were killed when a plane crashed into a house in Brazil's Sao Paulo city, the media reported on Sunday. The former chief executive Roger Agnelli (56) of the world's largest iron ore miner and his family have been killed in a plane crash in Brazil.
Please Wait while comments are loading...