ಬಿಬಿಸಿ ಲೈವ್ ರಿಪೋರ್ಟಿಂಗ್ ವೇಳೆ 'ಸೆಕ್ಸಿ ಸೌಂಡ್'

Posted By:
Subscribe to Oneindia Kannada

ಲಂಡನ್, ನವೆಂಬರ್ 13: ಬಿಬಿಸಿ ಸುದ್ದಿ ವಾಹಿನಿಯ ರಾತ್ರಿ ವೇಳೆಯ ಸುದ್ದಿ ಪ್ರಸಾರದ ವೇಳೆ ಆಗಸ್ಟ್ ತಿಂಗಳಿನಲ್ಲಿ ಭಾರಿ ಪ್ರಮಾದವೊಂದು ಜರುಗಿತ್ತು. ಈಗ ಮಾರ್ನಿಂಗ್ ನ್ಯೂಸ್ ವೇಳೆ ಇಂಥದ್ದೆ ಅವಘಡ ಸಂಭವಿಸಿದೆ. ಲೈವ್ ರಿಪೋರ್ಟಿಂಗ್ ವೇಳೆ 'ಸೆಕ್ಸಿ ಸೌಂಡ್' ಕೇಳಿಸಿದೆ.

ಬಿಬಿಸಿ ಲೈವ್ ಸುದ್ದಿ ಪ್ರಸಾರದ ವೇಳೆ ಇಣುಕಿದ 'ಕಾಮದಾಟ'

ಬ್ರೆಕ್ಸಿಟ್ ಬಗ್ಗೆ ವರದಿಗಾರ್ತಿ ಸುದ್ದಿ ನೀಡುವ ಸಂದರ್ಭದಲ್ಲಿ ಹಿನ್ನೆಲೆಯಲ್ಲಿ ಕಾಮಕೇಳಿಯ ಧ್ವನಿ ನುಸುಳಿದೆ ಇದು ಲೈವ್ ನಲ್ಲಿ ಪ್ರಸಾರವಾಗಿದ್ದು, ಈ ಬಗ್ಗೆ ವೀಕ್ಷಕರು ಅಚ್ಚರಿ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.

BBC Breakfast viewers treated to 'sleazy noises' during a live TV broadcast

ಆಗಸ್ಟ್ ತಿಂಗಳಿನಲ್ಲಿ ನಿರೂಪಕಿ ಸುದ್ದಿ ಓದ್ತಾ ಇದ್ರೆ, ಆಕೆಯ ಹಿಂದಿದ್ದ ಕಂಪ್ಯೂಟರ್ ಸ್ಕ್ರೀನ್ ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾಗಿತ್ತು.

ಹಿನ್ನಲೆಯಲ್ಲಿ ಇಂಥ ಧ್ವನಿ ಕೇಳಿ ಬಂದರೂ ಬಿಬಿಸಿ ವರದಿಗಾರ್ತಿ ಎಮ್ಮಾ ವಾರ್ಡಿ ಧೃತಿಗೆಟ್ಟಿಲ್ಲ. ವೆಸ್ಟ್ ಮಿನಿಸ್ಟರ್ ಹೊರಭಾಗದಲ್ಲಿ ನಿಂತು ವರದಿಗಾರಿಕೆ ಮುಂದುವರೆಸಿದ್ದಾರೆ.

ಪೋರ್ನ್ ವಿಡಿಯೋದ ಸದ್ದು ಕಿರಿಕಿರಿ ತಂದರೂ ವರದಿಗಾರಿಕೆ ಮಾಡಿದ ಎಮ್ಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಪ್ರತಿಷ್ಠಿತ ಸುದ್ದಿ ಸಂಸ್ಥೆ ಬಿಬಿಸಿಯಲ್ಲಿ ಪದೇ ಪದೇ ಇಂಥ ಪ್ರಮಾದಗಳು ಆಗುತ್ತಿರುವುದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಬಿಸಿ ಬ್ರೇಕ್ ಫಾಸ್ಟ್ ನ್ಯೂಸ್ ನಲ್ಲಿ ನಡೆದ ಎಡವಟ್ಟು ಸಾಮಾಜಿಕ ತಾಣಗಳಲ್ಲಿ ಇನ್ನೂ ಚರ್ಚೆಯಲ್ಲಿದೆ.ನೇರಪ್ರಸಾರದ ವೇಳೆ ಹೊರಗಡೆ ಓಬಿ ವ್ಯಾನ್ ಇತ್ತು. ದೊಡ್ಡ ಆಪ್ಲಿಫೈಯರ್ ಬಳಸಿ ಸೌಂಡ್ ರಿಕಾರ್ಡ್ ಮಾಡಲಾಗುತ್ತಿತ್ತು. ನೇರ ಸಂಕಲನ ವ್ಯವಸ್ಥೆ ಕೈಕೊಟ್ಟಿದ್ದರಿಂದ ಲೈವ್ ರಿಪೋರ್ಟಿಂಗ್ ಕಡಿತಗೊಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Morning breakfast viewers of the BBC were treated to a rather rude awakening this morning, after a live TV cross went horribly wrong after a soundscape of "sex noises" interrupted Emma Vardy's bulletin reports Mirror.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ