ಏಳು ಬಣ್ಣವಲ್ಲ ಇದು ಬಿಳಿಯಬಣ್ಣದ ಕಾಮನಬಿಲ್ಲು!

Posted By:
Subscribe to Oneindia Kannada

ಸ್ಕಾಟ್ ಲ್ಯಾಂಡ್, ನವೆಂಬರ್, 23: ಕಾಮನಬಿಲ್ಲು ಎಂಬುದು ನಭದಲ್ಲಿ ಮೂಡುವ ಪ್ರಾಕೃತಿಕ ವಿಸ್ಮಯ ಮತ್ತು ಸೌಂದರ್ಯ ಪ್ರತೀಕ. ಕಾಮನಬಿಲ್ಲು ಸಾಮಾನ್ಯವಾಗಿ 7 ಬಣ್ಣಗಳಿಂದ ಕೂಡಿರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ.

ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂಬಂತೆ, ಅಪರೂಪದಲ್ಲಿ ಅಪರೂಪವಾದ ಬಿಳಿಯ ಬಣ್ಣದ ಕಾಮನಬಿಲ್ಲು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ಭಾನುವಾರ (21) ಸ್ಕಾಟ್ ಲ್ಯಾಂಡ್ ರಾನೋಕ್ ಮೂರ್ ವಿಶಾಲ ಪ್ರದೇಶದಲ್ಲಿ ಬಿಳಿಯ ಬಣ್ಣವೇ ಪ್ರಧಾನವಾಗಿ ಗೋಚರಿಸುತ್ತಿದ್ದ ಕಾಮನಬಿಲ್ಲು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ.[ವಿಶ್ವ ಫೋಟೋಗ್ರಫಿ ದಿನಕ್ಕೊಂದಿಷ್ಟು ವಿಶಿಷ್ಟ ಚಿತ್ರಗಳು]

Amazing white rainbow snapped over Scottish moor

ಈ ಅಪರೂಪದ ಕಾಮನಬಿಲ್ಲನ್ನು ಪ್ರಸಿದ್ಧ ಛಾಯಚಿತ್ರಗಾರ ಮೆಲ್ವಿನ್ ನಿಕೊಲೋಸನ್ ಅವರು ತಮ್ಮ ಕ್ಯಾಮೆರದಲ್ಲಿ ಬಂಧಿಸಿದ್ದಾರೆ.

"ಮಂಜು ಬೀಳಲು ಕಾರಣವಾಗುವ ನೀರಿನ ಸಣ್ಣ ಸಣ್ಣ ಬಿಂದುಗಳು ಆಯಾತ ಪ್ರದೇಶದಲ್ಲಿ ಹೆಚ್ಚಾಗಿ ಆವರಿಸಿದ್ದರಿಂದ ಈ ರೀತಿಯ ವರ್ಣರಹಿತ ಕಾಮನಬಿಲ್ಲು ಮೂಡಿರಬಹುದು" ಎಂದು ಮೆಲ್ವಿನ್ ಅಭಿಪ್ರಾಯ ಪಟ್ಟಿದ್ದಾರೆ.

ಸೂರ್ಯ ನಮ್ಮ ಬೆನ್ನ ಹಿಂದೆ ಇದ್ದಾಗ ಮತ್ತು ಕಾಮನಬಿಲ್ಲು ನಮಗೆ ಅಭಿಮುಖವಾಗಿ ಗೋಚರಿಸಿದಾಗ ಮಾತ್ರ ಇಂತಹ ವಿಸ್ಮಯ ನೋಡಲು ಸಾಧ್ಯ ಎಂದು ಅವರ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಪೂರ್ತಿ ಮಂಜು ಆವರಿಸಿರುವ ಬಯಲು ಪ್ರದೇಶದಲ್ಲಿ ಕೇವಲ ಒಂದೇ ಒಂದು ಮರವನ್ನು ಮಧ್ಯಬಿಂದುವಾಗಿ ಮಾಡಿ ಈ ಬಿಳಿಯ ಬಣ್ಣದ ಕಾಮನಬಿಲ್ಲು

ಇಂತಹ ವಿಸ್ಮಯ ನೋಡುವುದೇ ಚೆಂದ. ಇದು ಹಲವು ದಿನ ನೆನಪಿನಲ್ಲಿ ಉಳಿಯುವಂತಹ ಚಿತ್ರವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Photographer Melvin Nicholson has captured a white rainbow, also called the ‘fog bow’, framed over an isolated tree on the Rannoch Moor in Scotland.
Please Wait while comments are loading...