ಮುತ್ತಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಜೀವಕ್ಕೆ ಕುತ್ತು!

By: ಒನ್ ಇಂಡಿಯಾ ಡೆಸ್ಕ್
Subscribe to Oneindia Kannada

ಮೆಕ್ಸಿಕೋ, ಆಗಸ್ಟ್ 30: ಮುತ್ತಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು ಮತ್ತೂ ಮುಂದುವರಿದರೆ ಜೀವಕ್ಕೆ ಕುತ್ತು. ಅರೇ ಇದೇನು? ಹೀಗೆ ಹೇಳ್ತಾ ಇದ್ದಾರಲ್ಲಾ ಎಂದು ಆಶ್ಚರ್ಯಪಡಬೇಕಿಲ್ಲ.

ಮೆಕ್ಸಿಕೋದ ಹದಿಹರೆಯದ ಯುವಕನೊಬ್ಬ 'ಲವ್ ಬೈಟ್' ಗೆ ಬಲಿಯಾಗಿದ್ದಾನೆ. ತನ್ನ ಗೆಳತಿಯಿಂದ ಪಡೆದುಕೊಂಡ ದೀರ್ಘ ಚುಂಬನ ಪರಿಣಾಮ ಮೆದುಳಿಗೆ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದಾನೆ.[ಮಲಗಿದ್ದ ಮಹಿಳೆ ಕೆನ್ನೆ ಕಚ್ಚಿ ಪರಾರಿಯಾದವ ಸಿಕ್ಕಿಬಿದ್ದ]

kiss

ಬ್ರಿಟನ್ ಪತ್ರಿಕೆ ಒಂದು ವರದಿ ಮಾಡಿರುವಂತೆ, 17 ವರ್ಷದ ಜುಲಿಯೋ ಮಿಕಾಸ್ ಗೆಳತಿಯೊಂದಿಗೆ ಸಂಜೆ ಕಳೆದಿದ್ದಾನೆ. ಇದಾದ ಮೇಲೆ ತನ್ನ ಕುಟುಂಬದವರೊಂದಿಗೆ ಊಟ ಮಾಡಲು ಕುಳಿತಿದ್ದಾನೆ.[ಕುರುಬರ ಸಮಾವೇಶದಲ್ಲಿ ಸಿಎಂ ಸಿದ್ದುಗೆ 'ಕಿಸ್ ಭಾಗ್ಯ']

ಇದ್ದಕ್ಕಿದ್ದಂತೆ ಆತನ ಆರೋಗ್ಯದಲ್ಲಿ ಏರು ಪೇರಾಗಿದೆ. ಕುತ್ತಿಗೆ ಭಾಗದಲ್ಲಿ ಸೆಳೆತ ಆರಂಭವಾಗಿದೆ. ತಕ್ಷಣ ವೈದ್ಯಕೀಯ ಪರೀಕ್ಷೆಗೆ ಕ್ರಮ ತೆಗೆದುಕೊಂಡರು ಯುವಕ ಸಾವನ್ನಪ್ಪಿದ.[ಮಾತು ಮನೆ ಕೆಡಿಸಿತು, ಮುತ್ತು ಮದುವೆಯನ್ನೇ ಕೆಡಿಸಿತು!]

ಯುವಕನ ಸಾವಿಗೆ ಹುಡುಗಿ ಸ್ವಲ್ಪ ಅತಿಯಾದ ಪ್ರೀತಿಯಿಂದ ಕುತ್ತಿಗೆ ಮೇಲೆ ಕಚ್ಚಿದ್ದೆ ಕಾರಣ. ಕಚ್ಚುವಿಕೆಯ ಪರಿಣಾಮವೇ ಮೆದುಳಿನ ರಕ್ತ ಸಂಚಾರದಲ್ಲಿ ಹೆಚ್ಚು ಕಡಿಮೆ ಆಗಿದೆ ಎಂದು ಪತ್ರಿಕೆ ವರದಿಯಲ್ಲಿ ತಿಳಿಸಿದೆ.[ಕಿಸ್ ಮಾಡುವುದು ಹೇಗೆ? ತಗೊಳ್ಳಿ ಟಿಪ್ಸ್..]

ಯುವಕನ ಸಾವಿನ ನಂತರ ಆತನ 24 ವರ್ಷದ ಗೆಳತಿ ನಾಪತ್ತೆಯಾಗಿದ್ದಾಳೆ. ಹುಡುಗನ ಸಾವಿಗೆ ಹುಡುಗಿಯೇ ಕಾರಣ ಎಂದು ಯುವಕನ ಪಾಲಕರು ಆರೋಪ ಮಾಡಿದ್ದಾರೆ.[ಕಿಸ್ ಆಫ್ ಕಿಲೋ ಗಟ್ಟಲೇ ಬ್ಯಾಕ್ಟೀರಿಯಾ...]

ಇಂಥದ್ದೆ ಒಂದು ಉದ್ರೇಕಕಾರಿ ಕಚ್ಚುವಿಕೆಯಿಂದ 2011 ರಲ್ಲಿ ನ್ಯೂಜಿಲೆಂಡ್ ನ 44 ವರ್ಷದ ಮಹಿಳೆ ಮೃತಪಟ್ಟಿದ್ದಳು. ಸದ್ಯ ಈ ಘಟನೆ ಎಲ್ಲ ಯುವ ಪ್ರೇಮಿಗಳಿಗೆ ಒಂದು ಎಚ್ಚರಿಕೆ ಘಂಟೆಯಾಗಿ ಪರಿಣಮಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A Mexican teenager has died reportedly of a ‘hickey' or a love bite. After a blood clot that developed as a result of the love bite spread to his brain, causing convulsions hours later. Emergency medical personnel who rushed to the spot were unable to save him.
Please Wait while comments are loading...