ಮರ್ಯಾದಾ ಹತ್ಯೆಯಾಗುವಂಥ ತಪ್ಪು ಕ್ವಂಡೀಲ್ ಮಾಡಿದ್ದರೆ?

By: ಮ ಪ
Subscribe to Oneindia Kannada

ಬೆಂಗಳೂರು, ಜುಲೈ, 18: ಮರ್ಯಾದಾ ಹತ್ಯೆಗೆ ದೇಶ, ಕಾಲ, ಗಡಿಗಳ ಮಿತಿಯಿಲ್ಲ ಎಂಬುದಕ್ಕೆ ಪಾಕಿಸ್ತಾನದ ಮಾಡೆಲ್ ಕ್ವಂಡೀಲ್ ಬಲೂಚ್ ಸಾವು ಸದ್ಯದ ಹಸಿಯಾದ ಉದಾಹರಣೆ. ಸ್ವಂತ ಸಹೋದರನಿಂದಲೇ ಹತ್ಯೆಯಾಗುವಂಥ ತಪ್ಪು ಆಕೆ ಮಾಡಿದ್ದಾರೂ ಏನು?

ವಿವಾದಿತ ಹೇಳಿಕೆಗಳು, ಅರೆನಗ್ನ ಚಿತ್ರಗಳನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡುವುದು. ವಿರಾಟ್ ಕೊಹ್ಲಿಯನ್ನು, ಶಾಹಿದ್ ಅಫ್ರಿದಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿಕೆ ನೀಡುವುದು, ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಅವರನ್ನು ಪ್ರೀತಿಸುತ್ತೇನೆ.. ಹೀಗೆ ಸಮಯಕ್ಕೆ ತಕ್ಕಂತೆ ವಿವಾದಿತ ಹೇಳಿಕೆ ನೀಡುತ್ತಿದ್ದ ಬಲೂಚ್ ದುರಂತ ಅಂತ್ಯ ಕಂಡಿದ್ದಾರೆ.[ಕ್ವಂಡೀಲ್ ಹತ್ಯೆ ಮಾಡಿದ ಸಹೋದರ ಹೇಳಿದ್ದೇನು?]

ಹಾಗಾದರೆ ಈ ಕ್ವಂಡೀಲ್ ಬಲೂಚ್ ಯಾರು? ಯಾಕಾಗಿ ಇಂಥ ಹೇಳಿಕೆ ನೀಡುತ್ತಿದ್ದಳು? ಅವಳಿಗೆ ನಿಜವಾಗಿಯೂ ಕ್ರಿಕಟ್ ಮೇಲೆ ಅಭಿಮಾನವಿತ್ತೆ? ಅದೆಲ್ಲದಕ್ಕೆ ಉತ್ತರ ಇಲ್ಲಿದೆ...

ನಟಿ, ಮಾಡೆಲ್

ನಟಿ, ಮಾಡೆಲ್

ಮಾರ್ಚ್ 1, 1990 ರಲ್ಲಿ ಜನಿಸಿದ ಫೌಜಿಯ ಅಝೀಮ್ ನಂತರ ಮಾಡೆಲ್ ಆಗಿ, ಮಹಿಳಾ ಪರ ಹೋರಾಟಗಾರ್ತಿಯಾಗಿ, ಸಾಮಾಜಿಕ ತಾಣದ ಸೆಲಬ್ರಿಟಿಯಾಗಿ ಗುರುತಿಸಿಕೊಂಡು ಕ್ವಂಡೀಲ್ ಬಲೂಚ್ ಆದರು.

ಹೆಸರು ತಂದ ರಿಯಾಲಿಟಿ ಶೋ

ಹೆಸರು ತಂದ ರಿಯಾಲಿಟಿ ಶೋ

2013ರಲ್ಲಿ ಬಲೂಚ್ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡರು. ಇದಕ್ಕೆ ಕಾರಣವಾಗಿದ್ದು ಪಾಕಿಸ್ತಾನ ಐಡಲ್ ಎಂಬ ರಿಯಾಲಿಟಿ ಶೋ. ಇದರಲ್ಲಿ ಬಲೂಚ್ ನಡೆದುಕೊಂಡ ರೀತಿಗೆ ಇಡೀ ಪಾಕಿಸ್ತಾನವೇ ಬೆಚ್ಚಿಬಿದ್ದಿತ್ತು.

ಬಲೂಚ್ ಮದುವೆಯಾಗಿದ್ದಳು

ಬಲೂಚ್ ಮದುವೆಯಾಗಿದ್ದಳು

2008 ಅಂದರೆ ಬಲೂಚ್ ತನ್ನ 17 ನೇ ವಯಸ್ಸಿನಲ್ಲೇ ಆಶಿಕ್ ಹುಸೇನ್ ಎಂಬುವರನ್ನು ಮದುವೆಯಾಗಿದ್ದರು. ಮದುವೆಯ ನಂತರ ಮುದ್ದಾದ ಮಗನನ್ನು ಪಡೆದಿದ್ದರು. ಆದರೆ ನಂತರ ಗಂಡ ಹೆಂಡತಿ ಇಬ್ಬರು ಬೇರೆಯಾಗಿದ್ದರು.

ಪಾಕ್ ಗೆದ್ದರೆ ಬೆತ್ತಲಾಗುತ್ತೇನೆ!

ಪಾಕ್ ಗೆದ್ದರೆ ಬೆತ್ತಲಾಗುತ್ತೇನೆ!

ಈ ವರ್ಷ ಮಾರ್ಚ್ 19 ರಂದು ಭಾರತ ಮತ್ತು ಪಾಕಿಸ್ತಾನದ ನಡುವಿನ ಟಿ-20 ವಿಶ್ವಕಪ್ ಪಂದ್ಯಕ್ಕಿಂತ ಬಲೂಚ್ ಹೆಚ್ಚಿನ ಸುದ್ದಿ ಮಾಡಿದ್ದಳು. ಪಾಕಿಸ್ತಾನ ಗೆದ್ದರೆ ಬಟ್ಟೆ ಬಿಚ್ಚುತ್ತೇನೆ ಎಂದು ಬಲೂಚ್ ಹೇಳಿಕೆ ನೀಡಿದ್ದಳು.

ತಿರುಗಿಬಿದ್ದ ಕ್ವಂಡೀಲ್

ತಿರುಗಿಬಿದ್ದ ಕ್ವಂಡೀಲ್

ಭಾರತದ ವಿರುದ್ಧ ಪಾಕಿಸ್ತಾನ ಸೋತ ಮೇಲೆ ಅಫ್ರಿದಿ ಮೇಲೆಯೂ ಮುನಿಸು ತೋರಿದ್ದಳು. ಇಂಥ ಅವಕಾಶಕ್ಕೆ ಇನ್ನೆಷ್ಟು ದಿನ ಕಾಯಬೇಕು ಎಂದು ಆಕ್ರೋಶವನ್ನು ಸಾಮಾಜಿಕ ತಾಣದಲ್ಲಿ ಹೊರಹಾಕಿದ್ದರು.

ವಿರಾಟ್ ಕೊಹ್ಲಿ ಮೇಲೆ ಪ್ರೀತಿ

ವಿರಾಟ್ ಕೊಹ್ಲಿ ಮೇಲೆ ಪ್ರೀತಿ

ಟಿ-20 ವಿಶ್ವಕಪ್ ಬಳಿಕ ಐಪಿಎಲ್ ಹಬ್ಬ ಶುರುವಾಯಿತು. ಕ್ವಂಡೀಲ್ ಗೆ ಏಕಾಏಕಿ ಭಾರತದ ಬ್ಯಾಟಿಂಗ್ ಶಕ್ತಿ ವಿರಾಟ್ ಕೊಹ್ಲಿ ಮೇಲೆ ಪ್ರೀತಿ ಉಕ್ಕಿ ಬಂತು. "ವಿರಾಟ್ ಐ ಲವ್ ಯು ಬೆಬಿ, ಐ ಮಿಸ್ ಯು ಬೆಬಿ ಎಂದು ಬಾತ್ ಟಬ್ ನಲ್ಲಿ ಹಾಡುತ್ತ ಕುಣಿದ ದೃಶ್ಯ ವೈರಲ್ ಆಗಿತ್ತು.

ಸನ್ನಿ, ಪೂನಂ ನನಗೆ ಸ್ಫೂರ್ತಿ

ಸನ್ನಿ, ಪೂನಂ ನನಗೆ ಸ್ಫೂರ್ತಿ

ನನಗೆ ಸನ್ನಿ ಲಿಯೋನ್, ಪೂನಂ ಪಾಂಡೆ, ರಾಖಿ ಸಾವಂತ್ ಸ್ಫೂರ್ತಿ ಎಂದು ಹಲವು ಕಡೆ ಈಕೆ ಹೇಳಿಕೊಂಡಿದ್ದಾಳೆ. ಅವರಂತೆ ಸುದ್ದಿ ಮಾಡಲಿ ವಿವಾದಿತ ಹೇಳಿಕೆ ನೀಡಲು ಹಿಂದೆ ಬಿದ್ದಿಲ್ಲ.

'ಬ್ಯಾನ್' ಆಲ್ಬಂ

'ಬ್ಯಾನ್' ಆಲ್ಬಂ

ಬ್ಯಾನ್ ಹೆಸರಿನಲ್ಲಿ ಸಂಗೀತದ ಮತ್ತು ನೃತ್ಯ ಸಂಯೋಜನೆಯ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಳು. ಅದರಲ್ಲಿ ಪಾಕಿಸ್ತಾನದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಯತ್ನ ಮಾಡಿದ್ದಳು.

ಬೆದರಿಕೆ ಕರೆ

ಬೆದರಿಕೆ ಕರೆ

ಕ್ವಂಡೀಲ್ ಬಲೂಚ್ ಹುಚ್ಚಾಟಗಳು ಕಡಿಮೆ ಇರಲಿಲ್ಲ. ಇದಕ್ಕೆ ಅನುಗುಣವಾಗಿ ಪಾಕಿಸ್ತಾನದ ಮೂಲಭೂತ ಸಂಘಟನೆಗಳು ಬೆದರಿಕೆ ಕರೆಯನ್ನು ಮಾಡುತ್ತಿದ್ದವು. ನಿನ್ನ ಆಟ ಹೀಗೆ ಮುಂದುವರಿದರೆ ಹತ್ಯೆ ಮಾಡುತ್ತೇವೆ ಎಂದು ಬೆದರಿಸಿದ್ದರು. ಈ ಬಗ್ಗೆ ಬಲೂಚ್ ಒ೦ದು ಕಡೆ ಹೇಳಿಕೊಂಡಿದ್ದಾರೆ.

ದುರಂತ ಸಾವು

ದುರಂತ ಸಾವು

ಸಹೋದರಿಯ ಹುಚ್ಚಾಟಗಳಿಗೆ ಎಚ್ಚರಿಕೆ ಕೊಟ್ಟು ಸಾಕಾಗಿ ಹೋಗಿದ್ದ ಸಹೋದರ ವಾಸೀಂ ಬಲೂಚ್ ಅವರನ್ನು ಜೂನ್ 15 ರಂದು ಮನೆಯಲ್ಲಿಯೇ ಇಉಸಿರು ಕಟ್ಟಿ ಸಾಯಿಸಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Qandeel Baloch loved the limelight: most of us know this very basic fact, though we know very little about the Pakistani model-actress herself. Here are a few things you should know about the 26-year-old, who was recently killed. Qandeel Baloch's real name is Fauzia Azeem.
Please Wait while comments are loading...