• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಗೊಂದಲಕಾರಿ, ಕ್ಷೀಣಿಸುತ್ತಿರುವ ಲಸಿಕೆ ಅಭಿಯಾನಕ್ಕೆ ಯಾರು ಹೊಣೆ?- ಪ್ರಿಯಾಂಕ ಗಾಂಧಿ

|
Google Oneindia Kannada News

ನವದೆಹಲಿ, ಜೂ. 02: ದೇಶದಲ್ಲಿ ಕೊರೊನಾ ಲಸಿಕೆ ಕೊರತೆ ಹಿನ್ನೆಲೆ ಜನಸಾಮಾನ್ಯರಲ್ಲಿ ಹಲವಾರು ಗೊಂದಲಗಳು ಮನೆ ಮಾಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ ಮುಖಂಡೆ ಪ್ರಿಯಾಂಕ ಗಾಂಧಿ ವಾದ್ರಾ, ಭಾರತದ ಗೊಂದಲಕಾರಿ, ಕ್ಷೀಣಿಸುತ್ತಿರುವ ಲಸಿಕೆ ಕಾರ್ಯಕ್ರಮಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.

ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಟ್ವೀಟರ್‌ ಖಾತೆಯಲ್ಲಿ ವಿಡಿಯೋವೊಂದನ್ನು ಟ್ವೀಟ್‌ ಮಾಡಲಾಗಿದೆ. ಈ ವಿಡಿಯೋದಲ್ಲಿ ಮಾತನಾಡಿರುವ ಪ್ರಿಯಾಂಕ ಗಾಂಧಿ, ಆಗಸ್ಟ್‌ 15, 2020 ರ ಸ್ವಾತಂತ್ರೋತ್ಸವ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಿನ ವರ್ಷದೊಳಗೆ ಎಲ್ಲರಿಗೂ ಕೊರೊನಾ ಲಸಿಕೆ ಹಾಕಲಾಗುವುದು ಎಂಬ ಭರವಸೆ ನೀಡಿದರು. ಈಗ 2021 ರ ಮಧ್ಯಾವಧಿಯಲ್ಲಿ ನಾವಿದ್ದೇವೆ. ಆದರೆ ಪ್ರಸ್ತುತ ದಿನಕ್ಕೆ 1.9 ಮಿಲಿಯನ್‌ ಜನರಿಗೆ ಲಸಿಕೆ ಹಾಕಲಾಗುತ್ತಿದೆ. ನಾವು ಈ ವರ್ಷದೊಳಗೆ ಲಸಿಕೆ ಅಭಿಯಾನ ಪೂರ್ಣಗೊಳಿಸಬೇಕಾದರೆ ಪ್ರತಿ ದಿನ 7 ರಿಂದ 8 ಮಿಲಿಯನ್‌ ಜನರಿಗೆ ಲಸಿಕೆ ಹಾಕಬೇಕಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

'ಕೋವಿಡ್‌ ಸಂದರ್ಭ ವೈದ್ಯಕೀಯ ಉತ್ಪನ್ನಗಳ ಮೇಲಿನ ಜಿಎಸ್‌ಟಿ ರದ್ದು ಮಾಡಿ' - ಪ್ರಿಯಾಂಕ ಆಗ್ರಹ'ಕೋವಿಡ್‌ ಸಂದರ್ಭ ವೈದ್ಯಕೀಯ ಉತ್ಪನ್ನಗಳ ಮೇಲಿನ ಜಿಎಸ್‌ಟಿ ರದ್ದು ಮಾಡಿ' - ಪ್ರಿಯಾಂಕ ಆಗ್ರಹ

ಇನ್ನು ಅಭಿಯಾನದ ಆರಂಭದಲ್ಲಿ ಕೇಂದ್ರ ಸರ್ಕಾರ ಎಲ್ಲಾ ಜವಾಬ್ದಾರಿಯನ್ನು ತಾನು ಹೊತ್ತಿತ್ತು, ಆದರೆ ಈಗ ಎಲ್ಲಾ ಹೊರೆಯನ್ನು ರಾಜ್ಯಗಳಿಗೆ ಹಾಕಿಬಿಟ್ಟಿದೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ಜರ್ಮನಿ, ಯುಎಸ್‌ಎನಂತಹ ರಾಷ್ಟ್ರಗಳು ಲಸಿಕೆ ಅಭಿಯಾನ ಬೇರೆಯೇ ಪ್ರಕ್ರಿಯೆಯಲ್ಲಿ ನಡೆಸುತ್ತದೆ. ಆ ದೇಶಗಳಲ್ಲಿ ಕೇಂದ್ರ ಸರ್ಕಾರ ಲಸಿಕೆಯನ್ನು ಖರೀದಿಸುತ್ತದೆ ಹಾಗೂ ರಾಜ್ಯ ಸರ್ಕಾರಗಳು ಲಸಿಕೆ ನೀಡಿಕೆ ಕಾರ್ಯಕ್ರಮ ನಡೆಸುತ್ತದೆ. ಆದರೆ ಮೋದಿ ಸರ್ಕಾರ ಯಾಕೆ ಈ ರೀತಿ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

'ವೈಯಕ್ತಿಕ ಪ್ರಚಾರಕ್ಕೆ ಕೋವಿಡ್‌ ಲಸಿಕೆ ಬಳಸುತ್ತಿರುವ ಮೋದಿ'- ಪ್ರಿಯಾಂಕಾ ಆರೋಪ'ವೈಯಕ್ತಿಕ ಪ್ರಚಾರಕ್ಕೆ ಕೋವಿಡ್‌ ಲಸಿಕೆ ಬಳಸುತ್ತಿರುವ ಮೋದಿ'- ಪ್ರಿಯಾಂಕಾ ಆರೋಪ

ವಿಶ್ವದ ಅತಿ ಹೆಚ್ಚು ಕೊರೊನಾ ಲಸಿಕೆ ಉತ್ಪಾದನೆ ಮಾಡುವ ದೇಶಗಳಲ್ಲಿ ಭಾರತವೂ ಒಂದು. ಆದರೆ ನಮ್ಮ ಜನಸಂಖ್ಯೆಯ ಕೇವಲ ಶೇ.3.4 ಮಾತ್ರ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಭಾರತದ ಗೊಂದಲಕಾರಿ, ಕ್ಷೀಣಿಸುತ್ತಿರುವ ಲಸಿಕೆ ಕಾರ್ಯಕ್ರಮಕ್ಕೆ ಯಾರು ಹೊಣೆ? ಎಂದು ಪ್ರಿಯಾಂಕ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Who is responsible for India’s confused and dithering vaccination program questions priyanka gandhi vadra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X