ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಭಾಷ್ ಚಂದ್ರ ಬೋಸ್ ‍ಸಂಬಂಧಿಸಿದ 64 ರಹಸ್ಯ ಫೈಲ್ಸ್ ಬಹಿರಂಗ

By Mahesh
|
Google Oneindia Kannada News

ಕೋಲ್ಕತ್ತಾ, ಸೆ. 18: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕಣ್ಮರೆ ರಹಸ್ಯ ಹೊಂದಿದೆ ಎನ್ನಲಾದ 64 ಕಡತಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಶುಕ್ರವಾರ ಬೆಳಗ್ಗೆ ಸಾರ್ವಜನಿಕರ ಮುಂದಿಟ್ಟಿದೆ. ಭಾರತದ ಇತಿಹಾಸ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಈ ಕಡತಗಳು ಉತ್ತರ ಹೇಳುವ ನಿರೀಕ್ಷೆಯಿದೆ.

ಪಶ್ಚಿಮ ಬಂಗಾಳ ಸರ್ಕಾರದ ಬಳಿ ಇರುವ ಕಡತಗಳನ್ನು ಸೆ.18ರಂದು ಬಹಿರಂಗಪಡಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು. [ನೇತಾಜಿ ಕಡತ ಕಣ್ಮರೆ ]

ಅದರಂತೆ, ಶುಕ್ರವಾರ ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳು, ಬೋಸ್ ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಕೋಲ್ಕತ್ತಾ ಪೊಲೀಸ್ ಆಯುಕ್ತ ಸುರಜಿತ್ ಕರ್ ಪುರ್ಕಾಯಸ್ತ ಅವರು 64 ಫೈಲ್ಸ್ ಗಳನ್ನು ಮಾಧ್ಯಮದವರ ಮುಂದಿಟ್ಟಿದ್ದಾರೆ. [ಪ್ರಧಾನಿಗೂ ಇಲ್ಲ ನೇತಾಜಿ ರಹಸ್ಯ ಹೇಳುವ ಅಧಿಕಾರ!]

ಕೋಲ್ಕತ್ತಾ ಪೊಲೀಸ್ ಆಯುಕ್ತ ಸುರಜಿತ್ ಅವರು 64 ಕಡತಗಳುಳ್ಳ ಸಿಡಿ ಪ್ರತಿಗಳನ್ನು ಮಾಧ್ಯಮ ಪ್ರತಿನಿಧಿಗಳು ಹಾಗೂ ನೇತಾಜಿ ಕುಟುಂಬಸ್ಥರ ಕೈಗಿತ್ತರು. ಈ ಎಲ್ಲಾ ಕಡತಗಳ ಮೂಲ ಪ್ರತಿಗಳನ್ನು ಡಿಜಟಲೀಕರಣ ಮಾಡಲಾಗಿದೆ. ಒಟ್ಟಾರೆ 12,744 ಪುಟಗಳನ್ನು ಹೊಂದಿದೆ. ಮೂಲ ಪ್ರತಿಯನ್ನು ಕೋಲ್ಕತ್ತಾ ಪೊಲೀಸ್ ಕಚೇರಿ ಮ್ಯೂಸಿಯಂನಲ್ಲಿರಿಸಲಾಗುತ್ತದೆ. ಸೋಮವಾರದಿಂದ ಈ ಕಡತಗಳು ಸಾರ್ವಜನಿಕರ ಪ್ರದರ್ಶನಕ್ಕೆ ಲಭ್ಯವಿರುತ್ತದೆ ಎಂದರು.

ನೇತಾಜಿ ವಂಶಸ್ಥರು ಈ ದಾಖಲೆ ಬಿಡುಗಡೆಯನ್ನು ಸ್ವಾಗತಿಸಿದ್ದಾರೆ. 1945ರ ಆಗಸ್ಟ್ 18ರಂದು ಸಂಭವಿಸಿದ ವಿಮಾನ ದುರಂತದಲ್ಲಿ ನೇತಾಜಿ ಸಾವನ್ನಪ್ಪಿದ್ದಾರೆ ಎಂದು 1945ರ ಆಗಸ್ಟ್ 22ರಂದು ಟೋಕಿಯೋ ರೇಡಿಯೋ ಘೋಷಿಸಿತ್ತು. 1937ರಿಂದ 1947ರ ವರೆಗೆ ಇರುವ ಎಲ್ಲಾ ದಾಖಲೆಗಳನ್ನು ಇಂದು ಬಿಡುಗಡೆ ಮಾಡಲಾಗಿದೆ. [ನೇತಾಜಿ ರಹಸ್ಯ ಬಯಲು : ಮಮತಾ ಸೂಪರ್ ಟೈಮಿಂಗ್]

ಮೂಲ ಪ್ರತಿಯನ್ನು ಕೋಲ್ಕತ್ತಾ ಪೊಲೀಸರ ಬಳಿ ಇದೆ

ಮೂಲ ಪ್ರತಿಯನ್ನು ಕೋಲ್ಕತ್ತಾ ಪೊಲೀಸರ ಬಳಿ ಇದೆ

ಒಟ್ಟಾರೆ 12,744 ಪುಟಗಳನ್ನು ಹೊಂದಿರುವ 64 ಫೈಲ್ಸ್ ನಲ್ಲಿ ಏನಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೂಲ ಪ್ರತಿಯನ್ನು ಕೋಲ್ಕತ್ತಾ ಪೊಲೀಸ್ ಕಚೇರಿ ಮ್ಯೂಸಿಯಂನಲ್ಲಿರಿಸಲಾಗುತ್ತದೆ. ಸೋಮವಾರದಿಂದ ಸಾರ್ವಜನಿಕರು ಮೂಲ ಪ್ರತಿಯನ್ನು ಕಾಣಬಹುದು.

ಯಾರು ವಿಲನ್ ಗಳು ಎಂಬುದು ತಿಳಿಯುತ್ತದೆ

ಯಾರು ವಿಲನ್ ಗಳು ಎಂಬುದು ತಿಳಿಯುತ್ತದೆ

ಈ ಕಡತಗಳಿಂದ ಸ್ವತಂತ್ರ ಭಾರತದಲ್ಲಿ ಯಾರು ವಿಲನ್ ಗಳು ಎಂಬುದು ಜನತೆಗೆ ಸ್ಪಷ್ಟವಾಗಲಿದೆ. ನೇತಾಜಿ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸಿದ್ದರ ರಹಸ್ಯ ಕೂಡಾ ಅರಿವಾಗಲಿದೆ ಎಂದು ನೇತಾಜಿ ಅವರ ಸೋದರ ಸಂಬಂಧಿ ಚಂದ್ರ ಬೋಸ್ ಹೇಳಿದ್ದಾರೆ.

ಮಮತಾ ಅವರನ್ನು ಹೊಗಳಿದ ನೇತಾಜಿ ಕುಟುಂಬ

ಮಮತಾ ಅವರನ್ನು ಹೊಗಳಿದ ನೇತಾಜಿ ಕುಟುಂಬ

ನೇತಾಜಿ ಅವರಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗ ಮಾಡಲು ಮುಂದಾಗಿರುವ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ರಮವನ್ನು ನೇತಾಜಿ ಅವರ ಸೋದರ ಸಂಬಂಧಿ ಚಂದ್ರ ಬೋಸ್ ಅವರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

ಚಂದ್ರ ಬೋಸ್ ಸೋದರ ಸಂಬಂಧಿ

ನೇತಾಜಿ ಅವರ ಸಂಬಂಧಿ ಮೊಮ್ಮಗ ಚಂದ್ರ ಬೋಸ್ ಸೋದರ ಸಂಬಂಧಿ ಚಂದ್ರ ಬೋಸ್ ಪ್ರತಿಕ್ರಿಯೆ.

ಗುಪ್ತಚರ ಇಲಾಖೆಗೆ ಸೇರಿದ 9 ಕಡತ ಬಹಿರಂಗ

ಗುಪ್ತಚರ ಇಲಾಖೆಗೆ ಸೇರಿದ 9 ಕಡತ ಬಹಿರಂಗವಾಗಿದೆ. ಜೊತೆಗೆ ನೇತಾಜಿ ಕುಟುಂಬದ ಮೇಲೆ ನಡೆಸಲಾದ ಬೇಹುಗಾರಿಕೆ ಬಗ್ಗೆ ಚಂದ್ರ ಬೋಸ್ ಪ್ರತಿಕ್ರಿಯೆ

ಮಮತಾ ಅವರಿಂದ ಪರಿಶೀಲನೆ.

ಮೂಲ ಪ್ರತಿಯನ್ನು ಕೋಲ್ಕತ್ತಾ ಪೊಲೀಸ್ ಕಚೇರಿ ಮ್ಯೂಸಿಯಂನಲ್ಲಿರಿಸಲಾಗಿದ್ದು, ಮುಖ್ಯಮಂತ್ರಿ ಮಮತಾ ಅವರಿಂದ ಪರಿಶೀಲನೆ.

English summary
The Kolkata police today de-classified the Netaji Subhas Chandra Bose files in front of the family members and the media. Earlier this month West Bengal Chief Minister, Mamata Banerjee said that 64 files relating to Bose will be de-classified and made public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X