ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಎನ್‌ಇಪಿ ಜಾರಿಗೊಳಿಸಲ್ಲ, ನಮ್ಮದೇ ಶಿಕ್ಷಣ ನೀತಿ ತರುತ್ತೇವೆ: ಡಿಎಂಕೆ

|
Google Oneindia Kannada News

ಚೆನ್ನೈ, ನವೆಂಬರ್‌ 10: ''ರಾಷ್ಟ್ರೀಯ ಶಿಕ್ಷಣ ನೀತಿಗೆ ತನ್ನ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಸರ್ಕಾರ ತನ್ನ ನಿರ್ಧಾರದಲ್ಲಿ ಬದ್ಧತೆ ಕಾಯ್ದುಕೊಂಡಿದ್ದು, ರಾಜ್ಯಕ್ಕೆ ತಮ್ಮದೇ ವಿಶೇಷ ಶಿಕ್ಷಣ ನೀತಿಯನ್ನು ತರಲಿದೆ'' ಎಂದು ಶಿಕ್ಷಣ ಸಚಿವ ಅನ್ಬಿಲ್‌ ಮಹೇಶ್‌ ಪೊಯ್ಯಮೊಳಿ ತಿಳಿಸಿದ್ದಾರೆ.

ಎನ್‌ಇಪಿಯಲ್ಲಿ ಶಿಫಾರಸು ಮಾಡಲಾದ ತ್ರಿಭಾಷಾ ನೀತಿಯನ್ನು ವಿರೋಧಿಸಿ ಪ್ರಸ್ತುತ ತಮಿಳು ಮತ್ತು ಇಂಗ್ಲಿಷ್‌ನ ದ್ವಿಭಾಷಾ ನೀತಿಯ ಪರವಾಗಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಹಲವು ದಶಕಗಳಿಂದ ಹಿಂದಿ ಭಾಷೆಯನ್ನು ವಿರೋಧಿಸುತ್ತಿರುವ ರಾಜ್ಯದಲ್ಲಿ ಹಿಂದಿಯನ್ನು ಹೇರಲು ತಮಿಳುನಾಡು ಸರ್ಕಾರ ಇದನ್ನು ಕುತಂತ್ರ ಎಂದು ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.

ಚೆನ್ನೈ: 9 ಶಾಖೆಗಳೊಂದಿಗೆ ನಕಲಿ ಬ್ಯಾಂಕ್‌ ನಡೆಸುತ್ತಿದ್ದ ವ್ಯಕ್ತಿ ಬಂಧನಚೆನ್ನೈ: 9 ಶಾಖೆಗಳೊಂದಿಗೆ ನಕಲಿ ಬ್ಯಾಂಕ್‌ ನಡೆಸುತ್ತಿದ್ದ ವ್ಯಕ್ತಿ ಬಂಧನ

ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಕಲಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರದ ಇಲ್ಲಂ ತೇಡಿ ಕಲ್ವಿ ಯೋಜನೆಯು ಎನ್‌ಇಪಿಯ ಭಾಗವಾಗಿದೆ ಎಂದು ಟಿಎನ್ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಹೇಳಿಕೆ ಕುರಿತು ಅವರು ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಭಾಗವಹಿಸಲು ವಿವಿಧ ಸರ್ಕಾರಿ ಶಾಲೆಗಳ 68 ವಿದ್ಯಾರ್ಥಿಗಳೊಂದಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ತೆರಳುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ತಮಿಳುನಾಡಿಗೆ ವಿಶಿಷ್ಟವಾದ ಎಸ್‌ಇಸಿಯನ್ನು ರಚಿಸಲು ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ ಮುರುಗೇಶನ್ ನೇತೃತ್ವದ ಸಮಿತಿಯನ್ನು ಸರ್ಕಾರ ನೇಮಿಸಿದೆ. ಇದಕ್ಕಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡುತ್ತಿರುವ ಸಮಿತಿಯು ಡಿಸೆಂಬರ್ ಮೊದಲಾರ್ಧದಲ್ಲಿ ತನ್ನ ಹಲವು ಸಮಾಲೋಚನಾ ಸಭೆಗಳನ್ನು ಪೂರ್ಣಗೊಳಿಸುವ ಸಾಧ್ಯತೆಯಿದೆ. ನಂತರ ಅದು ಎಸ್‌ಇಪಿ ಕರಡನ್ನು ರಚಿಸಲಿದೆ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಮಂಡ್ಯದ ಬಾಲಾಜಿ ವಿಗ್ರಹ ಪತ್ತೆ: ಪೊಲೀಸರ ಶೋಧ ಕಾರ್ಯ ಹೇಗಿತ್ತು?ತಮಿಳುನಾಡಿನಲ್ಲಿ ಮಂಡ್ಯದ ಬಾಲಾಜಿ ವಿಗ್ರಹ ಪತ್ತೆ: ಪೊಲೀಸರ ಶೋಧ ಕಾರ್ಯ ಹೇಗಿತ್ತು?

ನಮ್ಮ ಮಕ್ಕಳಿಗೆ ಏನು ಬೇಕೋ ಅದು ಕೊಡುತ್ತೇವೆ

ನಮ್ಮ ಮಕ್ಕಳಿಗೆ ಏನು ಬೇಕೋ ಅದು ಕೊಡುತ್ತೇವೆ

ನಮ್ಮ ವಿದ್ಯಾರ್ಥಿಗಳ ಕಾಳಜಿಯನ್ನು ಬಯಸುವ ಶಿಕ್ಷಣ ವ್ಯವಸ್ಥೆಯನ್ನು ನಾವು ಬಯಸುತ್ತೇವೆ. ರಾಜ್ಯದ ದ್ವಿಭಾಷಾ ನೀತಿಯ ಮುಂದುವರಿಕೆಯ ಪರವಾಗಿ ಸಾಕಷ್ಟು ವಿದ್ಯಾರ್ಥಿಗಳು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿವುದನ್ನು ಸಹ ನಾವು ಗಮನಿಸಿದ್ದೇವೆ. ನಮ್ಮ ಮಕ್ಕಳಿಗೆ ಏನು ಬೇಕೋ ಅದನ್ನು ಜಾರಿಗೆ ತರುತ್ತೇವೆ ಎಂದು ಸಚಿವರು ಹೇಳಿದರು.

ವಿಶ್ವನಾಥನ್ ಆನಂದ್, ಟಿಎಂ ಕೃಷ್ಣ ಸದಸ್ಯರು

ವಿಶ್ವನಾಥನ್ ಆನಂದ್, ಟಿಎಂ ಕೃಷ್ಣ ಸದಸ್ಯರು

ಸಮಿತಿಯು ವಿವಿಧ ಕ್ಷೇತ್ರಗಳ ಸದಸ್ಯರನ್ನು ಹೊಂದಿದೆ. ಅದರಲ್ಲಿ ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್, ಕರ್ನಾಟಕ ಸಂಗೀತಗಾರ ಟಿ ಎಂ ಕೃಷ್ಣ, ಹೆಸರಾಂತ ಪ್ರಾಧ್ಯಾಪಕರು ಮತ್ತು ನಾಗಪಟ್ಟಿನಂನ ಸರ್ಕಾರಿ ಮಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಇರುತ್ತಾರೆ. ಒಂದು ವರ್ಷದೊಳಗೆ ಎಸ್‌ಇಪಿಯನ್ನು ರಚಿಸುವ ಸಂಸದೀಯ ಸಮಿತಿಯ ಸ್ಪಷ್ಟ ರಾಜಕೀಯ ಕ್ರಮವಾಗಿರುತ್ತದೆ. ಏಕೆಂದರೆ ಸ್ಟಾಲಿನ್ ಅವರು ಬಿಜೆಪಿಯ ನೀತಿಗಳ ವಿರುದ್ಧವಾಗಿದ್ದಾರೆ. ವಿಶೇಷವಾಗಿ ಶಿಕ್ಷಣ ವಲಯದಲ್ಲಿ ನೀಟ್‌ಗೆ ಅವರ ವಿರೋಧ ಮತ್ತು ಪದವಿ ಹಂತದ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯಂತಹ ಕ್ರಮಗಳನ್ನು ವಿರೋಧ ಮಾಡುತ್ತಾರೆ ಎಂದು ಹೇಳಿದರು.

ಏಕರೂಪ ಕಾನೂನು ಮಸೂದೆ, ನೀಟ್‌ಗೆ ವಿರೋಧ

ಏಕರೂಪ ಕಾನೂನು ಮಸೂದೆ, ನೀಟ್‌ಗೆ ವಿರೋಧ

ಹಿಂದಿ ಭಾಷಾ ಹೇರಿಕೆ ವಿರುದ್ಧ ಹಿಂದಿನಿಂದಲೂ ದಕ್ಷಿಣ ರಾಜ್ಯಗಳಲ್ಲಿ ತಮಿಳುನಾಡು ಕಡ್ಡಿ ಮುರಿದಂತೆ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಇದಲ್ಲದೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಏಕರೂಪ ಕಾನೂನು ಮಸೂದೆ, ನೀಟ್‌, ರಾಷ್ಟ್ರೀಯ ಶಿಕ್ಷಣ ನೀತಿ ಇವೇ ಮೊದಲಾದವುಗಳನ್ನು ರಾಜ್ಯ ಒಪ್ಪಿಕೊಂಡೇ ಇಲ್ಲ. ಹೀಗಾಗಿ ತಮ್ಮದೆ ಶಿಕ್ಷಣ ನೀತಿಯನ್ನು ತರಲು ಇದು ಈಗ ಮುಂದಡಿ ಇಟ್ಟಿದೆ.

ಕೇಂದ್ರದ ಸರ್ವಾಧಿಕಾರಿ ಧೋರಣೆಗೆ ಖಂಡನೆ

ಕೇಂದ್ರದ ಸರ್ವಾಧಿಕಾರಿ ಧೋರಣೆಗೆ ಖಂಡನೆ

ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಅವರು ನಮ್ಮ ಮೇಲೆ ಭಾಷಾ ಯುದ್ದ ಸಾರಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಕೇಂದ್ರ ಆರ್ಥಿಕ ನೀತಿಗಳು, ನೋಟು ಅಮಾನ್ಯೀಕರಣಗಳನ್ನು ಟೀಕಿಸಿದ್ದ ಅವರು ನಮಗೆ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ಆದರೆ ಕೇಂದ್ರದ ಸರ್ವಾಧಿಕಾರಿ ಧೋರಣೆಯನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದ್ದರು.

English summary
Tamil Nadu Education Minister Anbil Mahesh Poiyamoli said that the Tamil Nadu government, which has expressed its opposition to the National Education Policy, has remained committed to its decision and will bring its own special education policy to the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X