ಯುಪಿಎಸ್‌ಸಿ ಅಂತಿಮ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ಟಾಪರ್
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್‌ಸಿ) 2023 ರ ನಾಗರಿಕ ಸೇವಾ ಪರೀಕ್ಷೆ (CSE) ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಆದಿತ್ಯ ಶ್ರೀವಾಸ್ತವ ಅಖಿಲ ಭಾರತೀಯ ಮೊದಲ ರ್‍ಯಾಂಕ್ ಗಳಿಸಿದ್ದಾರೆ, ಅನಿಮೇಶ್ ಪ್ರಧಾನ್ ಎರಡನೇ ರ್‍ಯಾಂಕ್ ಗಳಿಸಿದ್ದು, ಅನನ್ಯಾ ರೆಡ್ಡಿ 3ನೇ ರ್‍ಯಾಂಕ್ ಗಳಿಸಿದ್ದಾರೆ.
ಒಟ್ಟು 1016 ಅಭ್ಯರ್ಥಿಗಳ ನೇಮಕಕ್ಕೆ ಶಿಫಾರಸ್ಸು ಮಾಡಲಾಗಿದೆ. 347 ಮಂದಿ ಸಾಮಾನ್ಯ ವರ್ಗದವರಾಗಿದ್ದು, 115 ಮಂದಿ ಆರ್ಥಿಕ ದುರ್ಬಲ ವರ್ಗ (EWS) ಕ್ಕೆ ಸೇರಿದವರಾಗಿದ್ದಾರೆ. ಒಬಿಸಿ ರ್ವದ 303 ಮಂದಿ ಆಯ್ಕೆಯಾಗಿದ್ದರೆ, 165 ಎಸ್‌ಸಿ ಮತ್ತು 86 ಮಂದಿ ಎಸ್‌ಟಿ ವರ್ಗದಿಂದ ಬಂದವರಾಗಿದ್ದಾರೆ.

ಯುಪಿಎಸ್‌ಸಿ ಒಟ್ಟು 1143 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಶಿಫಾರಸು ಮಾಡಿದ 355 ಅಭ್ಯರ್ಥಿಗಳ ಉಮೇದುವಾರಿಕೆಯನ್ನು ತಾತ್ಕಾಲಿಕವಾಗಿ ಇರಿಸಲಾಗಿದೆ ಎಂದು ಆಯೋಗವು ಅಧಿಕೃತ ಸೂಚನೆಯಲ್ಲಿ ತಿಳಿಸಿದೆ.
ಒಟ್ಟು 180 ಅಭ್ಯರ್ಥಿಗಳು ಐಎಎಸ್‌ಗೆ ಆಯ್ಕೆಯಾಗಿದ್ದಾರೆ; ಐಪಿಎಸ್‌ಗೆ 200 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಮತ್ತು ಐಎಫ್‌ಎಸ್‌ಗೆ 37 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಪರೀಕ್ಷೆಗಳ ಮೂಲಕ ಕೇಂದ್ರ ಸರ್ಕಾರದ ವಿವಿಧ ಗ್ರೇಡ್ ಎ ಹುದ್ದೆಗಳಿಗೆ 613 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಗ್ರೇಡ್ ಬಿ ಹುದ್ದೆಗಳಿಗೆ ಒಟ್ಟು 113 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
IAS Topper AIR-1
— Aashutosh pathak (@spathak81317822) April 16, 2024
Aditya Srivastava
Reaction after result#UPSC2023 #UPSC#UPSC2024 pic.twitter.com/pyvPEtPxbX
ಯುಪಿಎಸ್‌ಸಿ 2023 ಅಗ್ರ ರ್‍ಯಾಂಕ್ ಪಡೆದವರ ಪಟ್ಟಿ
ಮೊದಲನೇ ರ್‍ಯಾಂಕ್ - ಆದಿತ್ಯ ಶ್ರೀವಾಸ್ತವ
ಎರಡನೇ ರ್‍ಯಾಂಕ್ - ಅನಿಮೇಶ್ ಪ್ರಧಾನ್
ಮೂರನೇ ರ್‍ಯಾಂಕ್ - ಡೋಣೂರು ಅನನ್ಯಾ ರೆಡ್ಡಿ
ನಾಲ್ಕನೇ ರ್‍ಯಾಂಕ್ - ಪಿ ಕೆ ಸಿದ್ಧಾರ್ಥ್ ರಾಮ್‌ಕುಮಾರ್
ಐದನೇ ರ್‍ಯಾಂಕ್ - ರುಹಾನಿ
ಆರನೇ ರ್‍ಯಾಂಕ್ - ಸೃಷ್ಟಿ ದಾಬಾಸ್
ಏಳನೇ ರ್‍ಯಾಂಕ್ - ಅನ್ಮೋಲ್ ರಾಥೋರ್
ಎಂಟನೇ ರ್‍ಯಾಂಕ್ - ಆಶಿಶ್ ಕುಮಾರ್
ಒಂಭತ್ತನೇ ರ್‍ಯಾಂಕ್ - ನೌಶೀನ್
10ನೇ ರ್‍ಯಾಂಕ್ - ಐಶ್ವರ್ಯಂ ಪ್ರಜಾಪ್ರತಿ
ಲಕ್ನೋದ ಆದಿತ್ಯ ಶ್ರೀವಾಸ್ತವ ಮೊದಲ ಸ್ಥಾನ
ಆದಿತ್ಯ ಶ್ರೀವಾಸ್ತವ ಲಕ್ನೋದವರಾಗಿದ್ದಾರೆ. ಅಕ್ಟೋಬರ್ 2017ರಲ್ಲಿ ನಾಗರಿಕ ಸೇವಾ ಪರೀಕ್ಷೆ (CSE) ತಯಾರಿ ಆರಂಭಿಸಿದರು. 2022 ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಐಪಿಎಸ್‌ಗೆ ಆಯ್ಕೆಯಾದರು. 2022ರಲ್ಲಿ ಅವರು 216 ನೇ ಸ್ಥಾನದಲ್ಲಿದ್ದರು. ಪ್ರಸ್ತುತ, ಶ್ರೀವಾಸ್ತವ ಅವರು ಬಂಗಾಳ ಕೇಡರ್‌ಗೆ ಸೇರಿದ ಐಪಿಎಸ್ ಅಧಿಕಾರಿಯಾಗಲು ತರಬೇತಿ ಪಡೆಯುತ್ತಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ನೋಡುವುದೇಗೆ?
ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಫಲಿತಾಂಶಗಳನ್ನು ನೋಡಬಹುದು. ಅರ್ಹತೆ ಪಡೆದ ಅಭ್ಯರ್ಥಿಗಳ ಪಿಡಿಎಫ್ ಫೈಲ್ ಮತ್ತು ಅವರ ನೋಂದಣಿ ಸಂಖ್ಯೆಗಳನ್ನು ಒಳಗೊಂಡಿದೆ.












Click it and Unblock the Notifications