7th pay commission: ಕೇಂದ್ರ ಸರ್ಕಾರಿ ನೌಕರರಿಗೆ ಇದು ಅದೃಷ್ಟದ 'ಮಾರ್ಚ್' ತಿಂಗಳು, ಏಕೆ?
ಬೆಂಗಳೂರು, ಮಾರ್ಚ್ 06: ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದಡಿ ತುಟ್ಟಿಭತ್ಯೆ (DA Hike), ಪ್ರಯಾಣ ಭತ್ಯೆಗಳು ಹೆಚ್ಚಳದ ಸೌಲಭ್ಯ ಇದೇ ಮಾರ್ಚ್‌ನಲ್ಲಿ ಸರ್ಕಾರ ಘೋಷಣೆ ಮಾಡಲಿದೆ. ತುಟ್ಟಿಭತ್ಯೆ ಹೆಚ್ಚಳದ ಜತೆಗೆ ಈ ಭಾರಿ ನೌಕರರಿಗೆ ವಿವಿಧ ಸೌಲಭ್ಯಗಳು ಸಿಗಲಿದ್ದು, ಈ ವರ್ಷ ನೌಕರರು ಬಂಪರ್ ಗಿಫ್ಟ್ ಪಡೆಯಲಿದ್ದಾರೆ.
ಕೇಂದ್ರ ಸರ್ಕಾರಿ ನೌಕರಿಗೆ 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ 'ಡಿಎ' ಶೇಕಡಾ 4ರಷ್ಟು ಹೆಚ್ಚಿಸಲಾಗುತ್ತದೆ. ಇದರಿಂದ ಹಾಲಿನ 46ರಷ್ಟಿರುವ ಡಿಎ ಪ್ರಮಾಣ ಈ ವರ್ಷ ಶೇಕಡಾ 50 ತಲುಪುತ್ತದೆ. ನೌಕರರ ತುಟ್ಟಿ ಭತ್ಯೆ ತಲುಪಿದಾಗ ಅವರಿಗೆ ಮನೆ ಬಾಡಿಗೆ ಭತ್ಯೆ (HRA), ಪ್ರಯಾಣ ಭತ್ಯೆ (TA), ಹಾಸ್ಟೆಲ್ ಸಬ್ಸಿಡಿ ಮುಖ್ಯವಾಗಿ ಅವರ ಮಕ್ಕಳಿಗೆ 25% ಶಿಕ್ಷಣ ಭತ್ಯೆಯಂತಹ (Education Allowance) ಕೆಲವು ಸೌಲಭ್ಯಗಳು ಸಿಗಲಿವೆ.

ಕೇಂದ್ರ ಸರ್ಕಾರಿ ನೌಕರರಿಗೆ 2024ರ ಮಾರ್ಚ್ ತಿಂಗಳು ಶುಭ ಸುದ್ದಿಯ ತಿಂಗಳು ಎಂದರೆ ತಪ್ಪಾಗಲಾರದು. ನಿಯಮಿತ DA ಹೆಚ್ಚಳದ ಹೊರತಾಗಿ, ಮಾರ್ಚ್ 2024 ರಲ್ಲಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (HRA), ಶಿಕ್ಷಣ ಭತ್ಯೆ, ಗ್ರಾಚ್ಯುಟಿಯಂತಹ ಇತರ ಇನ್‌ಕ್ರಿಮೆಂಟ್‌ಗಳು ಹೆಚ್ಚಾಗುವ ಸಾಧ್ಯತೆ ಇದೆ.
ಗ್ರಾಹಕ ಬೆಲೆ ಸೂಚ್ಯಂಕ ಅನುಸರಿಸಿದರೆ ಭತ್ಯ ಹೆಚ್ಚಳ
ಕೇಂದ್ರ ಸರ್ಕಾರಿ ನೌಕರರು ಈ ತಿಂಗಳು ತಮ್ಮ ತುಟ್ಟಿಭತ್ಯೆ (DA) ಹೆಚ್ಚಳಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ನೀವು ಕೈಗಾರಿಕಾ ಕಾರ್ಮಿಕರ (ಸಿಪಿಐ-ಐಡಬ್ಲ್ಯು) ಸಂಖ್ಯೆಗಳ ಗ್ರಾಹಕ ಬೆಲೆ ಸೂಚ್ಯಂಕವನ್ನು ಅನುಸರಿಸಿದರೆ ತುಟ್ಟಿ ಭತ್ಯೆ ಶೇಕಡಾ 4ರಷ್ಟು ಏರಿಕೆ ಆಗುವ ಮೂಲಕ ನೌಕರರಿಗೆ ತುಟ್ಟಿಭತ್ಯೆ 50% ಕ್ಕೆ ತಲುಪಲಿದೆ.

2024 ರಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (DA) ಒಟ್ಟು 50 ತಲುಪಿದರೆ, ನೌಕರರು ಇತರ ಭತ್ಯೆಗಳ ಹೆಚ್ಚಳ ಪಡೆಯಲು ಅರ್ಹರಾಗುತ್ತಾರೆ ಎಂಬ ನಿಯಮ ಇದೆ. ಭತ್ಯೆ ಜತೆಗೆ ಕೇಂದ್ರ ಸರ್ಕಾರಿ ನೌಕರರ ಸಂಬಳದಲ್ಲಿ ಗಮನಾರ್ಹ ಜಿಗಿತಕ್ಕೆ ಕಾರಣವಾಗುತ್ತದೆ.
7ನೇ ಕೇಂದ್ರ ವೇತನ ಆಯೋಗದ ಡಿಎ 50% ಅನ್ನು ಮುಟ್ಟಿದರೆ ಅದು ನೌಕರರ ವೇತನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಯಾವೆಲ್ಲ ಭತ್ಯೆಗಳು ಹೆಚ್ಚಳವಾಗಲಿವೆ ಎಂಬ ಪಟ್ಟಿ ಇಲ್ಲಿದೆ.
ಹೆಚ್ಚಾಗಲಿರುವ ನೌಕರರ ವಿವಿಧ ಭತ್ಯೆಗಳ ಪಟ್ಟಿ
* ಮನೆ ಬಾಡಿಗೆ ಭತ್ಯೆ (House Rent Allowance)
* ಮಕ್ಕಳ ಶಿಕ್ಷಣ ಭತ್ಯೆ (Children's education allowance)
* ಮಕ್ಕಳ ಆರೈಕೆಗಾಗಿ ವಿಶೇಷ ಭತ್ಯೆ (Special Allowance For Childcare)
* ಹಾಸ್ಟೆಲ್ ಸಬ್ಸಿಡಿ (Hostel Subsidy)
* ವೈಯಕ್ತಿಕ ಪರಿಣಾಮಗಳ ಸಾರಿಗೆ (Transportation Of Personal Effects)
* ಗ್ರಾಚ್ಯುಟಿ (Gratuity)
* ಉಡುಗೆ ಭತ್ಯೆ (Dress Allowance)
* ಸ್ವಂತ ಸಾರಿಗೆಗಾಗಿ ಮೈಲೇಜ್ ಭತ್ಯೆ (Mileage Allowance For Own Transport)
* ದೈನಂದಿನ ಭತ್ಯೆ (Daily Allowance)
HRA ಭತ್ಯೆ ಹೆಚ್ಚಳದ ವಿವರ
ಕೇಂದ್ರ ಸರ್ಕಾರಿ ನೌಕರರು ಅವರು ವಾಸಿಸುವ ನಗರದ ವರ್ಗವನ್ನು ಅವಲಂಬಿಸಿ ಮನೆ ಬಾಡಿಗೆ ಭತ್ಯೆಯನ್ನು (HRA) ಪಡೆಯುತ್ತಾರೆ. 7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, HRA ಅನ್ನು ಶೇಕಡಾ 24 ರಷ್ಟು, ಶೇಕಡಾ 16ರಷ್ಟು ಮತ್ತು ಶೇಕಡಾ 8ರಷ್ಟು ಗೆ ತರ್ಕಬದ್ಧಗೊಳಿಸಲಾಗಿದೆ.
ಈ ಹಿಂದೆ ತುಟ್ಟಿಭತ್ಯೆ (DA) ಹೆಚ್ಚಳವು ಶೇಕಡಾ 25 ರಷ್ಟು ತಲುಪಿದಾಗಿ 2017 ಜುಲೈ 1ರಲ್ಲಿ X, Y ಮತ್ತು Z (ವಿವಿಧ) ನಗರಗಳಿಗೆ ಕ್ರಮವಾಗಿ HRA ದರಗಳನ್ನು ಶೇಕಡಾ 27, ಶೇಕಡಾ 18 ಮತ್ತು ಶೇಕಡಾ 9ರಷ್ಟು ಮೂಲ ವೇತನಕ್ಕೆ ಪರಿಷ್ಕರಿಸಲಾಗಿದೆತ್ತು.
ಶಿಕ್ಷಣ ಭತ್ಯೆ ಎಷ್ಟು ಹೆಚ್ಚಾಗಲಿದೆ?
ನೌಕರರ 'ಡಿಎ' ಏರಿಕೆಯು ಶೇಕಡಾ 50 ತಲುಪಿದಾಗ 7 ನೇ ವೇತನ ಆಯೋಗದ ಶಿಫಾರಸು ಪ್ರಕಾರ ನೌಖರರ ಮಕ್ಕಳ ಶಿಕ್ಷಣ ಭತ್ಯೆಯನ್ನು ಶೇಕಡಾ 25ರಷ್ಟು ಹೆಚ್ಚಿಸಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರು ಮಕ್ಕಳ ಶಿಕ್ಷಣ ಭತ್ಯೆಯಾಗಿ ಮಾಸಿಕ 2,250 ರೂ.ಗಳನ್ನು ಪಡೆಯುತ್ತಿದ್ದರೆ, ಈಗ ಡಿಎ 50 ತಲುಪಿದ ಹಿನ್ನೆಲೆಯಲ್ಲಿ ಆ ಮಕ್ಕಳ ಶಿಕ್ಷಣ ಭತ್ಯೆ 2,812.5 ರೂ.ಗೆ ಏರಿಕೆ ಆಗುತ್ತದೆ.
ಗ್ರಾಚ್ಯುಟಿ, ಉಡುಗೆ ಭತ್ಯೆ ಎಷ್ಟು ಹೆಚ್ಚಾಗಬಹುದು?
'ಡಿಎ' ಹೆಚ್ಚಳವು ಶೇಕಡಾ 50ರಷ್ಟಕ್ಕೆ ತಲುಪಿದಾಗ ಶಿಶುಪಾಲನಾ ವಿಶೇಷ ಭತ್ಯೆ, ಗ್ರಾಚ್ಯುಟಿ ಸೀಲಿಂಗ್, ಉಡುಪು ಭತ್ಯೆ ಮತ್ತು ದೈನಂದಿನ ಭತ್ಯೆಯಂತಹ ಹಲವಾರು ಇತರ ಭತ್ಯೆಗಳು ಶೇಕಡಾ 25ರಷ್ಟು ರಷ್ಟು ಹೆಚ್ಚಿಸಲಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಈ ಏರಿಕೆಗಳು ಮೂಲ ವೇತನದ ಅಂಶಗಳನ್ನು ಅವಲಂಬಿಸಿ ಹೆಚ್ಚಾಗುತ್ತವೆ.












Click it and Unblock the Notifications