Get Updates
Get notified of breaking news, exclusive insights, and must-see stories!

2nd PUC Exam: ಇಂದಿನಿಂದ ಪಿಯು ದ್ವಿತೀಯ ಪರೀಕ್ಷೆ ಆರಂಭ: ಆತಂಕ ಬೇಡ ಧೈರ್ಯ ಇರಲಿ..

ಬೆಂಗಳೂರು ಮಾರ್ಚ್ 1: ರಾಜ್ಯದಲ್ಲಿ ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗುತ್ತಿದೆ. ಮಾರ್ಚ್1ರಂದು ರಾಜ್ಯಾದ್ಯಂತ 1124 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಬಾರಿ 6.98 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಮೊದಲ ದಿನ ಕನ್ನಡ ಮತ್ತು ಅರೇಬಿಕ್ ವಿಷಯದ ಪರೀಕ್ಷೆಗಳು ನಡೆಯಲಿವೆ.

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ 3 ಬಾರಿ ಪರೀಕ್ಷೆ (1,2,3) ಬರೆದು ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೋ ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಆತಂಕ ಪಡುವಂತಿಲ್ಲ. ಈಗ ನಡೆಯಲಿರುವ ಪರೀಕ್ಷೆ 1 ಅನ್ನು ಆರಾಮಾಗಿ ಬರೆಯಿರಿ. ಒಂದು ವೇಳೆ ಸರಿಯಾಗಿ ಪರೀಕ್ಷೆ ಎದುರಿಸಲಾಗದೇ ಇದ್ದರೆ ಮತ್ತೆ ಏಪ್ರಿಲ್‌ನಲ್ಲಿ ಮೊದಲ ವಾರ ಪರೀಕ್ಷೆ 2, ಏಪ್ರಿಲ್ ಕೊನೆಯ ವಾರದಲ್ಲಿ ಪರೀಕ್ಷೆ 3 ಅನ್ನು ಬರೆವ ಅವಕಾಶವಿದೆ.

Second PUC Exam Starts From Today

ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್‌:

ಪರೀಕ್ಷೆ 1 ಮಾರ್ಚ್ 22ರವರೆಗೆ ನಿತ್ಯ 10.15 ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆಗಳು ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷಾ ಕೇಮದ್ರಗಳ ಸುತ್ತ 200 ಕಿಮೀ ವ್ಯಾಪ್ತಿಯಲ್ಲಿ 24/7 ಸಿಸಿಟಿವಿ ನಿಗಾ ಇರಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ ಟ್ಯೂಷನ್ ಕೋಚಿಂಗ್ ಸೆಂಟರ್‌ಗಳು, ಝೆರಾಕ್ಸ್ ಸೆಂಟರ್‌ಗಳು, ಸೈಬರ್, ಕಂಪ್ಯೂಟರ್, ಗೇಮ್ಸ್ ಕೇಂದ್ರಗಳ ಮೇಲೆ ಗಮನ ಇಡಲಾಗಿದೆ.

ಡ್ರೆಸ್‌ ಕೋಡ್ ಮಾಹಿತಿ ಇಲ್ಲ

ಈ ಬಾರಿಯ ಪರೀಕ್ಷೆಗೆ ಹಿಜಾಬ್ ನಿಷೇಧ ಸೇರದಂತೆ ಯಾವುದೇ ವಸ್ತ್ರ ಸಂಹಿತೆ ಸಂಬಂಧ ಮಂಡಳಿಯು ಮಾಹಿತಿ ನೀಡಿಲ್ಲ.

Second PUC Exam Starts From Today

ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಇದನ್ನು ತಿಳಿಯಿರಿ..

*ನೀವು ಮೂರು ಬಾರಿ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಉಳಿಸಿಕೊಳ್ಳವ ಅವಕಾಶವಿದೆ ಆತಂಕ ಪಡಬೇಡಿ.
* ಪರೀಕ್ಷೆ ಆರಂಭಕ್ಕೂ ಒಂದು ತಾಸು ಮೊದಲೇ ಕೇಂದ್ರದಲ್ಲಿರಿ ಗಡಿಬಿಡಿ ಮಾಡಿಕೊಳ್ಳಬೇಡಿ.
*ಹೊರಡುವಾಗ ಹಾಲ್‌ ಟಿಕೆಟ್, ಪೆನ್ನು ಮರೆಯದೆ ಕೊಂಡೊಯ್ಯಿರಿ.
*ಮೊಬೈಲ್, ವಾಚ್, ಕ್ಯಾಲ್ಯುಲೇಟರ್ ಸೇರಿ ಎಲ್ಲಾ ಎಲೆಕ್ಟ್ರಾನಿಕ್ಸ್ ಉಪಕರಣ ನಿಷೇಧವಿರುವುದು ಗಮನದಲ್ಲಿರಲಿ.
*ಪ್ರಶ್ನೆಗಳನ್ನು ಓದಿಕೊಳ್ಳಲು 15 ನಿಮಿಷ ಕಾಲಾವಕಾಶವಿರುತ್ತದೆ ಬಳಸಿಕೊಳ್ಳಿ
*ಪ್ರತಿ ಪ್ರಶ್ನೆಗೂ ನಿಧಾನವಾಗಿ ಯೋಜಿಸಿ ಸರಿಯಾಗಿ ಉತ್ತರಿಸಿ
* ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ
*ಉಳಿದ ಪ್ರಶ್ನೆಗಳಿಗೆ ಗೊತ್ತಿರುವಷ್ಟು ಉತ್ತರವನ್ನಾದರೂ ಬರೆಯಿರಿ, ಖಾಲಿ ಬಿಡಬೇಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+