ಮಕ್ಕಳ ವಿಚಾರದಲ್ಲಿ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!
ಕಲಿಕೆ ಎಂಬುದು ಅನುಭವ ಪಡೆಯುವ ಪ್ರಕ್ರಿಯೆಯೆಂದರೆ ತಪ್ಪಾಗಲಾರದು. ಈ ಹಿನ್ನೆಲೆಯಲ್ಲಿ ಮಕ್ಕಳ ಅನುಭವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶಾಲೆ ಹಾಗೂ ಮನೆಯ ಪರಿಸರದಲ್ಲಿರುವ ಶಿಕ್ಷಕರು ಹಾಗೂ ಪೋಷಕರ ನಡೆಗಳು ಯಾವ ರೀತಿ ಇರಬೇಕೆಂಬುದು ತಿಳಿಯೋಣ.
ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ
ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಅನ್ನುವ ಹಾಗೆ, ಮಕ್ಕಳು ತಾವು ನೋಡಿದ್ದನ್ನು, ಸ್ಪರ್ಷಿಸಿದ್ದರ ಕುರಿತು ಮನಸಿನಲ್ಲಿ ಹಲವು ಪ್ರಶ್ನೆಗಳು ಮೂಡುವುದು ಸಹಜ. ಈ ಪ್ರಶ್ನೆಗಳು ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕ್ಷುಲಕ ಅನಿಸಬಹುದು. ಆದರೆ, ಮಕ್ಕಳಿಗೆ ಅದು ಮಹತ್ವದ್ದೆ ಆಗಿರುತ್ತದೆ. ಹೀಗಾಗಿ ಮಕ್ಕಳು ಯಾವುದೇ ಪ್ರಶ್ನೆ ಕೇಳಿದರೂ ಸಮಾಧಾನದಿಂದ ಉತ್ತರಿಸುವಂತಹ ಮನಃಸ್ಥಿತಿಯನ್ನು ಹೊಂದಿರುವುದು ಅಗತ್ಯ.

ಉದಾಹರಣೆಗೆ ಹೇಳುವುದಾದರೆ, ಹೈ-ಸ್ಕೂಲ್ ಓದುತ್ತಿರುವಾಗ ನನ್ನ ಕ್ಲಾಸ್ ಮೆಟ್ ವಿಜ್ಞಾನ ವಿಷಯದ ಶಿಕ್ಷಕರಿಗೆ, ವಿಮಾನ ಆಕಾಶದಲ್ಲಿ ಚಲಿಸುವಾಗ ಮೋಡದ ಒಳಗಡೆ ತೂರಿ ಹೋಗುತ್ತಲ್ವ ಸರ್. ಹೀಗೆ ಹೋಗುವಾಗ ವಿಮಾನಕ್ಕೆ ಡ್ಯಾಮೆಜ್ ಏನು ಆಗಲ್ವ ಅಂತ ಪ್ರಶ್ನೆ ಕೇಳಿದ. ಇದಕ್ಕೆ ಪ್ರತಿಯಾಗಿ ನಮ್ಮ ವಿಜ್ಞಾನ ಶಿಕ್ಷಕರು ಸ್ವಲ್ಪ ಯೋಚಿಸಿ ಯಾವ ಪಾಠ ಓದುತ್ತಿದ್ದಿಯಾ. ಅದನ್ನು ಗಮನ ಕೊಟ್ಟು ಓದು. ತಲೆಹರಟೆ ಪ್ರಶ್ನೆ ಕೇಳಬೇಡವೆಂದು ಬೈದರು. ನನ್ನ ಸ್ನೇಹಿತ ಪ್ರಶ್ನೆ ಮಾಡಿದ್ದೆ ತಪ್ಪೆಂದುಕೊಂಡು ಪುಸ್ತಕದತ್ತ ತಲೆ ಬಗ್ಗಿಸಿದ. ಶಿಕ್ಷಕರು ಈ ರೀತಿ ಮಾಡುವುದರಿಂದ ಮಕ್ಕಳೊಳಗಿರುವ ಕುತೂಹಲಕಾರಿ ಹಾಗೂ ಪ್ರಶ್ನೆ ಮಾಡುವ ಮನೋಭಾವ ನಿಧಾನವಾಗಿ ಕಡಿಮೆ ಆಗುತ್ತದೆ. ಅದರ ಬದಲಾಗಿ ಪ್ರಶ್ನೆಗೆ ಸಮರ್ಪಕ ಉತ್ತರ ತಿಳಿದಿದ್ದರೆ ಅಲ್ಲಿಯೇ ಉತ್ತರಿಸಬಹುದಾಗಿತ್ತು. ಗೊತ್ತಿಲ್ಲದಿದ್ದರೆ ತಿಳಿದುಕೊಂಡು ಹೇಳಿದ್ದರೆ ಮುಗಿಯುತ್ತಿತ್ತು. ಅದರ ಬದಲಾಗಿ ಪ್ರಶ್ನೆ ಕೇಳಿದ್ದೆ ಮಹಾಪರಾಧವೆಂಬಂತೆ ವರ್ತಿಸಿದ್ದು ಈಗಲೂ ಕಣ್ಣಿಗೆ ಕಟ್ಟಿದಂತ್ತಿದೆ.
ಸ್ವಂತಿಕೆಗೆ ಅವಕಾಶ ಇರಲಿ
ಬದುಕಿನಲ್ಲಿ ಯಾವುದು ಅಲ್ಟಿಮೇಟ್ ಪರ್ಫೆಕ್ಟ್ ಅನ್ನುವುದಿರುವುದಿಲ್ಲ. ಕಲಿಕೆ ಅಂದ್ರೆ ಇವತ್ತಿನಿಂದ ನಾಳೆಗೆ ಬೆಟರ್ ಮಾಡುವುದಷ್ಟೆ. ಆದರೆ, ಬಹುತೇಕ ಪೋಷಕರು ತಮ್ಮ ಮಕ್ಕಳು ಈ ದಿನವೇ ಕಲಿತು ಮುಗಿಸಿ ಬಿಡಬೇಕೆಂದು ಭಾವಿಸುತ್ತಾರೆ. ರಿಯಾಲಿಟಿ ಶೋಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ಪರೀಕ್ಷೆಗಳಲ್ಲಿ ತನ್ನ ಮಗುವೆ ಪ್ರಥಮ ಬರಬೇಕೆಂದು ಅನಗತ್ಯವಾದ ಒತ್ತಡ ಹಾಕಲು ಪ್ರಾರಂಭಿಸುತ್ತಾರೆ. ಆದರೆ, ಪ್ರತಿ ಮಗುವಿಗೂ ಅದರದೇ ಕಲಿಕಾ ವಿಧಾನವಿರುತ್ತದೆ.
ಒಂದು ಮಗು ನೋಡಿ ಕಲಿತರೆ, ಮತ್ತೊಂದು ಮಗು ಮಾಡಿ ತಿಳಿಯುತ್ತದೆ. ಇನ್ನೊಂದು ಮಗುವಿಗೆ ಕ್ರೀಡೆಯಲ್ಲಿ ಆಸಕ್ತಿ ಇದ್ದರೆ, ಮಗದೊಂದು ಮಗುವಿಗೆ ಸಾಹಿತ್ಯದಲ್ಲಿ ಆಸಕ್ತಿ ಇರುತ್ತದೆ. ಆದರೆ, ಪೋಷಕರಾದ ನಮಗೆ ತನ್ನ ಮಗು ತಾನು ಹೇಳಿದಂತೆ, ತನ್ನ ತೋರಿಸಿದ್ದನ್ನು, ತಾನು ಮಾಡಿದ್ದನ್ನು ಮಾತ್ರ ಮಾಡಬೇಕೆಂಬ ಹಠ ಇರುತ್ತದೆ. ಇದರಿಂದ ಮಗುವಿನ ಒಳಗಿರುವ ಸಹಜವಾದ ಪ್ರತಿಭೆ ಅಲ್ಲಿಯೇ ಕಮರಿ ಹೋಗುತ್ತದೆ. ಅದರ ಬದಲು ತನ್ನ ಮಗುವಿಗೆ ಏನು ಆಸಕ್ತಿ ಇದೆಯೋ ಅದರತ್ತ ಹೋಗಲು ಪೋಷಕರು ಪ್ರೋತ್ಸಾಹಿಸಿದರೆ ಪ್ರತಿಯೊಂದು ಮಗು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಹತ್ತರವಾದುದ್ದನ್ನು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಅಭ್ಯಾಸದ ಬಗ್ಗೆ ಗಮನ ಇರಲಿ
ಇನ್ನು ಮಕ್ಕಳನ್ನು ಶಾಲೆಗೆ ಸೇರಿಸಿಬಿಟ್ಟರೆ ನನ್ನ ಕೆಲಸ ಮುಗೀತು. ಇನ್ನು ಏನಿದ್ದರೂ ಶಿಕ್ಷಕರ ಜವಾಬ್ದಾರೆ ಎಂದು ಪೋಷಕರು ಭಾವಿಸುತ್ತಾರೆ. ನಾನು ಪಾಠ ಮಾಡಿದ್ದೇನೆ. ನನ್ನ ಜವಾಬ್ದಾರಿ ಮುಗೀತು. ಓದುವುದು ಬಿಡುವುದು ವಿದ್ಯಾರ್ಥಿ ಹಣೆಬರಹ ಎಂದು ಉದಾಸೀನ ಮಾಡುವ ಶಿಕ್ಷಕರಿಗೇನು ನಮ್ಮಲ್ಲಿ ಕೊರತೆ ಇಲ್ಲ.
ಎಂತಹ ಪ್ರತಿಭಾ ವಿದ್ಯಾರ್ಥಿಗೂ ಕಲಿಕಾ ಹಂತದಲ್ಲಿ ನಾನಾ ಕಾರಣಗಳಿಂದ ಕಲಿಕೆಯಲ್ಲಿ ಹಿಂದುಳಿಯುತ್ತಾನೆ. ಒಂದು ಹಂತದಲ್ಲಿ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ತಲೆ ದೂರಬಹುದು. ಉದಾಹರಣೆಗೆ ವಿದ್ಯಾರ್ಥಿಯೊಬ್ಬನಿಗೆ ಇದ್ದಕ್ಕಿದಂತೆ ಮಂದ ದೃಷ್ಟಿದೋಷ ಸಮಸ್ಯೆ ಎದುರಾಗಬಹುದು. ಆದರೆ, ಆ ವಿದ್ಯಾರ್ಥಿಗೆ ತನ್ನ ಸಮಸ್ಯೆಯನ್ನು ಗುರುತಿಸಿಕೊಳ್ಳಲು, ತನ್ನ ಸಮಸ್ಯೆಯನ್ನು ಮತ್ತೊಬ್ಬರೊಂದಿಗೆ ಮುಕ್ತವಾಗಿ ಚರ್ಚಿಸಲು ಹಿಂಜರಿಯಬಹುದು.
ಈ ಸಂದರ್ಭದಲ್ಲಿ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ದಿನನಿತ್ಯದ ಕಾರ್ಯಚಟುವಟಿಕೆಗಳ ಕುರಿತು ಸರಿಯಾಗಿ ಮಾಪನ ಮಾಡದಿದ್ದರೆ, ಸಮಸ್ಯೆಗೆ ಒಳಗಾಗಿರುವ ವಿದ್ಯಾರ್ಥಿ ಮತ್ತಷ್ಟು ಸಮಸ್ಯೆಗೆ ಈಡಾಗುತ್ತಾನೆ. ಮಕ್ಕಳು ಎದುರಿಸುವ ಇಂತಹ ಸಮಸ್ಯೆಯನ್ನು ತಡೆಯಬೇಕಾದರೆ ನಾವು ಮಕ್ಕಳ ಪ್ರತಿದಿನದ ಕಾರ್ಯಚಟುವಟಿಕೆ, ಚಲನವಲನಗಳ ಕುರಿತು ಗಮನ ವಹಿಸಬೇಕು. ಯಾವ ಸಂದರ್ಭದಲ್ಲಿ ತನ್ನ ಅಗತ್ಯವಿದೆ ಎಂಬುದನ್ನು ಪೋಷಕರು ಹಾಗೂ ಶಿಕ್ಷಕರು ತಿಳಿಯುವುದು ಅಗತ್ಯವಿದೆ.
ಮಕ್ಕಳ ಪಾಲು ಇರಲಿ
ಮಕ್ಕಳು ಪೋಷಕರು ಹೇಳುವುದನ್ನು ಮಾಡುವುದಿಲ್ಲ. ಆದರೆ, ಮಾಡಿದ್ದನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಹೀಗಾಗಿ ಮನೆಯಲ್ಲಿ ಮಕ್ಕಳನ್ನು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯಯುತವಾಗಿ ಬೆಳೆಸುವಲ್ಲಿ ಪೋಷಕರ ಪಾತ್ರ ಮಹತ್ವದಾಗಿರುತ್ತದೆ. ಹೀಗಾಗಿ ಪೋಷಕರು ತಮ್ಮ ಕೆಲಸಗಳ ಕುರಿತು ಯೋಜನೆಗಳನ್ನು ರೂಪಿಸುವಾಗ ತಮ್ಮ ಮಕ್ಕಳ ಭಾಗವಹಿಸುವಿಕೆಗೆ ಅವಕಾಶ ನೀಡಿ. ಇದರಿಂದ ಮಕ್ಕಳು ಓದಿನ ಜೊತೆಗೆ ಪ್ರಾಕ್ಟಿಕಲ್ ಅನುಭವವೂ ದೊರಕುವಂತಾಗುತ್ತದೆ. ಹಾಗೂ ನಮ್ಮ ಸುತ್ತಮುತ್ತ ಸಮಾಜದಲ್ಲಿ ಎಂತೆಂತಹ ವ್ಯವಹಾರಗಳಿವೆ. ಅವುಗಳ ಸ್ವರೂಪಗಳನ್ನು ಪ್ರಾಥಮಿಕ ತಿಳುವಳಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್












Click it and Unblock the Notifications