Praveen Nettaru ಕೇಸ್‌ನಲ್ಲಿ ಎನ್‌ಐಎ ಮಹತ್ವದ ಯಶಸ್ಸು; ತಲೆಮರೆಸಿಕೊಂಡಿದ್ದ ಇಬ್ಬರು ಅರೆಸ್ಟ್

ಬೆಂಗಳೂರು: ಸಂಚಲನ ಮೂಡಿಸಿದ್ದ ಬಿಜೆಪಿ ಕಾರ್ಯಕರ್ತ ಬೆಳ್ತಂಗಡಿಯ ಪ್ರವೀಣ್ ನೆಟ್ಟಾರು ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ತಂಡ (NIA) ಬಂಧಿಸಿದ್ದಾರೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ತೀವ್ರ ಶೋಧದ ನಂತರ ಇವರನ್ನು ತನಿಖಾಧಿಖಾರಿಗಳು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಬಿಜೆಪಿ ನಾಯಕರು ಪ್ರತಿಕ್ರಿಯಿಸಿ ಕಾಂಗ್ರೆಸ್ ಹಾಗೂ ಸಿಎಂ ಡಿಕೆ ಶಿವಕುಮಾರ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

2022 ಜುಲೈ 26ರಂದು ಪ್ರವೀಣ್ ನೆಟ್ಟಾರುನನ್ನು ಹತ್ಯೆ ಮಾಡಿದ ಆರೋಪಿಗಳ ಪೈಕಿ ಕೆಲವರು ತಪ್ಪಿಸಕೊಂಡಿದ್ದರು. ಅವರ ಪೈಕಿ ಈ ಇಬ್ಬರು ಸೆರೆ ಸಿಕ್ಕಿರಲಿಲ್ಲ. ಇದೀಗ ಭರ್ತಿ ನಾಲ್ಕು ವರ್ಷದ ಬಳಿಕ ಬೆಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಪಡಂಗಡಿ ಪೊಯ್ಯೆಗುಡ್ಡೆ ನಿವಾಸಿ ನೌಶಾದ್‌ನನ್ನು (32) ಮತ್ತು ಕೇರಳದ ಕೊಚ್ಚಿಯಲ್ಲಿ ಕೊಡಗಿನ ಸೋಮವಾರಪೇಟೆಯ ಚೌಡ್ಲಿ ಕಾನ್ವೆಂಟ್ ರಸ್ತೆ ನಿವಾಸಿ ಅಬ್ದಲ್ ನಾಶೀರ್ ನನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Praveen Nettaru Case

ನೆಟ್ಟಾರು ಕೊಲೆ ಆರೋಪಿಗಳ ಜೊತೆ ಬಂಧಿತರ ನಂಟು

ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಶೂಟರ್‍‌ಗಳು ಸೇರಿದಂತೆ ಪ್ರಮುಖ ಆರೋಪಿಗಳಿಗೆ ತಲೆ ಮರೆಸಿಕೊಳ್ಳಲು ಈ ಇಬ್ಬರು ಬಂಧಿತರು ವಿವಿಧ ಕಡೆಗಳಲ್ಲಿ ಅಡಗುತಾಣಕ್ಕೆ ವ್ಯವಸ್ಥೆ ಮಾಡಿದ್ದರು. ಅಪರಾಧಿಗಳಿಗೆ ಇವರು ಸಹ ಸಹಾಯ ಮಾಡುವ ಮೂಲಕ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣದ ಎಲ್ಲ 27 ಆರೋಪಿಗಳಲ್ಲಿ ಸಹಾಯ ಮಾಡಿದವರ ಹೆಸರನ್ನು ಸೇರಿಸಲಾಗಿತ್ತು. ಎನ್‌ಐಎ ತನಿಖಾಧಿಕಾರಿಗಳು ತನಿಖೆ ಆರಂಭಿಸಿದಾಗ ಆರೋಪಿಗಳ ಬಂಧವೇ ಸವಾಲಾಗಿತ್ತು. ಆರು ಮಂದಿ ಕೈಗೆ ಸಿಕ್ಕಿರಲಿಲ್ಲ. ಆಗ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಎರಡು ಲಕ್ಷ ನಗದು ಬಹುಮಾನ ಸಹಿತ ಘೋಷಿಸಿತ್ತು. ಪ್ರಕರಣ ಸಂಬಂಧ 2025ರ ಏಪ್ರಿಲ್‌ನಲ್ಲಿ ತನಿಖಾಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದರು. ಅದರಲ್ಲೂ ಸದ್ಯ ಬಂಧನಕ್ಕೊಳಗಾದ ಈ ಇಬ್ಬರ ಕುರಿತು ಉಲ್ಲೇಖಿಸಲಾಗಿತ್ತು. ವರದಿ ಸಲ್ಲಿಕೆ ಬಳಿಕವು ತನಿಖೆಯನ್ನು ತೀವ್ರಗೊಳಿಸಿದ್ದರು.

ಗೃಹ ಸಚಿವ, ಸಿಎಂಗೆ ಸಿಟಿ ರವಿ ಟಾಂಗ್

ಬಿಜೆಪಿಯ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆ ಆರೋಪಿಗಳಾದ ಇಬ್ಬರು ಮತಾಂಧರನ್ನು ಎನ್ಐಎ ನಾಲ್ಕು ವರ್ಷಗಳ ಬಳಿಕ ಬಂಧಿಸಿದ್ದರ ಮಾಹಿತಿಯನ್ನು ಬಿಜೆಪಿ ನಾಯಕ ಸಿಟಿ ರವಿ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವರ ಪ್ರಿಯಾಂಕ್ ಖರ್ಗೆ ಅವರಿಗೆ ಟಾಂಗ್ ನೀಡಿದ್ದಾರೆ.

ನಿರೀಕ್ಷಿಸಿದಂತೆಯೇ ತಾವು ಬ್ರದರ್ಸ್ ಎಂದು ಮುದ್ದಾಡುವ, ಪಿಎಫ್ಐ, ಎಸ್‌ಡಿಪಿಐ ಮತಾಂಧರ ವಿರುದ್ಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಾಗಲಿ, ದೇಶಭಕ್ತ ಸಂಘಟನೆಗಳನ್ನು ಪ್ರಶ್ನಿಸುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಾಗಲಿ ಈ ಬಗ್ಗೆ ಮಾತನಾಡುವುದಿಲ್ಲ. ಪಿಎಫ್ಐ ಮತಾಂಧ, ದೇಶ ದ್ರೋಹಿ ಸಂಘಟನೆ ಎನ್ನಲೂ ಗೃಹ ಸಚಿವರಿಗೆ ಮನಸ್ಸು ಬರುವುದಿಲ್ಲ ಎಂದು ತಿವಿದಿದ್ದಾರೆ.

ಮತಾಂಧ ಹಂತಕರ ಬಂಧನ ಮಾತ್ರವಲ್ಲ, ಅವರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯೂ ಆಗಬೇಕು. ಆಗ ಮಾತ್ರ ದಿವಂಗತ ಪ್ರವೀಣ್ ನೆಟ್ಟಾರು ಆತ್ಮಕ್ಕೆ ಶಾಂತಿ ದೊರಕಬಹುದು ಎಂದು ಸಿಟಿ ರವಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+