ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಾವಿರ ಕೋಟಿ ಒಡೆಯ ಕಳಂಕಿತ ಇಂಜಿನಿಯರ್ ವಜಾ'

By Mahesh
|
Google Oneindia Kannada News

ಲಕ್ನೋ, ಡಿ.8: ಸಾವಿರಾರು ಕೋಟಿ ರು ಒಡೆಯ, ನೂರು ಕೋಟಿ ಅಕ್ರಮದ ಆರೋಪಿ ನೋಯ್ಡಾ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ಯಾದವ್ ಸಿಂಗ್ ರನ್ನು ಅಖಿಲೇಶ್ ಯಾದವ್ ಅವರ ಸರ್ಕಾರ ಕೊನೆಗೂ ಕರ್ತವ್ಯದಿಮ್ದ ಅಮಾನತುಗೊಳಿಸಿದೆ. ಯಾದವ್ ಸಿಂಗ್ ಅಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ನೋಯ್ಡಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಉತ್ತರಪ್ರದೇಶ ಸರ್ಕಾರ ಸೂಚಿಸಿದೆ.

ಇತ್ತೀಚೆಗೆ ಯಾದವ್ ಸಿಂಗ್ ನಿವಾಸ ಹಾಗೂ ಕಚೇರಿ ಮೇಲೆ ನೂರಕ್ಕೂ ಅಧಿಕ ಅಧಿಕಾರಿಗಳು ದಾಳಿ ನಡೆಸಿ 100 ಕೋಟಿ ರೂ. ಮೌಲ್ಯದ ವಜ್ರಗಳು, 2 ಕೆಜಿ ಚಿನ್ನ ಹಾಗೂ 10 ಕೋಟಿ ರೂ.ಗಳ ನಗದು ಜಪ್ತಿ ಮಾಡಿದ್ದರು. ಈತನ ಆಸ್ತಿ ಮೌಲ್ಯ 1000 ಕೋಟಿ ರು ಮೀರಿದರೆ, ಈತನ ಹಗರಣದ ಮೊತ್ತ 900 ಕೋಟಿ ದಾಟುತ್ತದೆ.

ಮನಿಲಾಂಡ್ರಿಂಗ್, ಅಕ್ರಮ ಆಸ್ತಿ ಗಳಿಕೆ ಮುಂತಾದ ಆರೋಪದ ಮೇಲೆ ಯಾದವ್ ಸಿಂಗ್ ಮೇಲೆ ಪ್ರಕರಣ ದಾಖಲಾಗಿ ತನಿಖೆ ನಡೆದಿದೆ. ನೋಯ್ಡಾದ ಪ್ರಮುಖ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ರುವಾರಿಯಾಗಿದ್ದ ಯಾದವ್ ಸಿಂಗ್ ಬಂಧನದಿಂದ ರಿಯಲ್ ಎಸ್ಟೇಟ್ ಉದ್ಯಮ ಕೂಡಾ ಕಂಗಲಾಗಿದೆ. [ನಕಲಿ ಕಂಪನಿಗಳ ಒಡೆಯ ಯಾದವ್]

UP Government suspends billionaire Noida engineer Yadav Singh

ಎರಡು ಸಂಸ್ಥೆಗಳಿಂದ ತನಿಖೆ?: ಯಾದವ್ ಸಿಂಗ್ ಪ್ರಕರಣದ ತನಿಖೆ ಜವಾಬ್ದಾರಿಯನ್ನು ವಿಶೇಷ ತನಿಖಾ ದಳಕ್ಕೆ ಸುಪ್ರೀಂಕೋರ್ಟ್ ವಹಿಸಿದೆ. ಜಸ್ಟೀಸ್(ನಿವೃತ್ತ) ಎಂಬಿ ಶಾ ನೇತೃತ್ವದ ತನಿಖಾ ತಂಡ ಈಗಾಗಲೇ ಸಿಬಿಡಿಟಿ ಹಾಗೂ ಐಟಿ ಅಧಿಕಾರಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ಮಾಹಿತಿ ಕಲೆ ಹಾಕಿದೆ.

ಈ ನಡುವೆ ಜಾರಿ ನಿರ್ದೇಶನಾಲಯ ಕೂಡಾ ತನಿಖೆ ಮುಂದುವರೆಸಿದೆ.ದಾಳಿ ವೇಳೆ ಸಿಕ್ಕ ಡೈರಿಯನ್ನು ಯಾರು ಡೀಕೋಡ್ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಈ ಡೈರಿಯಲ್ಲಿ ಅಧಿಕಾರಿಗಳು, ರಾಜಕಾರಣಿಗಳು, ಗುತ್ತಿಗೆದಾರರು ಹಾಗೂ ಉದ್ಯಮಿಗಳ ವಿವರಗಳು ಸಿಗಲಿವೆ. NCR ಪ್ರದೇಶ, ಹರ್ಯಾಣ, ಉತ್ತರಪ್ರದೇಶದ ಪ್ರಮುಖ ಕಾಮಗಾರಿಗಳ ಅವ್ಯವಹಾರಕ್ಕೆ ಪ್ರಮುಖ ಸಾಕ್ಷಿಯಾಗಲಿದೆ ಎಂದು ಯಾದವ್ ಸಿಂಗ್ ಕಚೇರಿ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಪ್ರಧಾನ ನಿರ್ದೆಶಕ ಕೃಷ್ಣ ಸೈನಿ ಹೇಳಿದ್ದಾರೆ.(ಪಿಟಿಐ)

English summary
The Uttar Pradesh Government has suspended Noida Authority Chief engineer Yadav Singh who is accused of amassing an undisclosed amount to the tune of Rs 100 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X