ಯುಪಿ: ಇಲಿಯನ್ನು ಕೊಂದ ವ್ಯಕ್ತಿಯ ವಿರುದ್ಧ ಎಫ್ಐಆರ್

ಲಕ್ನೋ ನವೆಂಬರ್ 29: ನೀವು ಇಲಿಗಳಿಗೆ ಹಿಂಸೆ ನೀಡಿದರೆ ಅಥವಾ ಅವುಗಳನ್ನು ಕೊಂದರೆ ಈ ಸುದ್ದಿಯನ್ನು ಒಮ್ಮೆ ಓದಿ. ಉತ್ತರ ಪ್ರದೇಶದ ಬುದೌನ್ ಜಿಲ್ಲೆಯಲ್ಲಿ ಇಲಿಯನ್ನು ಕೊಂದ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪ್ರಾಣಿ ಕಾರ್ಯಕರ್ತರ ದೂರಿನ ಮೇರೆಗೆ ವ್ಯಕ್ತಿಯ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಮಾಹಿತಿ ಪ್ರಕಾರ ಇಲಿ ಕೊಂದ ಆರೋಪದ ಮೇಲೆ ಮನೋಜ್ ಶರ್ಮಾ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಾಣಿ ಕಾರ್ಯಕರ್ತ ಬೀರೇಂದ್ರ ಅವರ ದೂರಿನ ಮೇರೆಗೆ ಮನೋಜ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೋಜ್ ಇಲಿ ಬಾಲಕ್ಕೆ ಕಲ್ಲು ಕಟ್ಟಿ ಚರಂಡಿಗೆ ಎಸೆದಿದ್ದಾನೆ ಎನ್ನಲಾಗಿದೆ.

ಮನೋಜ್ ಇದನ್ನು ಮಾಡುವುದನ್ನು ನೋಡಿದ ಪ್ರಾಣಿ ಕಾರ್ಯಕರ್ತ ಬೀರೇಂದ್ರ ಅವರು ಇಲಿಯನ್ನು ಚರಂಡಿಯಿಂದ ಹೊರತೆಗೆದರು. ಆದರೆ ಅವುಗಳಲ್ಲಿ ಕೆಲವು ಉಳಿಸಲು ಸಾಧ್ಯವಾಗದೆ ಸಾವನ್ನಪ್ಪಿದೆ. ಬೀರೇಂದ್ರ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಸಂಸ್ಥೆಯ ಅಧ್ಯಕ್ಷೆ ಮೇನಕಾ ಗಾಂಧಿ.

ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಇಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇಲಿಗೆ ಯಾಕೆ ಹೀಗೆ ಮಾಡಿದೆ ಎಂದು ಮನೋಜ್ ಅವರನ್ನು ಬೀರೇಂದ್ರ ಕೇಳಿದ್ದಾರೆ. ಆದರೆ ಮನೋಜ್ ಅಸಡ್ಡೆಯ ಉತ್ತರ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮನೋಜ್, 'ನಾನು ಅದೇ ರೀತಿ ಮಾಡುತ್ತೇನೆ ಮತ್ತು ಅನೇಕ ಇಲಿಗಳನ್ನು ಕೊಲ್ಲುತ್ತೇನೆ. ಮುಂದೆಯೂ ಮಾಡುತ್ತೇನೆ' ಎಂದು ಹೇಳಿದ್ದಾರೆ. ಮನೋಜ್ ಬೆದರಿಕೆಯ ನಂತರವೇ ಬೀರೇಂದ್ರ ದೂರು ನೀಡಿದ್ದರು. ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

UP: FIR against man who killed rat

ಘಟನೆಯ ಬಳಿಕ ಆರೋಪಿ ಮನೋಜ್ ನನ್ನು ಬಂಧಿಸಲಾಗಿದೆ, ಆದರೆ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ ಎಂದು ಬೀರೇಂದ್ರ ಹೇಳಿದ್ದಾರೆ. ಒಂದು ವೇಳೆ ಪ್ರಕರಣ ಗಂಭೀರವಾಗಿದ್ದರೆ ವಿನಾಕಾರಣ ಪ್ರಾಣಿ ಹಿಂಸೆ ಮಾಡಿರುವುದು ಸಾಬೀತಾದರೆ ಈ ಪ್ರಕರಣದಲ್ಲಿ ಆರೋಪಿ ಮನೋಜ್‌ಗೆ ಸೆಕ್ಷನ್ 429 ರ ಅಡಿಯಲ್ಲಿ 5 ವರ್ಷ ಶಿಕ್ಷೆಯೂ ಆಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+