ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುವನಂತಪುರ: ಬ್ರೇಕ್ ಅಪ್ ನಿರಾಕರಿಸಿದ್ದಕ್ಕೆ ಗೆಳತಿ ಕೊಟ್ಟಳು ವಿಷ- ವಿದ್ಯಾರ್ಥಿ ಸಾವು

|
Google Oneindia Kannada News

ತಿರುವನಂತಪುರಂ ಅಕ್ಟೋಬರ್ 31: 23 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಗೆಳತಿ ಕೊಟ್ಟ ವಿಷ ಸೇವಿಸಿ ಸಾವನ್ನಪ್ಪಿದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಎಂಟು ಗಂಟೆಗಳ ವಿಚಾರಣೆಯ ಬಳಿಕ ಆಕೆ ತಪ್ಪೊಪ್ಪಿಕೊಂಡಿದ್ದು, ಆಕೆಯನ್ನು ವಶಕ್ಕೆ ಪಡೆಯಲಾಗಿದೆ.

23 ವರ್ಷದ ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ ಅಕ್ಟೋಬರ್ 25ರಂದು ನಿಧನರಾದರು. ಆದರೆ ಇಂದು (ಅಕ್ಟೋಬರ್ 31) ಪೊಲೀಸರು ಆತನಿಗೆ ಗೆಳತಿಯೇ ವಿಷ ನೀಡಿದ್ದಾಳೆ ಎಂದು ದೃಢಪಡಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಜಿತ್ ಕುಮಾರ್ ಅವರು ತಿರುವನಂತಪುರಂ ಮೂಲದ ಶರೋನ್ ರಾಜ್ ಅವರನ್ನು ಅವರ ಸ್ನೇಹಿತೆ ಗ್ರೀಷ್ಮಾ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸಿವಿಲ್ ಡಿಪ್ಲೊಮಾ: ರಾಜ್ಯಕ್ಕೆ ಫಸ್ಟ್ ರ್‍ಯಾಂಕ್ ಪಡೆದ 71 ವರ್ಷದ ಹಿರಿಯ ವಿದ್ಯಾರ್ಥಿ ಸಿವಿಲ್ ಡಿಪ್ಲೊಮಾ: ರಾಜ್ಯಕ್ಕೆ ಫಸ್ಟ್ ರ್‍ಯಾಂಕ್ ಪಡೆದ 71 ವರ್ಷದ ಹಿರಿಯ ವಿದ್ಯಾರ್ಥಿ

8 ಗಂಟೆಗಳ ವಿಚಾರಣೆಯ ನಂತರ ಗ್ರೀಷ್ಮಾ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಶರೋನ್ ರಾಜ್ ಸಂಬಂಧವನ್ನು ಕೊನೆಗಾಣಿಸಲು ಅವನು ಒಪ್ಪದ ಕಾರಣ ಅವನನ್ನು ಗ್ರೀಷ್ಮಾ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ.

Thiruvananthapuram: Student dies after consuming poison given by girlfriend for refusing to break up

"ಅವನನ್ನು ತನ್ನ ಮನೆಗೆ ಕರೆದು ಆಯುರ್ವೇದದ ಮಿಶ್ರಣದಲ್ಲಿ ಕಪಿಕ್ ಎಂಬ ಕೀಟನಾಶಕವನ್ನು ಬೆರೆಸಿ ಕುಡಿಯುವಂತೆ ಮಾಡಿದ್ದಾಳೆ. ಇದಾದ ಕೂಡಲೇ ವಾಂತಿ ಮಾಡಿಕೊಂಡ ಶರೋನ್ ರಾಜ್ ಬಳಿಕ ತನ್ನ ಸ್ನೇಹಿತನೊಂದಿಗೆ ತೆರಳಿದ್ದ. ಕೊಲೆಯನ್ನು ಮೊದಲೇ ಯೋಜಿಸಲಾಗಿತ್ತು ಮತ್ತು ಅದನ್ನು ಕಾರ್ಯಗತಗೊಳಿಸಲು ಅವಳು ಅವನನ್ನು ಮನೆಗೆ ಕರೆದಿದ್ದಳು "ಎಂದು ಎಡಿಜಿಪಿ ಹೇಳಿದರು. ಅಕ್ಟೋಬರ್ 14 ರಂದು ಈ ಘಟನೆ ನಡೆದಿತ್ತು. ಘಟನೆಯ ಬಳಿಕ ಶರೋನ್ ರಾಜ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಒದ್ದಾಡಿದ್ದ.

ಬ್ರೇಕ್ ಅಪ್ ನಿರಾಕರಿಸಿದ್ದಕ್ಕೆ ಗೆಳತಿ ಕೊಟ್ಟಳು ವಿಷ; ಗ್ರೀಷ್ಮಾ ಮತ್ತು ಶರೋನ್ ಒಂದು ವರ್ಷ ಸಂಬಂಧದಲ್ಲಿದ್ದರು. ಫೆಬ್ರವರಿ 2022 ರಲ್ಲಿ, ಅವರ ನಡುವೆ ಕೆಲವು ಸಮಸ್ಯೆಗಳು ಉದ್ಬವಿಸಿದವು. ಗ್ರೀಷ್ಮಾ ಅವರ ಮದುವೆಯನ್ನು ಬೇರೆಯವರೊಂದಿಗೆ ನಿಗದಿಪಡಿಸಲಾಯಿತು. ಆದಾಗ್ಯೂ, ಅವರು ಸಂಬಂಧವನ್ನು ಮುಂದುವರೆಸಿದರು. ಇತ್ತೀಚೆಗೆ ಅವರಿಬ್ಬರ ನಡುವೆ ಮತ್ತೆ ಕೆಲವು ಸಮಸ್ಯೆಗಳು ಉಂಟಾದವು. ಆದರೆ ಶರೋನ್ ಗ್ರೀಷ್ಮಾಳನ್ನ ಬಿಡಲು ಸಿದ್ದನಿರಲಿಲ್ಲ. ಗ್ರೀಷ್ಮಾ ಕೂಡ ಶರೋನ್‌ನಿಂದ ದೂರವಾಗಲು ಹಲವಾರು ಬಾರಿ ಪ್ರಯತ್ನ ಮಾಡಿದಳು. ಆದರೆ ಅದು ಸಾಧ್ಯವಾಗಲಿಲ್ಲ. ಇದಕ್ಕಾಗಿ ಅವರಿಬ್ಬರ ನಡುವೆ ಹಲವಾರು ಬಾರಿ ಜಗಳಗಳಾದವು. ಗ್ರೀಷ್ಮಾ ಶರೋನ್‌ ನೊಂದಿಗೆ ಹೇಗಾದರೂ ಸಂಬಂಧವನ್ನು ಕೊನೆಗೊಳಿಸಲು ಒಪ್ಪುವಂತೆ ಮಾಡಲು ಮೃದುವಾದ ವಿಧಾನಗಳನ್ನು ಬಳಕೆ ಮಾಡಿದ್ದಳು.

ಗ್ರೀಷ್ಮಾ ತನ್ನ ಜಾತಕದ ಪ್ರಕಾರ, ತನ್ನ ಮೊದಲ ಪತಿ ಸಾಯುತ್ತಾನೆ ಎಂದು ಹೇಳುವ ಮೂಲಕ ಅವನನ್ನು ಬಿಟ್ಟು ಹೋಗುವಂತೆ ಹೆದರಿಸಲು ಕಥೆಯನ್ನು ಕಟ್ಟಿದ್ದಳು. ಇದ್ಯಾವುದಕ್ಕೂ ಬಗ್ಗದ ಶರೋನ್‌ನನ್ನು ಅವಳು ಕೊಲ್ಲಲು ನಿರ್ಧರಿಸಿದಳು. ಸಂಚು ರೂಪಿಸಿದಂತೆ ಶರೋನ್‌ನನ್ನು ಮನೆಗೆ ಕರಿಸಿ ಆಯುರ್ವೇದದ ಮಿಶ್ರಣದಲ್ಲಿ ಕಪಿಕ್ ಎಂಬ ಕೀಟನಾಶಕವನ್ನು ಬೆರೆಸಿ ಕುಡಿಸಿದ್ದಾಳೆ. ಆ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Thiruvananthapuram: Student dies after consuming poison given by girlfriend for refusing to break up

ಗೆಳೆಯನ ಸಾವುಬದುಕಿನ ಹೋರಾಟದಲ್ಲೂ ಬಾಯಿಬಿಡದ ಗೆಳತಿ; ಈ ಬಗ್ಗೆ ಅನುಮಾನ ಬಂದು "ಶರೋನ್ ಅವರ ಸಹೋದರ ಗ್ರೀಷ್ಮಾಳಿಗೆ ಏನು ಕೊಟ್ಟಿದ್ದಾರೆ ಎಂಬುದನ್ನು ಪರಿಶೀಲಿಸಲು ನಿರಂತರವಾಗಿ ಕರೆ ಮಾಡುತ್ತಿದ್ದರು. ಆದರೆ ಅವಳು ಭಯದಿಂದ ಏನನ್ನೂ ಬಹಿರಂಗಪಡಿಸಲಿಲ್ಲ. ಆಕೆ ವಿಚಾರವನ್ನು ತಿಳಿಸಿದ್ದರೆ ಆತನನ್ನು ಉಳಿಸಬಹುದಿತ್ತು'' ಎಂದು ಎಡಿಜಿಪಿ ಹೇಳಿದರು.

ಆದರೂ ಆಸ್ಪತ್ರೆಯಲ್ಲಿದ್ದ ಶರೋನ್ ತನ್ನ ಸಾವಿನ ಹೇಳಿಕೆಯಲ್ಲಿ ಯಾರನ್ನೂ ಅನುಮಾನಿಸುವುದಿಲ್ಲ ಎಂದು ಪದೇ ಪದೇ ಹೇಳಿದ್ದರು. ಮ್ಯಾಜಿಸ್ಟ್ರೇಟ್ ಅಕ್ಟೋಬರ್ 20 ರಂದು ಅವರ ಸಾವಿನ ಹೇಳಿಕೆಯನ್ನು ದಾಖಲಿಸಿದ್ದಾರೆ. ಪೊಲೀಸರು ಅಕ್ಟೋಬರ್ 21 ರಂದು ಹೇಳಿಕೆಯನ್ನು ತೆಗೆದುಕೊಂಡರು.

ಶರೋನ್ ಅಕ್ಟೋಬರ್ 25 ರಂದು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು. ಇದು ಆತನ ಗೆಳತಿಯ ಯೋಜಿತ ಕೊಲೆ ಎಂದು ಆತನ ಕುಟುಂಬದವರು ಆರೋಪಿಸಿದ್ದಾರೆ. ಇದೀಗ, 8 ಗಂಟೆಗಳ ವಿಚಾರಣೆಯ ನಂತರ ಅಪರಾಧವನ್ನು ಒಪ್ಪಿಕೊಂಡ ಗ್ರೀಷ್ಮಾ ಅವರನ್ನು ತಿರುವನಂತಪುರಂನಲ್ಲಿ ಪೊಲೀಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

English summary
A 23-year-old college student died after consuming poison given by his girlfriend in Thiruvananthapuram, Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X