ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ ಹಿಂಪಡೆದ ಕೇಂದ್ರ : ಅಶ್ವಿನಿ ವೈಷ್ಣವ್ ಘೋಷಣೆ

|
Google Oneindia Kannada News

ನವದೆಹಲಿ, ಆಗಸ್ಟ್ 3: ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ಲೋಕಸಭೆಯಲ್ಲಿ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ, 2019 ಅನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದಾರೆ.

ಮಸೂದೆಯ ಮೇಲೆ ಸಂಸತ್ತಿನ ಜಂಟಿ ಸಮಿತಿ (JCP) ನೀಡುವ ಸಲಹೆಗಳನ್ನು ಉಲ್ಲೇಖಿಸಿ ಸಮಗ್ರ ಕಾನೂನು ಚೌಕಟ್ಟಿಗೆ ಹೊಂದಿಕೊಳ್ಳುವ ಹೊಸ ಮಸೂದೆಯನ್ನು ತರಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ವಾಪಸಾತಿಗೆ ಕಾರಣಗಳನ್ನು ತಿಳಿಸುತ್ತಾ, ಸರ್ಕಾರವು ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ, 2019 ಅನ್ನು ಸಂಸತ್ತಿನ ಜಂಟಿ ಸಮಿತಿಯು ಹೆಚ್ಚು ವಿವರವಾಗಿ ಚರ್ಚಿಸಿದೆ, 81 ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ ಮತ್ತು ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಸಮಗ್ರ ಕಾನೂನು ಚೌಕಟ್ಟಿನ ಬಗ್ಗೆ 12 ಶಿಫಾರಸುಗಳನ್ನು ಮಾಡಲಾಗಿದೆ ಎಂದರು.

ಸಂಸತ್ತು ರೌಂಡಪ್: ಕೃಷಿ ಸಾಲ ಮನ್ನಾ ಚರ್ಚೆ, ಮಂಕಿಪಾಕ್ಸ್ ಬಗ್ಗೆ ಸರ್ಕಾರದ ಅಭಯಸಂಸತ್ತು ರೌಂಡಪ್: ಕೃಷಿ ಸಾಲ ಮನ್ನಾ ಚರ್ಚೆ, ಮಂಕಿಪಾಕ್ಸ್ ಬಗ್ಗೆ ಸರ್ಕಾರದ ಅಭಯ

ಜೆಸಿಪಿ ವರದಿಯನ್ನು ಪರಿಗಣಿಸಿ ಸಮಗ್ರ ಕಾನೂನು ಚೌಕಟ್ಟಿನ ಮೇಲೆ ಕೆಲಸ ಮಾಡಲಾಗುತ್ತಿದೆ. ಆದ್ದರಿಂದ, ಪ್ರಸ್ತುತ ಸಂದರ್ಭಗಳಲ್ಲಿ, ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ, 2019 ಅನ್ನು ಹಿಂಪಡೆಯಲು ಮತ್ತು ಸಮಗ್ರ ಕಾನೂನು ಚೌಕಟ್ಟಿಗೆ ಹೊಂದಿಕೊಳ್ಳುವ ಹೊಸ ಮಸೂದೆಯನ್ನು ಪ್ರಸ್ತುತಪಡಿಸಲು ಪ್ರಸ್ತಾಪಿಸಲಾಗಿದೆ ಎಂದು ಅಶ್ವಿನಿ ವೈಷ್ಣವ್ ಲೋಕಸಭೆಗೆ ತಿಳಿಸಿದರು.

 542 ಪುಟಗಳ ವರದಿ ಸಲ್ಲಿಸಿದ್ದ ಜೆಸಿಪಿ

542 ಪುಟಗಳ ವರದಿ ಸಲ್ಲಿಸಿದ್ದ ಜೆಸಿಪಿ

ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಬಳಿಕ, 2019ರಲ್ಲಿ ಮಸೂದೆಯನ್ನು ಸಮಿತಿಯ ಪರಿಶೀಲನೆಗಾಗಿ ಕಳುಹಿಸಲಾಗಿತ್ತು. ಈ ಮಸೂದೆ ಜಾರಿಯಿಂದ ಖಾಸಗಿತನ ಕಾನೂನು, ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ವಿರೋಧ ಪಕ್ಷಗಳ ಆರೋಪ ಮಾಡಿದ್ದವು.

ಡಿಸೆಂಬರ್ 2021 ರಲ್ಲಿ, ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯ ಮೇಲಿನ ಸಂಸತ್ತಿನ ಜಂಟಿ ಸಮಿತಿಯು ಒಟ್ಟಾರೆ 93 ಶಿಫಾರಸುಗಳು ಮತ್ತು 81 ತಿದ್ದುಪಡಿಗಳೊಂದಿಗೆ 542 ಪುಟಗಳ ವರದಿಯನ್ನು ಸಲ್ಲಿಸಿತು. ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ಪಿ.ಪಿ. ಚೌಧರಿ ಅವರು ಮಸೂದೆಗೆ 97 ತಿದ್ದುಪಡಿಗಳು ಮತ್ತು ಸುಧಾರಣೆಗಳನ್ನು ಶಿಫಾರಸು ಮಾಡಿದರು.

 ಮಸೂದೆ ಜಾರಿಗೆ ವಿರೋಧ ಯಾಕೆ?

ಮಸೂದೆ ಜಾರಿಗೆ ವಿರೋಧ ಯಾಕೆ?

ಈ ಮಸೂದೆ ಜಾರಿಯಿಂದ ರಾಷ್ಟ್ರೀಯ ಭದ್ರತೆ ಮತ್ತಿತರ ಕಾರಣಗಳನ್ನು ನೀಡಿ, ಜನರ ಖಾಸಗಿ ಮಾಹಿತಿಗಳಿಗೆ ಪ್ರವೇಶ ನೀಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಿದಂತಾಗುತ್ತದೆ ಎಂದು ವಿರೋಧ ಪಕ್ಷಗಳು ವಾದಿಸಿದ್ದವು.
ಆದರೆ ಮಸೂದೆಯ ಪ್ರಕಾರ, ಖಾಸಗಿ ಡೇಟಾವನ್ನು ವ್ಯಕ್ತಿಯನ್ನು ಗುರುತಿಸಲು ಸಹಾಯ ಮಾಡುವ ಮಾಹಿತಿ ಎಂದು ವ್ಯಾಖ್ಯಾನಿಸಿತ್ತು. ವ್ಯಕ್ತಿಯ ಗುರುತಿನ ಗುಣಸ್ವಭಾವ, ಲಕ್ಷಣ ಮತ್ತು ಇತರೆ ವಿವರಗಳನ್ನು ಒಳಗೊಂಡಿರುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿತ್ತು.

ಈ ಮಸೂದೆ ಜಾರಿಯಿಂದ ಸರ್ಕಾರಕ್ಕೆ ಜನರ ಖಾಸಗಿ ಮಾಹಿತಿಯನ್ನು ಸಂಗ್ರಹಿಸಲು ಅವಕಾಶ ನೀಡಿದಂತಾಗುತ್ತದೆ. ನಾಗರಿಕರ ಮೇಲೆ ಸರ್ಕಾರಕ್ಕೆ ಬೇಹುಗಾರಿಕೆ ನಡೆಸಲು ಸುಲಭವಾಗುತ್ತದೆ ಎಂದು ವಿಪಕ್ಷಗಳು ಆರೋಪಿಸಿದ್ದವು, ಇದಕ್ಕೆ ಉತ್ತರ ನೀಡಿದ್ದ ಸರ್ಕಾರ ಅಂತಹ ಪ್ರಯತ್ನಗಳನ್ನು ತಡೆಯಲು ಮಸೂದೆಯಲ್ಲಿ ಕಾನೂನುಗಳಿದೆ ಎಂದು ಹೇಳಿತ್ತು.

 ಮಸೂದೆ ಬಗ್ಗೆ ಟೆಕ್‌ ಕಂಪನಿಗಳ ಕಳವಳ

ಮಸೂದೆ ಬಗ್ಗೆ ಟೆಕ್‌ ಕಂಪನಿಗಳ ಕಳವಳ

ಕಂಪನಿಗಳು ಭಾರತದಲ್ಲಿ ಹಣಕಾಸು, ಆರೋಗ್ಯ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಒಳಗೊಂಡಂತೆ ಸೂಕ್ಷ್ಮ ಮತ್ತು ನಿರ್ಣಾಯಕ ದತ್ತಾಂಶಗಳ ಕೆಲವು ವರ್ಗಗಳನ್ನು ಮಾತ್ರ ಸಂಗ್ರಹಿಸಬಹುದು ಎಂದು ಬಿಲ್‌ನಲ್ಲಿ ಹೇಳಲಾಗಿತ್ತು.
ಮೆಟಾ, ಗೂಗಲ್ ಮತ್ತು ಅಮೆಜಾನ್ ಕೂಡ ಜಂಟಿ ಸಂಸದೀಯ ಸಮಿತಿಯ ಕೆಲವು ಶಿಫಾರಸುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು.

ನವ ದೆಹಲಿ ಮೂಲದ ಇಂಟರ್ನೆಟ್ ಫ್ರೀಡಂ ಫೌಂಡೇಶನ್, ಮಸೂದೆಯು "ಸರ್ಕಾರಿ ಇಲಾಖೆಗಳಿಗೆ ದೊಡ್ಡ ವಿನಾಯಿತಿಗಳನ್ನು ಒದಗಿಸುತ್ತದೆ, ದೊಡ್ಡ ಸಂಸ್ಥೆಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ ಮತ್ತು ನಿಮ್ಮ ಖಾಸಗಿತನದ ಮೂಲಭೂತ ಹಕ್ಕನ್ನು ಸಮರ್ಪಕವಾಗಿ ಗೌರವಿಸುವುದಿಲ್ಲ" ಎಂದು ಆರೋಪಿಸಿತ್ತು.

 ಮಸೂದೆ ಬಗ್ಗೆ ಹಲವು ನಾಯಕ ಪ್ರತಿಕ್ರಿಯೆ

ಮಸೂದೆ ಬಗ್ಗೆ ಹಲವು ನಾಯಕ ಪ್ರತಿಕ್ರಿಯೆ

ಮಸೂದೆಯನ್ನು ಹಿಂತೆಗೆದುಕೊಳ್ಳುವ ಕೇಂದ್ರದ ನಿರ್ಧಾರದ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಕ್ರಿಯೆ ನೀಡಿದ್ದಾರೆ, ಜಂಟಿ ಆಯ್ಕೆ ಸಮಿತಿಯ ವರದಿಯ ವಿರುದ್ಧ ಯುನೈಟೆಡ್ ಸ್ಟೇಟ್ಸ್‌ನಿಂದ ಒತ್ತಡವಿದೆ. ಕೇಂದ್ರದ ನಿರ್ಧಾರದಿಂದ ದೊಡ್ಡ ಟೆಕ್ ಕಂಪನಿಗಳು ತುಂಬಾ ಸಂತೋಷಪಡುತ್ತವೆ ಎಂದು ಹೇಳಿದರು.

ಸಮಿತಿಯ ಸದಸ್ಯರೂ ಆಗಿರುವ ಹಿರಿಯ ಬಿಜೆಡಿ ನಾಯಕ ಭರ್ತೃಹರಿ ಮಹತಾಬ್, ಕೇಂದ್ರವು ಹೊಸ ಮಸೂದೆಯನ್ನು ಮರಳಿ ತರಲಿದೆ ಎಂದು ಹೇಳಿದರು. "ಮಸೂದೆಯು 75 ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಹೊಂದಿತ್ತು. ಸರ್ಕಾರವು ಸುಮಾರು 12 ತಿದ್ದುಪಡಿಗಳನ್ನು ಮಾಡಿತು. ಆ ಎಲ್ಲಾ ತಿದ್ದುಪಡಿಗಳನ್ನುಮಾಡುವ ಬದಲು ಹೊಸ ಮಸೂದೆಯನ್ನು ತರುವುದು ಉತ್ತಮ. ಆದರೆ ಮಸೂದೆ ಬೇಗ ಬರಬೇಕು. ನಾವು ಡೇಟಾ ಸಂರಕ್ಷಣಾ ಕಾನೂನನ್ನು ಹೊಂದಿರಬೇಕು. ವಿಳಂಬ ಮಾಡಬಾರದು," ಎಂದು ಹೇಳಿದ್ದಾರೆ.

ಸಮಿತಿಯ ಮತ್ತೊಬ್ಬ ಸದಸ್ಯ, ಬಿಜು ಜನತಾ ದಳದ, ಅಮರ್ ಪಟ್ನಾಯಕ್ ರಾಜ್ಯಸಭೆಯಲ್ಲಿ, ಮಸೂದೆಯನ್ನು ಅಸ್ತಿತ್ವದಲ್ಲಿರುವ ರೂಪದಲ್ಲಿ ಹಿಂತೆಗೆದುಕೊಳ್ಳುವುದನ್ನು ಸ್ವಾಗತಿಸಿದರು ಆದರೆ ತರಲಾಗುವ ಹೊಸ ಮಸೂದೆಯು ಜೆಸಿಪಿಯ ಕಾಳಜಿಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"99 ಸೆಕ್ಷನ್‌ಗಳ ಮಸೂದೆಯಲ್ಲಿ 81 ತಿದ್ದುಪಡಿಗಳಿದ್ದವು ಮತ್ತು ತಿದ್ದುಪಡಿಗಳ ನಂತರವೂ ರಾಜ್ಯ ಮಟ್ಟದ ಡೇಟಾ ಸಂರಕ್ಷಣಾ ಪ್ರಾಧಿಕಾರಗಳು ಇರಬೇಕು ಎಂದು ಹೇಳುವ ಮೂಲಕ ನಾನು ಭಿನ್ನಾಭಿಪ್ರಾಯವನ್ನು ಸಲ್ಲಿಸಿದ್ದೇನೆ. ಅಸ್ತಿತ್ವದಲ್ಲಿರುವ ರೂಪದಲ್ಲಿ ಮಸೂದೆಯನ್ನು ಹಿಂಪಡೆಯುವುದನ್ನು ನಾನು ಬೆಂಬಲಿಸುತ್ತೇನೆ ಮತ್ತು ಪರಿಷ್ಕೃತ ಮಸೂದೆಯು ನಮ್ಮ ಶಿಫಾರಸ್ಸುಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತೇನೆ," ಎಂದು ಹೇಳಿದರು.

English summary
The Government withdrew The Personal Data Protection Bill, 2019. Union Information Technology Minister Ashwini Vaishnaw announced the Government decision, government has decided to come up with a fresh bill that fits into the comprehensive legal framework with reference to the suggestions made by the Joint Committee of Parliament (JCP) on the Bill. He added Later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X