ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆಗಳಲ್ಲಿ ಕಟ್ಟೆಚ್ಚರ ವಹಿಸಲು ರಾಜನಾಥ್ ಸೂಚನೆ

|
Google Oneindia Kannada News

ನವದೆಹಲಿ, ಡಿ, 17: ಉಗ್ರರ ಕರಿನೆರಳು ಭಾರತಕ್ಕೂ ವ್ಯಾಪಿಸುವ ಲಕ್ಷಣಗಳು ಕಾಣುತ್ತಿದ್ದು ದೇಶಾದ್ಯಂತ ಕಟ್ಟೆಚ್ಚರ ವಹಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೂಚಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ದೇಶದ ಎಲ್ಲಾ ಶಾಲೆಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಲೋಕಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಉಗ್ರರು ಮೊದಲು ಆಸ್ಟ್ರೇಲಿಯಾ ಈಗ ಪಾಕಿಸ್ತಾನದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಅಮಾಯಕ ಜೀವಗಳು ಬಲಿಯಾಗಿವೆ. ಆದರೆ ಭಾರತದಲ್ಲಿ ಇಂಥ ಘಟನೆ ನಡೆಯಲು ಅವಕಾಶ ನೀಡಬಾರದು. ಶಿಕ್ಷಣ ಸಂಸ್ಥೆಗಳು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. [ಉಗ್ರರನ್ನು ಬೂಟುಗಾಲಲ್ಲಿ ತುಳಿದ ಬೆಂಗಳೂರು ವಿದ್ಯಾರ್ಥಿಗಳು]

rajnath singh

ಸೈಬರ್ ಅಪರಾಧ ಪ್ರಕರಣಗಳ ಮೇಲೆ ಕಣ್ಣಿಡಲು ವಿಶೇಷ ಸಮಿತಿ ರಚಿಸುವ ಚಿಂತನೆಯಿದೆ. ಮೆಹದಿ ಪ್ರಕರಣದಿಂದ ಸೈಬರ್ ಅಪರಾಧದ ಗಾಂಭೀರ್ಯತೆ ಅರಿವಾಗಿದೆ. ಹಾಗಾಗಿ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಮಾಹಿತಿ ನೀಡಿದರು.[ಪಾಲಕರ ಮೇಲಿನ ಸೇಡಿಗೆ ಮಕ್ಕಳನ್ನು ಕೊಂದರಂತೆ...]

ಭಾರತದಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಉಗ್ರಗಾಮಿ ಸಂಘಟನೆಗಳ ಬೆಂಬಲಿಗರು ಮತ್ತು ಅವರಿಗೆ ಹಿಂದಿನಿಂದ ಕುಮ್ಮಕ್ಕು ನೀಡುತ್ತಿರುವ ದೇಶೀಯ ಸಂಘಟನೆಗಳ ಮೇಲೆ ಉಗ್ರ ಕ್ರಮ ತೆಗೆದುಕೊಳ್ಳಲಾಗುವುದು. ಮಹಾನಗರಗಳ ವಿಶೇಷ ಭದ್ರತೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

English summary
Home Minister Rajnath Singh instructed that all educational institutes must take security steps. Terrorists attack completely thrashed Pakistan and Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X