ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡದಲ್ಲಿ ಹಿಮಕುಸಿತ: 10 ಸಾವು- ಸಿಲುಕಿಕೊಂಡವರ ಪತ್ತೆಗಾಗಿ ಕಾರ್ಯಾಚರಣೆ: ವರದಿ

|
Google Oneindia Kannada News

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ದ್ರೌಪದಿಯ 2 ಪರ್ವತದಲ್ಲಿ ಇಂದು ಹಿಮಕುಸಿತ ಉಂಟಾಗಿದ್ದು 20 ಕ್ಕೂ ಹೆಚ್ಚು ಪರ್ವತಾರೋಹಣ ಪ್ರಶಿಕ್ಷಣಾರ್ಥಿಗಳು ಸಿಲುಕಿಕೊಂಡಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನೆಹರು ಪರ್ವತಾರೋಹಣ ಸಂಸ್ಥೆಯ ಸುಮಾರು 28 ಮಂದಿ ಪ್ರಶಿಕ್ಷಣಾರ್ಥಿಗಳು ಹಿಮಕುಸಿತದ ನಂತರ ಸಿಕ್ಕಿಬಿದ್ದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಹಿಂದೆ ಟ್ವೀಟ್ ಮಾಡಿದ್ದರು.

ಘಟನೆಯಲ್ಲಿ ಇದುವರೆಗೆ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಪ್ರಾಂಶುಪಾಲ ಅಮಿತ್ ಬಿಶ್ತ್ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಎಂಟು ಜನರನ್ನು ರಕ್ಷಿಸಲಾಗಿದೆ ಎಂದು ಹೇಳಲಾಗಿದೆ.

Breaking: ಉತ್ತರಾಖಂಡದ ದ್ರೌಪದಿ ಶಿಖರದಲ್ಲಿ ಹಿಮಕುಸಿತ- 20ಕ್ಕೂ ಹೆಚ್ಚು ಮಂದಿ ನಾಪತ್ತೆ Breaking: ಉತ್ತರಾಖಂಡದ ದ್ರೌಪದಿ ಶಿಖರದಲ್ಲಿ ಹಿಮಕುಸಿತ- 20ಕ್ಕೂ ಹೆಚ್ಚು ಮಂದಿ ನಾಪತ್ತೆ

ಜಿಲ್ಲಾಡಳಿತ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯಿಂದ ತ್ವರಿತ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಸಿಎಂ ಧಾಮಿ ಹೇಳಿದ್ದಾರೆ.

ಉತ್ತರಾಖಂಡ ಸಿಎಂ ಜೊತೆ ಮೇಲ್ವಿಚಾರಣೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು "ಭೂಕುಸಿತದಿಂದ ಅಮೂಲ್ಯ ಜೀವಗಳ ನಷ್ಟದಿಂದ ತೀವ್ರ ದುಃಖವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ. ತಾವು ಧಾಮಿ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿರುವುದಾಗಿ ತಿಳಿಸಿದ್ದಾರೆ.

"ಉತ್ತರಕಾಶಿಯಲ್ಲಿ ನೆಹರು ಪರ್ವತಾರೋಹಣ ಸಂಸ್ಥೆಯು ನಡೆಸಿದ ಪರ್ವತಾರೋಹಣ ಯಾತ್ರೆಯ ವೇಳೆ ಅಪ್ಪಳಿಸಿದ ಭೂಕುಸಿತದಿಂದಾಗಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದರಿಂದ ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ದು:ಖ ಭರಿಸುವ ಶಕ್ತಿ ದೇವರು ನೀಡಲಿ. ಮೃತರಿಗೆ ನನ್ನ ಸಂತಾಪಗಳು" ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಐಎಎಫ್ ಹೆಲಿಕಾಪ್ಟರ್ ನಿಯೋಜನೆ

'ಸಿಎಂ ಉತ್ತರಾಖಂಡ್ ಪುಷ್ಕರ್ ಧಾಮಿ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಇನ್ನೂ ಸಿಕ್ಕಿಬಿದ್ದಿರುವ ಪರ್ವತಾರೋಹಿಗಳ ನೆರವಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಲು ನಾನು IAF ಗೆ ಸೂಚನೆ ನೀಡಿದ್ದೇನೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ' ಎಂದು ಸಿಂಗ್ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಐಎಎಫ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಸಾವಿನ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ-ITBP ಪ್ರೊ ವಿವೇಕ್ ಪಾಂಡೆ

ಸಾವಿನ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ-ITBP ಪ್ರೊ ವಿವೇಕ್ ಪಾಂಡೆ

"18,000 ಅಡಿ ಎತ್ತರದಲ್ಲಿರುವ ದ್ರೌಪದಿಯ 2 ಪರ್ವತ ಶಿಖರವನ್ನು ತಲುಪಲು ಪರ್ವತಾರೋಹಣ ಸಂಸ್ಥೆಯಿಂದ ಒಂದು ಗುಂಪು ಹೊರಟಿತ್ತು. ಬೆಳಗ್ಗೆ 8 ಗಂಟೆ ಸುಮಾರಿಗೆ ಹಿಮಕುಸಿತ ಸಂಭವಿಸಿದ್ದು, 29 ಮಂದಿ ಸಿಕ್ಕಿಬಿದ್ದಿದ್ದಾರೆ. ತಕ್ಷಣ ತಂಡದ ಸದಸ್ಯರು ಎಂಟು ಮಂದಿಯನ್ನು ರಕ್ಷಿಸಿದ್ದಾರೆ. ಸಾವಿನ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ"ಎಂದು ITBP ಪ್ರೊ ವಿವೇಕ್ ಪಾಂಡೆ ಉಲ್ಲೇಖಿಸಿ ANI ವರದಿ ಮಾಡಿದೆ.

ಐಟಿಬಿಪಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ನಿಂದ ಕಾರ್ಯಚರಣೆ

ಐಟಿಬಿಪಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ನಿಂದ ಕಾರ್ಯಚರಣೆ

"ಐಟಿಬಿಪಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಸ್ಥಳೀಯ ಪೊಲೀಸರು ಮಾಹಿತಿ ಪಡೆದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಗಾಯಗೊಂಡ ಮತ್ತು ಸಿಕ್ಕಿಬಿದ್ದ ಎಲ್ಲರನ್ನು ಹೆಲಿಪ್ಯಾಡ್‌ನಿಂದ ಕರೆದೊಯ್ಯಲಾಗುತ್ತದೆ, ಅಲ್ಲಿಂದ ಅವರನ್ನು ಮಟ್ಲಿ ಹೆಲಿಪ್ಯಾಡ್‌ಗೆ ಇಳಿಸಲಾಗುತ್ತದೆ. ಚಿಕಿತ್ಸೆಗೆ ಐಟಿಬಿಪಿ ಆಸ್ಪತ್ರೆಯನ್ನು ಬಳಸಲಾಗುವುದು'' ಎಂದು ಪಾಂಡೆ ಹೇಳಿದರು.

English summary
As many as 10 were reportedly killed, while more than 20 mountaineering trainees are stuck following an avalanche in Draupadi's Danda-2 mountain in Uttarakhand's Uttarkashi district on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X