ಬಜೆಟ್ ಅಧಿವೇಶನ ಮೊಟಕು: ಸ್ಪೀಕರ್ ಭೇಟಿಗೆ ತೆರಳಿದ ಪ್ರಧಾನಿ ಮೋದಿ ಮತ್ತು ಸಚಿವರು
ನವದೆಹಲಿ, ಮಾರ್ಚ್. 23: ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ಕಲಾಪವನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸಂಸತ್ತಿನ ಅಧಿವೇಶನ ಮುಂದೂಡಲ್ಪಟ್ಟ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಸಚಿವರು ಗುರುವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸಭೆ ನಡೆಸುತ್ತಿದ್ದಾರೆ.
ಹಿರಿಯ ಸಚಿವರಾದ ರಾಜನಾಥ್ ಸಿಂಗ್, ಪ್ರಹ್ಲಾದ್ ಜೋಶಿ ಕಿರಣ್ ರಿಜಿಜು ಮುಂತಾದವರು ಪ್ರಧಾನಿ ಮೋದಿಗೆ ಸಾಥ್ ನೀಡಿದ್ದಾರೆ. ಕಲಾಪ ಸ್ಥಗೀತಗೊಂಡಿರುವ ಬೆನ್ನಲ್ಲೇ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗುತ್ತಿರುವ ಅಜೆಂಡಾ ತಿಳಿದಿಲ್ಲ. ಆದರೆ, ಇದು ಕಲಾಪದ ಬಿಕ್ಕಟ್ಟಿಗೆ ಸಂಬಂಧಿಸಿರಬಹುದು ಎಂಬ ಊಹಾಪೋಹವಿದೆ. ಬಜೆಟ್ ಮೇಲಿನ ಹಣಕಾಸು ಮಸೂದೆಯ ನಂತರ, ಎರಡನೇ ಮಸೂದೆಯನ್ನು ಇಂದು ಅಂಗೀಕರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಟೀಕೆ ಮಾಡಿದ ಕಾರಣ ಮಾನನಷ್ಟ ಮೊಕದ್ದಮೆಯಲ್ಲಿ ಗುರುವಾರ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿಯ ಅನರ್ಹತೆ ಕೂಡ ಈ ಭೇಟಿಯ ಚರ್ಚೆಯಲ್ಲಿ ನಡೆಯಬಹುದು ಎಂಬ ಊಹಾಪೋಹವಿದೆ. ರಾಹುಲ್ ಗಾಂಧಿ ಅವರ ಅನರ್ಹತೆಗೆ ಸಂಬಂಧಿಸಿದಂತೆ ಬಿಜೆಪಿ ತೀವ್ರವಾಗಿ ಒತ್ತಡ ಹಾಕುತ್ತಿದ್ದು, ಈ ನಿರ್ಧಾರವು ಪ್ರಸ್ತುತ ಸ್ಪೀಕರ್ ಅವರ ಕೈಯಲ್ಲಿದೆ.
ಕಳೆದ ವಾರದಿಂದ, ಅದಾನಿ - ಹಿಂಡೆನ್‌ಬರ್ಗ್ ಗಲಾಟೆ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ಪ್ರತಿಪಕ್ಷಗಳು ಸಂಸತ್ತಿನಲ್ಲಿ ವಾಗ್ದಾಳಿ ನಡೆಸುತ್ತಿವೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಕುರಿತು ರಾಹುಲ್ ಗಾಂಧಿ ಅವರು ಮಾಡಿದ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಈಗೀನ ಸೂರತ್ ನ್ಯಾಯಾಲಯದ ತೀರ್ಪು ಬಿಜೆಪಿಗೆ ಮತ್ತಷ್ಟು ಟೀಕಿಸಲು ಅವಕಾಶ ಮಾಡಿಕೊಟ್ಟಿದೆ.

ಗುರುವಾರ ಬೆಳಗ್ಗೆ, ಸದನದ ಮೇಜಿನ ಮೇಲೆ ಕಾಗದಗಳನ್ನು ಎಸೆದ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿ ಹಿಂಡೆನ್ಬರ್ಗ್ - ಅದಾನಿ ಸಮಸ್ಯೆಯನ್ನು ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿಗೆ ಒತ್ತಾಯಿಸಿದೆ. ಭಿತ್ತಿ ಫಲಕಗಳನ್ನು ಪ್ರದರ್ಶಿಸಿದ ಹಲವಾರು ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ವೇದಿಕೆ ಬಳಿ ಧರಣಿ ನಡೆಸಿದ್ದಾರೆ. ಬಳಿಕ ಗಲಾಟೆ ತೀವ್ರವಾಗಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಬೇಕಾಯಿತು.
ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಗಲಾಟೆಯನ್ನು ಪರಿಹರಿಸಲು ಪದೇ ಪದೇ ಸರ್ವಪಕ್ಷ ಸಭೆಗಳನ್ನು ನಡೆಸಿದ್ದಾರೆ. ಆದರೂ ಎರಡು ಪಕ್ಷಷಗಳು ತಮ್ಮ ಪ್ರತಿಭಟನೆ ಮತ್ತು ಒತ್ತಾಯವನ್ನು ಬಿಟ್ಟು ಸುಗಮ ಕಲಾಪಕ್ಕೆ ಅವಕಾಶ ನೀಡುತ್ತಿಲ್ಲ.












Click it and Unblock the Notifications