74th Republic day 2023: ಪಾಕಿಸ್ತಾನದ ಪಡೆಗಳಿಗೆ ಸಿಹಿ ಹಂಚಿದ ಭಾರತ !
ಭಾರತದಲ್ಲಿ 74ನೇ ಗಣರಾಜ್ಯೋತ್ಸವ ಅತ್ಯಂತ ಸಂಭ್ರಮದಿಂದ ನಡೆಯಿತು. ಇದೇ ವೇಳೆ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದ ವೈರಿ ರಾಷ್ಟ್ರ ಪಾಕಿಸ್ತಾನಕ್ಕೂ ಸಿಹಿ ಹಂಚಿ ಶುಭಾಶಯ ತಿಳಿಸಿದ ಘಟನೆ ನಡೆಯಿತು.
ನವದೆಹಲಿ, ಜನವರಿ 26: ಭಾರತದಲ್ಲಿ 74ನೇ ಗಣರಾಜ್ಯೋತ್ಸವ ಅತ್ಯಂತ ಸಂಭ್ರಮದಿಂದ ನಡೆಯಿತು. ಇದೇ ವೇಳೆ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದ ವೈರಿ ರಾಷ್ಟ್ರ ಪಾಕಿಸ್ತಾನಕ್ಕೂ ಸಿಹಿ ಹಂಚಿ ಶುಭಾಶಯ ತಿಳಿಸಿದ ಘಟನೆ ನಡೆಯಿತು.
ಗುರುವಾರ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ ಮತ್ತು ಪಾಕಿಸ್ತಾನ ರೇಂಜರ್‌ಗಳು ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಈ ಸೌಹಾರ್ದಯುತ ವಾತಾವರಣಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೇ ಸಾಕ್ಷಿಯಾಗಿದ್ದಾರೆ.

ಹೌದು, ಗಣರಾಜ್ಯೋತ್ಸವ ಆಚರಣೆ ಬಳಿಕ ಜಮ್ಮು ಕಾಶ್ಮೀರದ ಗಡಿ ಭಾಗಕ್ಕೆ ತೆರಳಿದ ರಕ್ಷಣಾ ಸಚಿವರು ಆರ್‌ಎಸ್ ಪುರ ಪ್ರದೇಶದಲ್ಲಿ ಐಬಿಯ ಸಿಬ್ಬಂದಿ ಮತ್ತು ಪಾಕಿಸ್ತಾನ ಪಡೆಗಳೊಂದಿಗೆ ಅವರು ಸಿಹಿ ವಿನಿಮಯ ಮಾಡಿಕೊಂಡರು. ಸ್ವತಃ ಸಚಿವರೇ ಸಿಹಿ ಹಂಚಿದರು. ಗಣರಾಜ್ಯೋತ್ಸವ ಬಗ್ಗೆ ಎಲ್ಲರಿಗೂ ಶುಭಾಷಯ ತಿಳಿಸಿದ್ದು, ಅದನ್ನು ರಾಜನಾಥ್ ಸಿಂಗ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ANI ವರದಿ ಮಾಡಿದೆ.
ದೇಶದ ಎಲ್ಲ ನಾಗರಿಕರಿಗೆ ಗಣರಾಜ್ಯೋತ್ಸವದ ಶುಭಾಶಯಗಳು. ಈ ದಿನ ಭಾರತೀಯರಿಗೆ ದೇಶದ ಸಾಂವಿಧಾನಿಕ ಸಂಪ್ರದಾಯಗಳನ್ನು ಬಲಪಡಿಸಲು ಹಾಗೂ ನವಭಾರತದ ನಿಮಾರ್ಣಕ್ಕೆ ಸಂಕಲ್ಪಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕಿದೆ. ಭಾರತದ ಎಲ್ಲಾ ಸಂವಿಧಾನ ರಚನಾಕಾರರು ಹಾಗೂ ಸ್ವಾತಂತ್ರ್ಯ ಹೋರಾಟಗಾರಗೂ ವಂದನೆಗಳು ಎಂದು ಅವರು ಬರೆದು ಪೋಸ್ಟ್ ಮಾಡಿದ್ದಾರೆ.
ಇಷ್ಟೇ ಅಲ್ಲದೇ ಗಣರಾಜ್ಯೋತ್ಸವ ಅಂಗವಾಗಿ ಪಶ್ಚಿಮ ಬಂಗಾಳದ ಸಿಲಿಗುರಿಯ ಫುಲ್ಬರಿ ಪ್ರದೇಶದಲ್ಲಿ, ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಬಿಎಸ್ಎಫ್ ತನ್ನ ಕೌಂಟರ್‌ಪಾರ್ಟ್ ನಲ್ಲಿನ ಬಾಂಗ್ಲಾ ಪಡೆಗಳ ಜತೆ ಸಿಂಹಿ ಹಂಚಿಸಿದರು. ಒಟ್ಟು 176 ಬೆಟಾಲಿಯನ್, ಬಾಂಗ್ಲಾದೇಶದ ಗಡಿಯಲ್ಲಿನ ಸಿಬ್ಬಂದಿಯೊಂದಿಗೆ ದೇಶಗಳ ನಡುವಿನ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಸಿಹಿ ವಿನಿಮಯ ಮಾಡಿಕೊಂಡೆವು ಎಂದು ಕಮಾಂಡರ್ ಒಬ್ಬರು ತಿಳಿಸಿದರು.

ಬುಧವಾರವೇ ಪಂಜಾಬ್ ರಾಜ್ಯದ ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ದೇಶಭಕ್ತಿಯ ಸಂಭ್ರಮ ಆವರಿಸಿತ್ತು. ಗಡಿಯಲ್ಲಿ ಪಾಕಿಸ್ತಾನ ರೇಂಜರ್‌ಗಳಿಗೆ ಭಾರತೀಯ ಯೋಧರು ಸಿಹಿ ವಿತರಿಸಿದರು.
ಬಿಎಸ್‌ಎಫ್ ಕಮಾಂಡೆಂಟ್ ಜಸ್ಬೀರ್ ಸಿಂಗ್ ಎನ್ಐಎ ಜೊತೆ ಮಾತನಾಡಿ, ಎಲ್ಲಾ ದೇಶವಾಸಿಗಳಿಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದರು. ಗಣತಂತ್ರ ದಿನ ರಾಷ್ಟ್ರೀಯತೆಯ ಸಂಕೇತವಾಗಿದೆ. ಇದನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಗಣರಾಜ್ಯೋತ್ಸ ಸಂಬಂಧ ಸಿಹಿ ಹಂಚಿದ್ದು, ಹಲವು ಕಾರ್ಯಕ್ರಮಗಳು ನಡೆಯಲಿವೆ. ಪಾಕಿಸ್ತಾನ ರೇಂಜರ್‌ಗಳಿಗೆ ಸಿಹಿ ಸಹ ನೀಡಲಾಗಿದೆ ಎಂದು ತಿಳಿಸಿದರು.












Click it and Unblock the Notifications