Kargil Vijay Diwas 2023: 24ನೇ ವಾರ್ಷಿಕೋತ್ಸವಕ್ಕೆ ಭಾರತ ಸಿದ್ಧತೆ, ಹೇಗಿರಲಿದೆ ಈ ಬಾರಿ ಸಂಭ್ರಮ? ತಿಳಿಯಿರಿ
ಬೆಂಗಳೂರು, ಜುಲೈ 25: ಇಡಿ ಭಾರತವೇ ಹೆಮ್ಮೆಪಡುವಂತಹ 24ನೇ ಕಾರ್ಗಿಲ್ ವಿಜಯೋತ್ಸವವು ನಾಳೆ ಬುಧವಾರ ಜುಲೈ 26ರಂದು ಲಡಾಖ್‌ನ ದ್ರಾಸ್ ನಲ್ಲಿ ಜರುಗಲಿದೆ. ಈ ಸಂಬಂಧ ಮಂಗಳವಾರವೇ ಭರ್ಜರಿ ಸಿದ್ಧತೆಗಳು ನಡೆದಿವೆ. ಇಲ್ಲಿನ ಯುದ್ಧ ಸ್ಮಾರಕಕ್ಕೆ ಅಂತಿಮ ರೂಪ ಕೊಡಲಾಗುತ್ತದೆ.
1999ರಲ್ಲಿ ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಯುದ್ಧದಲ್ಲಿ ಭಾರತವು ವಿಜಯ ಸಾಧಿಸಿ ಇಂದಿಗೆ 24 ವರ್ಷಗಳು ಉರುಳಿವೆ. ಈ ವಿಜಯೋತ್ಸವವನ್ನು ಪ್ರತಿ ವರ್ಷಕ್ಕಿಂತಲೂ ಈ ಭಾರಿ ಸ್ವಾತಂತ್ರ್ಯೋತ್ಸವದ ಅಮೃತ ಕಾಲದಲ್ಲಿ ವಿಭಿನ್ನವಾಗಿ ಆಚರಣೆಗೆ ರಕ್ಷಣಾ ಇಲಾಖೆ ಸಜ್ಜಾಗಿದೆ.

ಈ ಕಾರ್ಯಕ್ರಮಕ್ಕೆ ಬುಧವಾರ ಬೆಳಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ನಮನ ಸಲ್ಲಿಸಲಿದ್ದಾರೆ. ಯೋಧರ ತ್ಯಾಗ, ಬಲಿದಾನ ಕುರಿತು ಸ್ಮರಿಸಲಿದ್ದಾರೆ.
#WATCH | Ladakh: Preparations for Kargil Vijay Diwas in full swing at the War Memorial at Drass. The celebration will take place on July 26.
— ANI (@ANI) July 25, 2023
(Drone visuals) pic.twitter.com/l56V1hzud9
ಈ ಬಾರಿ ಜುಲೈ 26 ಮತ್ತು ಜುಲೈ 27ರಂದು ಎರಡು ದಿನ ಈ ವಿಜಯೋತ್ಸವ ಆಚರಣೆ ಮಾಡಲು ರಕ್ಷಣಾ ಇಲಾಖೆ ನಿರ್ಧರಿಸಿದೆ. ಮಂಗಳವಾರ ಲ್ಯಾಮೊಚೆನ್ ವ್ಯೂ ಪಾಯಿಂಟ್‌ನಲ್ಲಿ ಬ್ರೀಫಿಂಗ್ ನಡೆಯಲಿದೆ. ಭಾರತೀಯ ಸೇನೆಯ ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ಎತ್ತಿ ತೋರಿಸುವ ಯುದ್ಧಗಳ ಆಡಿಯೋ ಮತ್ತು ದೃಶ್ಯ ನಿರೂಪಣೆಯನ್ನು ಪ್ರದರ್ಶಿಸಲಾಗುತ್ತದೆ.

ಲ್ಯಾಮೊಚೆನ್ ವ್ಯೂ ಪಾಯಿಂಟ್‌ನಿಂದ ಯುದ್ಧಭೂಮಿಗೆ ಗಣ್ಯರ ಓರಿಯಂಟೇಶನ್ ನಂತರ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು'ವಿಜಯ್ ಭೋಜ್' ಅನ್ನು ಸ್ಯಾಂಡೋ ಹಿಂಭಾಗದಲ್ಲಿ ಆಯೋಜನೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ನಾಳೆ ಕಳೆಗಟ್ಟಲಿದೆ ಸಂಭ್ರಮ
ಇನ್ನೂ ಸಮಾರಂಭದಲ್ಲಿಸೇನೆಯ ಬ್ಯಾಂಡ್ ತಂಡ ಸಹ ದೇಶಭಕ್ತಿ ಗೀತೆಗಳನ್ನು ಪ್ರದರ್ಶಿಸಲಿದೆ. ಇದರೊಂದಿಗೆ ಸ್ಥಳೀಯ ಸಾಂಸ್ಕೃತಿಕ ಕಲಾವಿದರು ತಮ್ಮ ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ. ಎರಡು ದಿನ ಕಾರ್ಗಿಲ್ ರಸ್ತೆಯಲ್ಲಿ ಸಂಭ್ರಮ ಕಳೆಗಟ್ಟಲಿದೆ. ಪಾಕ್ ವಿರುದ್ಧದ ಭಾರತದ ವಿಜಯೋತ್ಸವ ಆಚರಣೆ ವೇಳೆ ನಮ್ಮ ಯೋಧರ ಧೈರ್ಯ, ಕೊಡುಗೆಗಳನ್ನು ಗಣ್ಯರು ಸ್ಮರಿಸುತ್ತಾರೆ.
ಅಲ್ಲದೇ ಕಾರ್ಗಿಲ್ ದಿವಸ್ ಮುನ್ನಾದಿನ ಇಂದು ಮಂಗಳವಾರ ಹಾಲಿ ಮತ್ತು ಮಾಜಿ ಉನ್ನತ ಸೇನಾಧಿಕಾರಿಗಳು ಮಡಿದವರಿಗೆ ಪುಷ್ಪ ನಮನ ಸಲ್ಲಿಸುತ್ತಾರೆ. ಸಮಾರಂಭದ ನಂತರ ಗಣ್ಯರು ಇಲ್ಲಿ ಸ್ಮಾರಕ ಪಕ್ಕದಲ್ಲಿ ನಿರ್ಮಿಸಲಾದ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುತ್ತಾರೆ.
ಆಚರಣೆ ಸಂಬಂಧ ಲಡಾಖ್ ಉದ್ದೇಶಿತ ಸ್ಥಳ, ಸ್ಮಾರಕ ವಸ್ತುಸಂಗ್ರಹಾಲಯಗಳಲ್ಲಿ ವಿದ್ಯುತ್ ದೀಪಗಳಿಂದ ಕಂಗೊಳಿಸಲಿವೆ. ವಿಶೇಷ ಪ್ರಾರ್ಥನೆ ಮೊಳಗಲಿದೆ. ಸಾಂಪ್ರದಾಯಿಕ ಪೈಪ್ ಬ್ಯಾಂಡ್ ಮತ್ತು ಸ್ಟ್ಯಾಟಿಕ್ ಬ್ಯಾಂಡ್ ಪ್ರದರ್ಶನ ಜರುಗಲಿದೆ. ಭಾರತೀಯ ಸಶಸ್ತ್ರ ಪಡೆಗಳ ವಿಜಯದಲ್ಲಿ ಪರಾಕಾಷ್ಠೆಯಾದ ಆಪರೇಷನ್ ವಿಜಯ್ ಅನ್ನು ಮುನ್ನಡೆಸಿದ ಕಾರ್ಗಿಲ್ ಯುದ್ಧ ವೀರರ ಶೌರ್ಯ ಮತ್ತು ಶೌರ್ಯಕ್ಕೆ ಗೌರವ ಸಲ್ಲಿಸಲು ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ಸ್ಮರಿಸಲಾಗುತ್ತದೆ.












Click it and Unblock the Notifications