ಕೇವಲ 15 ನಿಮಿಷದಲ್ಲಿ ರುಚಿಕರ ಎಗ್ ಫ್ರೈಡ್ ರೈಸ್ ತಯಾರಿಸುವ ವಿಧಾನ

ಹೊರಗಿನ ಹೋಟೆಲ್‌ಗೆ ಹೋಗದೇ ಮನೆಯಲ್ಲೇ ಕುಳಿತು ರೆಸ್ಟೋರೆಂಟ್ ಶೈಲಿಯಲ್ಲಿ ರುಚಿಕರವಾದ ಎಗ್ ಫ್ರೈಡ್ ರೈಸ್ ತಯಾರಿಸಬಹುದು. ಕಡಿಮೆ ಸಮಯದಲ್ಲಿ, ಅಡುಗೆಮನೆಯಲ್ಲಿ ಸಿಗುವ ಸರಳ ಪದಾರ್ಥಗಳಿಂದ ರುಚಿಕರವಾದ ಎಗ್ ಫ್ರೈಡ್ ರೈಸ್ ಸಿದ್ಧಪಡಿಸಬಹುದಾಗಿದೆ. ಮನೆಯಲ್ಲಿ ಎಲ್ಲರೂ ಇಷ್ಟಪಡುವ ಈ ರೆಸಿಪಿಯನ್ನು ಹಂತ ಹಂತವಾಗಿ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ.

ಮೊದಲು ಬೇಕಾಗುವ ಸಾಮಗ್ರಿಗಳು

ಮೊಟ್ಟೆ (Eggs) - 2 ಅಥವಾ 3

ಅನ್ನ (ತಣ್ಣನೆಯ ಅನ್ನ ಉತ್ತಮ) - 2 ಕಪ್

ಈರುಳ್ಳಿ - 1 (ಸಣ್ಣದಾಗಿ ಕತ್ತರಿಸಿದ)

ಕ್ಯಾರೆಟ್ - 1/2 ಕಪ್ (ಸಣ್ಣದಾಗಿ ಕತ್ತರಿಸಿದ)

ಬೀನ್ಸ್ - 1/2 ಕಪ್ (ಸಣ್ಣದಾಗಿ ಕತ್ತರಿಸಿದ)

ಹಸಿರು ಮೆಣಸಿನಕಾಯಿ - 2 (ಸಣ್ಣದಾಗಿ ಕತ್ತರಿಸಿದ)

ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ

ಕಪ್ಪು ಮೆಣಸು ಪುಡಿ - 1 ಚಮಚ

ಸೋಯಾ ಸಾಸ್ - 1 ಚಮಚ

ಚಿಲ್ಲಿ ಸಾಸ್ - 1 ಚಮಚ

ವೆನಿಗರ್ ಅಥವಾ ನಿಂಬೆ ರಸ - 1 ಚಮಚ

ಎಣ್ಣೆ - 2 ರಿಂದ 3 ಚಮಚ

ಉಪ್ಪು - ರುಚಿಗೆ ತಕ್ಕಂತೆ

ಕೊತ್ತಂಬರಿ ಸೊಪ್ಪು

ಸ್ಪ್ರಿಂಗ್ ಓನಿಯನ್ - ಸ್ವಲ್ಪ

Easy Egg Fried Rice

ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮೊಟ್ಟೆಗಳನ್ನು ಹಾಕಿ, ನಂತರ ಸ್ವಲ್ಪ ಉಪ್ಪು ಮತ್ತು ಮೆಣಸಿ ಪುಡಿಯನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ ಬೇರೆ ಒಂದು ಪಾತ್ರೆಯಲ್ಲಿ ಇಡಬೇಕು. ಅದೇ ಬಾಣಲೆಯಲ್ಲಿ ಮತ್ತೆ ಎಣ್ಣೆ ಹಾಕಿ ಶುಂಠಿ-ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಸೇರಿಸಿ ಹುರಿಯಬೇಕು. ನಂತರ ಈರುಳ್ಳಿ, ಕ್ಯಾರೆಟ್, ಬೀನ್ಸ್ ಹಾಕಿ ಹೈ ಫ್ಲೇಮ್‌ನಲ್ಲಿ ಸ್ವಲ್ಪ ಕ್ರಿಸ್ಪಿಯಾಗಿ ಬೇಯಿಸಬೇಕು.

ಬೆಂಗಳೂರಿಗರಿಗೆ ಎಗ್ ಪಫ್‌ ಮೇಲೆ ಯಾಕಷ್ಟು ಕ್ರೇಜ್! ಎಗ್‌ ಪಫ್‌ ಕ್ರಾಲ್‌ ಬಗ್ಗೆ ನಿಮ್ಗೊತ್ತಾ?
ಬೆಂಗಳೂರಿಗರಿಗೆ ಎಗ್ ಪಫ್‌ ಮೇಲೆ ಯಾಕಷ್ಟು ಕ್ರೇಜ್! ಎಗ್‌ ಪಫ್‌ ಕ್ರಾಲ್‌ ಬಗ್ಗೆ ನಿಮ್ಗೊತ್ತಾ?

ಇದಾದ ಬಳಿಕ ಬಾಣಲಿಗೆ ಸೋಯಾ ಸಾಸ್, ಚಿಲ್ಲಿ ಸಾಸ್, ವಿನೆಗರ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ, ಮುಂಚಿತವಾಗಿ ಬೇಯಿಸಿ ತಣ್ಣಗಾಗಿಸಿಕೊಂಡ ಅನ್ನ ಮತ್ತು ಫ್ರೈ ಮಾಡಿದ ಮೊಟ್ಟೆಯನ್ನು ಸೇರಿಸಿ ಹೆಚ್ಚಿನ ಉರಿಯಲ್ಲಿ 2 ನಿಮಿಷಗಳ ಕಾಲ ಚೆನ್ನಾಗಿ ಟಾಸ್ ಮಾಡಬೇಕು. ಕೊನೆಯಲ್ಲಿ ಮೆಣಸಿನ ಪುಡಿ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಕರವಾದ ಎಗ್ ಫ್ರೈಡ್ ರೈಸ್ ಸಿದ್ಧವಾಗುತ್ತದೆ.

ರೆಸ್ಟೋರೆಂಟ್ ರುಚಿಯ ಗುಟ್ಟು

ಹೈ ಪ್ಲೇಮ್್ನಲ್ಲಿ ಬೇಯಿಸುವುದು, ತಣ್ಣನೆಯ ಅನ್ನವನ್ನು ಬಳಸುವುದು ಮತ್ತು ಹೆಚ್ಚು ಮಸಾಲೆಗಳನ್ನು ಸಮತೋಲನದಲ್ಲಿ ಹಾಕುವುದರಿಂದ ಈ ಫ್ರೈಡ್ ರೈಸ್ ರೆಸ್ಟೋರೆಂಟ್ ರುಚಿಗೆ ಮುಖ್ಯ ಕಾರಣ ಎಂದು ಅಡುಗೆ ತಜ್ಞರ ಸಲಹೆ ನೀಡುತ್ತಾರೆ.

ಮನೆಯಲ್ಲಿರುವ ಕಬ್ಬಿಣದ ಕಾವಲಿಯನ್ನೇ ನಾನ್‌ಸ್ಟಿಕ್‌ ಮಾಡಬೇಕೇ? ಈ ಸಿಂಪಲ್‌ ವಿಧಾನವನ್ನು ಟ್ರೈ ಮಾಡಿ
ಮನೆಯಲ್ಲಿರುವ ಕಬ್ಬಿಣದ ಕಾವಲಿಯನ್ನೇ ನಾನ್‌ಸ್ಟಿಕ್‌ ಮಾಡಬೇಕೇ? ಈ ಸಿಂಪಲ್‌ ವಿಧಾನವನ್ನು ಟ್ರೈ ಮಾಡಿ

ಸಲಹೆಗಳು:

ಎಗ್ ಫ್ರೈಡ್ ರೈಸ್ ತಯಾರಿಸುವಾಗ ಅನ್ನವನ್ನು ಮೆತ್ತಗೆ ಅಗದಂತೆ ತಪ್ಪಿಸಲು ಅನ್ನವನ್ನು ಮುಂಚಿತವಾಗಿ ಬೇಯಿಸಿ ಸಂಪೂರ್ಣ ತಣ್ಣಗಾಗಿಸಬೇಕು. ಬಿಸಿ ಅನ್ನವನ್ನು ಬಳಸಿದರೆ ಮೆತ್ತಗೆ ಆಗಿ ರುಚಿ ಕಡಿಮೆಯಾಗುತ್ತದೆ. ಜೊತೆಗೆ ತರಕಾರಿಗಳನ್ನು ಹೆಚ್ಚು ಬೇಯಿಸದೆ ಸ್ವಲ್ಪ ಕ್ರಂಚಿಯಾಗಿ ಇಡುವುದು ಉತ್ತಮ ರುಚಿಗೆ ಸಹಾಯ ಮಾಡುತ್ತದೆ.

ಹೆಲ್ತಿ ಎಗ್ ಫ್ರೈಡ್ ರೈಸ್ ಪ್ರಿಯರಿಗಾಗಿ ಸಿಂಪಲ್ ಟಿಪ್ಸ್

ಎಗ್ ಫ್ರೈಡ್ ರೈಸ್ ಇನ್ನಷ್ಟು ಆರೋಗ್ಯಕರವಾದ ಅಡುಗೆ ಮಾಡಲು ಎಣ್ಣೆಯನ್ನು ಪ್ರಮಾಣವನ್ನು ಕಡಿಮೆ ಮಾಡಿ. ಬಿಳಿ ಅಕ್ಕಿಯ ಬದಲಾಗಿ ಬ್ರೌನ್ ರೈಸ್ ಬಳಸಿದರೆ ಇದು ಅತ್ಯುತ್ತಮವಾದ ಪೌಷ್ಟಿಕ ಆಹಾರವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+