ಹೊಸ ವರ್ಷಕ್ಕೆ ರಾಮ ಮಂದಿರ ನೀಲ ನಕ್ಷೆ ರಿಲೀಸ್?

Posted By:
Subscribe to Oneindia Kannada

ನವದೆಹಲಿ, ಡಿ. 30: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಲೋಡ್ ಗಟ್ಟಲೇ ಕಟ್ಟಡ ನಿರ್ಮಾಣ ಸಾಮಾಗ್ರಿಗಳು ಬಂದ ಸುದ್ದಿ ನಂತರ ಈಗ ಮತ್ತೊಂದು ಸುದ್ದಿ ಬಂದಿದೆ. ರಾಮಮಂದಿರ ನಿರ್ಮಾಣದ ನೀಲನಕ್ಷೆಯನ್ನ್ನು ಹೊಸ ವರ್ಷಕ್ಕೆ ಬಿಡುಗಡೆ ಮಾಡುವ ಸಾಧ್ಯತೆ ಕಂಡು ಬಂದಿದೆ.

ರಾಮ ಮಂದಿರವನ್ನು ನಿರ್ಮಾಣ ಮಾಡುವ ಬಗ್ಗೆ ಸರ್ಕಾರ ಕೊಟ್ಟ ಆಶ್ವಾಸನೆಯಂತೆ ನಡೆದುಕೊಳ್ಳಲಿದೆ. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಮನ್ನಣೆ ನೀಡಲಾಗುವುದು. ಸುಪ್ರೀಂ ಕೋರ್ಟಿನ ಪೂರ್ಣ ಆದೇಶಕ್ಕೆ ಕಾಯುತ್ತಿದ್ದೇವೆ ಎಂದು ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ (ಸ್ವತಂತ್ರ ಖಾತೆ) ಮಹೇಶ್ ಶರ್ಮಾ ಹೇಳಿದ್ದಾರೆ.

ಮಹೇಶ್ ಶರ್ಮಾ ಅವರ ಈ ಹೇಳಿಕೆಯನ್ನು ಬೆಂಬಲಿಸಿದ ಬಿಜೆಪಿಯ ಹಿರಿಯ ನಾಯಕು ಸುಬ್ರಮಣಿಯನ್ ಸ್ವಾಮಿ 2016 ಜನವರಿಯಲ್ಲಿ ರಾಮ ಮಂದಿರದ ನೀಲನಕ್ಷೆ ಬಿಡುಗಡೆಯಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.[ಬಿಜೆಪಿ ಅಧಿಕಾರ ಅವಧಿಯಲ್ಲೇ ರಾಮಮಂದಿರ ನಿರ್ಮಾಣ]

Modi govt to release blueprint for Ram Temple in January, 2016?

ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದ್ದು, 2016ರೊಳಗೆ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಮಂದಿರ ನಿರ್ಮಾಣ ಕಾರ್ಯ ಆರಂಭಿಸುವ ವಿಶ್ವಾಸವಿದೆ. ಶಾಲೆಗಳಲ್ಲಿ ನಮ್ಮ ಮಕ್ಕಳು ಓದುವ ಇತಿಹಾಸ ಪಾಠವೆಲ್ಲ ಬ್ರಿಟಿಷರು ಬರೆದಿಟ್ಟ ಅರ್ಧಸತ್ಯದ ಕಥೆಗಳಾಗಿವೆ. ಭಾರತದ ನೈಜ ಇತಿಹಾಸ ಸಾರುವ ಪಠ್ಯಗಳನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ram Temple issue has always been close to the heart of the BJP. Saffron leaders always give positive response whenever they are asked anything about the the temple.
Please Wait while comments are loading...