ಒಬ್ಬ ಭಾರತೀಯ ಸೈನಿಕ, ನಾಗರಿಕರನ್ನು ಸಾಯಿಸಿ ಕ್ರೌರ್ಯ ಮೆರೆದ ಪಾಕ್
ಪೂಂಛ್ (ಜಮ್ಮು-ಕಾಶ್ಮೀರ), ಅಕ್ಟೋಬರ್ 12: ಜಮ್ಮು-ಕಾಶ್ಮೀರದ ಪೂಂಛ್ ನ ಕೃಷ್ಣ ಘಾಟಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನ ಒಬ್ಬ ಭಾರತೀಯ ಸೈನಿಕ ಮತ್ತು ನಾಗರಿಕನನ್ನು ಸಾಯಿಸಿ, ಕ್ರೌರ್ಯ ಮೆರೆದಿದೆ.
ಇಂದು(ಅಕ್ಟೋಬರ್ 12) ಬೆಳಿಗ್ಗೆ ಅಪ್ರಚೋದಿತ ದಾಳಿ ನಡೆಸಿದ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ಬಳಿ ಗುಡಿನ ದಾಳಿ ಆರಂಭಿಸಿ ಈ ಕ್ರೌರ್ಯ ನಡೆಸಿದೆ.

ಭಾರತೀಯ ಸೇನೆ ಪಾಕಿಸ್ತಾನೀ ಸೈನಿಕರು ಹಿಂದೆ ಸರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ನಿನ್ನೆ(ಅ.11) ಜಮ್ಮು-ಕಾಶ್ಮೀರದ ಬಂಡಿಪೊರದಲ್ಲಿ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರೆ, ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿತ್ತು.












Click it and Unblock the Notifications