ತಮಿಳುನಾಡು: 40 ಜನ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಸೈನಿಕನ ಹೆಂಡತಿ, ಇಬ್ಬರ ಬಂಧನ
ಚೆನ್ನೈ, ಜೂನ್. 12: ಜಮ್ಮು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇನಾ ಸಿಬ್ಬಂದಿಯೊಬ್ಬರು ತಮಿಳುನಾಡಿನಲ್ಲಿ ತಮ್ಮ ಪತ್ನಿಯನ್ನು ಅರೆಬೆತ್ತಲೆಯಾಗಿ ವಿವಸ್ತ್ರಗೊಳಿಸಿ ಹಲವು ವ್ಯಕ್ತಿಗಳು ನಿರಂತರವಾಗಿ ಥಳಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಆರೋಪವನ್ನು ತಮಿಳುನಾಡು ಪೊಲೀಸರು ತಳ್ಳಿಹಾಕಿದ್ದಾರೆ ಎಂದು ವಿಷಯ ತಿಳಿದ ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣವು ಯೋಧನ ಪತ್ನಿ ಕೀರ್ತಿ ಮತ್ತು ಕೆಲವು ವ್ಯಕ್ತಿಗಳು ನಡುವೆ ಜಮೀನು ಗುತ್ತಿಗೆಗೆ ಸಂಬಂಧಿಸಿದಂತೆ ನಡೆದ ವಿವಾದವಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಯೋಧನ ಪತ್ನಿ ಕೀರ್ತಿಗೆ ಪೊಲೀಸ್ ಇಲಾಖೆ ರಕ್ಷಣೆ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಪ್ರಾಥಮಿಕ ತನಿಖೆಗಳ ಪ್ರಕಾರ ಯೋಧನ ಪತ್ನಿ ಕೀರ್ತಿ ಮೇಲೆ ಯಾರೂ ದಾಳಿ ಮಾಡಿಲ್ಲ ಅಥವಾ ಆಕೆಯನ್ನು ಮತ್ತು ಅವರ ತಾಯಿಯನ್ನು ಅವಮಾನಿಸಿಲ್ಲ ಎಂದು ತೋರಿಸುತ್ತಿವೆ" ಎಂದು ಪೊಲೀಸರ ಹೇಳಿಕೆಯಲ್ಲಿ ತಿಳಿಸಲಾಗಿದೆ. ಯೋಧ ಪೋಸ್ಟ್ ಮಾಡಿದ ವಿಡಿಯೋ "ಉತ್ಪ್ರೇಕ್ಷಿತ" ಎಂದು ತೋರುತ್ತದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ತನ್ನನ್ನು ತಿರುವಣ್ಣಾಮಲೈ ಜಿಲ್ಲೆಯ ಹವಾಲ್ದಾರ್ ಪ್ರಭಾಕರನ್ ಎಂದು ಹೇಳಿರುವ ಯೋಧ ಜೂನ್ 10 ರಂದು ತಮಿಳಿನಲ್ಲಿ ಮಾತನಾಡುವ ವಿಡಿಯೋವನ್ನು ರೆಕಾರ್ಡ್ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ನಿವೃತ್ತ ಸೇನಾ ಅಧಿಕಾರಿ ಕರ್ನಲ್ ಎನ್ ತ್ಯಾಗರಾಜನ್ ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಕಂದವಾಸಲ್ ಗ್ರಾಮದ ಪೊಲೀಸರು ಎರಡು ಪುಟಗಳ ಹೇಳಿಕೆಯಲ್ಲಿ, ಜೂನ್ 10 ರಂದು ವಿವಾದಿತ ಭೂಮಿಯಲ್ಲಿರುವ ಅವರ ಪತ್ನಿಯ ಅಂಗಡಿಯಿಂದ ಕೆಲವರು ವಸ್ತುಗಳನ್ನು ಹೊರಗೆ ಎಸೆದಿದ್ದಾರೆ. ಯೋಧನ ಪತ್ನಿ ಮತ್ತು ಆಕೆಯ ತಾಯಿ ಫೆಬ್ರವರಿಯಲ್ಲಿ ಹಣಕ್ಕಾಗಿ ಭೂಮಿಯನ್ನು ಹಿಂದಿರುಗಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಅವರು ಅಂಗಡಿ ಖಾಲಿ ಮಾಡಲು ನಿರಾಕರಿಸಿದರು, ನಂತರ ಕೆಲವು ವ್ಯಕ್ತಿಗಳು ಅವರ ಅಂಗಡಿಯಿಂದ ವಸ್ತುಗಳನ್ನು ಹೊರಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ನನ್ನ ಹೆಂಡತಿಗೆ ಅಂಗಡಿ ಇದೆ. 120ಕ್ಕೂ ಹೆಚ್ಚು ಮಂದಿ ಆಕೆಯನ್ನು ಥಳಿಸಿದ್ದಾರೆ. ಆಕೆಯ ಕಿವಿ ಮತ್ತು ಮೂಗಿನಿಂದ ರಕ್ತಸ್ರಾವವಾಗುತ್ತಿದೆ" ಎಂದು ಪ್ರಭಾಕರನ್ ಅವರು ತಿರುವಣ್ಣಾಮಲೈ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೆ ಕಾರ್ತಿಕೇಯನ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದ್ದಾರೆ.
ಇತ್ತ, ತಮಿಳುನಾಡು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಕೆ ಅಣ್ಣಾಮಲೈ ಯೋಧ ಪ್ರಭಾಕರನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತಮ್ಮ ಪಕ್ಷದ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ತಮಿಳು ನೆಲದಲ್ಲಿ ಆಕೆ ಇಂತಹದನ್ನು ಅನುಭವಿಸಬೇಕಾಯಿತು ಎಂದು ನಾನು ನಾಚಿಕೆಪಡುತ್ತೇನೆ ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಬಂಧಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ. "ಭಾರತೀಯ ಸೇನಾ ಯೋಧ ಪ್ರಭಾಕರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ವಿಡಿಯೋಗೆ ಸಂಬಂಧಿಸಿದಂತೆ, ಪ್ರಾಥಮಿಕ ತನಿಖೆಯಿಂದ ಅವರ ಕುಟುಂಬವು ರಾಮುವಿನ ಕುಟುಂಬದೊಂದಿಗೆ ಗುತ್ತಿಗೆಯ ಅಂಗಡಿಯೊಂದರ ವಿವಾದವನ್ನು ಹೊಂದಿದೆ ಎಂದು ತಿಳಿದುಬಂದಿದೆ" ಎಂದು ಎಸ್ಪಿ ಕಾರ್ತಿಕೇಯನ್ ಹೇಳಿದ್ದಾರೆ.
''ನಿನ್ನೆ (ಶನಿವಾರ) ಎರಡೂ ಕಡೆಯವರ ನಡುವೆ ಮಾರಾಮಾರಿ ನಡೆದಿದೆ. ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯೋಧನ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಲಾಗಿದೆ" ಎಂದು ಎಸ್ಪಿ ಕಾರ್ತಿಕೇಯನ್ ಮಾಹಿತಿ ನೀಡಿದ್ದಾರೆ.












Click it and Unblock the Notifications