Kashmir-Kanniyakumari Train: ಕಾಶ್ಮೀರ-ಕನ್ಯಾಕುಮಾರಿ ನಡುವೆ ರೈಲು ಸಂಪರ್ಕ ಯಾವಾಗ?-ಪ್ರಧಾನಿ ಮೋದಿಯಿಂದ ಮಹತ್ವದ ಮಾಹಿತಿ

ನವದೆಹಲಿ, ಫೆಬ್ರವರಿ, 21: ದೇಶದ ಪ್ರಮುಖ ನಗರಗಳಿಗೆ ರೈಲು ಸೇವೆಗಳು ಆರಂಭವಾಗುತ್ತಲೇ ಇವೆ. ಹಾಗೆಯೇ ಕಾಶ್ಮೀರ-ಕನ್ಯಾಕುಮಾರಿ ನಡುವೆ ರೈಲು ಸಂಪರ್ಕ ಕಲ್ಪಿಸುವ ದಿನ ದೂರ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಉಧಂಪುರ-ಶ್ರೀನಗರ-ಬಾರಾಮುಲ್ಲಾ (ಯುಎಸ್‌ಬಿಆರ್‌ಎಲ್‌) ನಡುವಿನ 41.8 ಕಿಲೋ ಮೀಟರ್‌ ಉದ್ದದ ರೈಲು ಸಂಪರ್ಕ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಒಟ್ಟು 272 ಕಿಲೋ ಮೀಟರ್‌ ಉದ್ದದ ಯುಎಸ್‌ಬಿಆರ್‌ಎಲ್‌ ರೈಲು ಮಾರ್ಗ ಯೋಜನೆಯಯನ್ನು ವಿವಿಧ ಹಂತಗಳಲ್ಲಿ ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ.

Kashmir-Kanyakumari Train: When is the train connection between Kashmir and Kanyakumari?

ಇನ್ನು 2009ರ ಅಕ್ಟೋಬರ್‌ನಲ್ಲಿ 118 ಕಿಲೀ ಮೀಟರ್‌ ಉದ್ದದ ಖಾಜಿಗುಂಡ್‌-ಬಾಲಾಮುಲ್ಲಾ ಮಾರ್ಗವನ್ನು, 2013ರ ಜೂನ್‌ನಲ್ಲಿ 18 ಕಿಲೀ ಮೀಟರ್‌ ಉದ್ದದ ಬಾರಾಮುಲ್ಲಾ-ಖಾಜಿಗುಂಡ್‌ ಮಾರ್ಗವನ್ನು ಮತ್ತು 2014ರ ಜುಲೈನಲ್ಲಿ 25 ಕಿಲೋ ಮೀಟರ್‌ ಉಧಂಪುರ-ಕತ್ರಾ ಮಾರ್ಗವನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಏಕಕಾಲದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಹಿಂದೆ ದೇಶದ ಇತರೆ ಭಾಗಗಳು ಅಭಿವೃದ್ಧಿಯತ್ತ ಸಾಗುತ್ತಿದ್ದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಅಭಿವೃದ್ಧಿ ಕಾಮಾಗಾರಿಗಳ ಲಾಭ ಸಿಗುತ್ತಿರಲಿಲ್ಲ ಅಥವಾ ಈ ಪ್ರದೇಶದಲ್ಲಿ ತುಂಬಾ ವಿಳಂಬವಾಗಿ ಕಾಮಗಾರಿಗಳು ನಡೆಯುತ್ತಿದ್ದವು ಎಂದು ಹೇಳಿದರು.

ಅಲ್ಲದೆ ಇದೀಗ ದೇಶದಾದ್ಯಂತ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಜಮ್ಮು ಮತ್ತು ಕಾಶ್ಮೀರವೂ ಹಿಂದೆ ಉಳಿದಿಲ್ಲ. ಇಂದು ಜಮ್ಮು ಮತ್ತು ಕಾಶ್ಮೀರ ವಿಮಾನ ನಿಲ್ದಾಣದ ವಿಸ್ತರಣೆ ಕಾರ್ಯ ನಡೆಯುತ್ತಿದೆ ಅಂತಲೂ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+