ಕಾಶ್ಮೀರದ ಟ್ವಿಟಾಲ್‌ನಲ್ಲಿರುವ ಶಾರದಾಂಬೆ ವಿಗ್ರಹಕ್ಕೆ ಶೃಂಗೇರಿ ಶ್ರೀಗಳಿಂದ ಪೂಜೆ
ಚಿಕ್ಕಮಗಳೂರು, ಜೂನ್, 02: ಇಂದು (ಸೋಮವಾರ 05) ಶೃಂಗೇರಿಯ ಇಬ್ಬರು ಗುರುವತ್ರಯರಾದ ಶ್ರೀ ಭಾರತಿ ತೀರ್ಥ ಹಾಗೂ ವಿಧುಶೇಖರ ಶ್ರೀಗಳು ಕಾಶ್ಮೀರದ ಟ್ವಿಟಾಲ್‌ನಲ್ಲಿ ನೂತನವಾಗಿ ಸಿದ್ಧಗೊಂಡಿರುವ ಶಾರದಾಂಬೆ ವಿಗ್ರಹಕ್ಕೆ ಪ್ರತಿಷ್ಠಾಪನ ಪೂಜೆ ನೆರವೇರಿಸಿದ್ದಾರೆ.
ವಿಧುಶೇಖರ ಶ್ರೀಗಳಿಂದ ಪೂಜೆ
75 ವರ್ಷಗಳ ಬಳಿಕ ತಿತ್ವಾಲ್‌ನಲ್ಲಿ ನಿರ್ಮಾಣವಾಗಿರುವ ಶಾರದಾಂಬೆ ದೇಗುಲದಲ್ಲಿ ಇಂದು ವಿಧುಶೇಖರ ಶ್ರೀಗಳು ಪೂಜೆ ಸಲ್ಲಿಸಿದ್ದಾರೆ. ಇನ್ನು ಶೃಂಗೇರಿಯ ಗುರುವತ್ರಯರು ಪೂಜೆ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಿದರು. ವಿಧುಶೇಖರ ಶ್ರೀಗಳು ಶೃಂಗೇರಿಯಿಂದ 4000 ಕಿಲೋ ಮೀಟರ್ ದೂರದಲ್ಲಿರುವ ತಿತ್ವಾಲ್‌ಗೆ ವಿಶೇಷ ವಿಮಾನದಲ್ಲಿ ತೆರಳಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

1948ರಲ್ಲಿ ಪಾಕಿಸ್ತಾನದ ಮೂಲಭೂತವಾದಿಗಳ ಆಕ್ರಮಣದಿಂದ ಸಂಪೂರ್ಣ ಹಾನಿಗೊಳಗಾಗಿದ್ದ ಶಾರದಾ ಮಂದಿರವನ್ನು ಶೃಂಗೇರಿ ಜಗದ್ಗುರುಗಳ ಆಶೀರ್ವಾದದಲ್ಲಿ ಕಾಶ್ಮೀರಿ ಪಂಡಿತರು ಪುನರ್ ಪ್ರತಿಷ್ಠಾಪನೆ ಮಾಡಲು ಮುಂದಾಗಿದ್ದರು. ಭಾರತದ ಸಂವಿಧಾನದ 370ನೇ ವಿಧಿ ನಂತರ ಪುನರ್ ನಿರ್ಮಾಣಗೊಂಡು ಯುಗಾದಿಯಂದು ಲೋಕಾರ್ಪಣೆಗೊಂಡಿದ್ದ ಶಾರದಾ ಮಂದಿರಕ್ಕೆ ಶೃಂಗೇರಿ ಜಗದ್ಗುರುಗಳು ಇಂದು ಪೂಜೆ ಸಲ್ಲಿಸಿದ್ದಾರೆ.
ಇಂದು ಕಾಶ್ಮೀರದ ಟಿಟ್ವಾಲ್‌ನಲ್ಲಿರುವ ಆದಿ ಶಂಕರಾಚಾರ್ಯರ ಸರ್ವಜ್ಞ ಪೀಠಕ್ಕೆ ತೆರಳಲಿರುವ ಜಗದ್ಗುರುಗಳು ಶಾರದಾಂಬೆ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ. ಕಾಶ್ಮೀರಿ ಪಂಡಿತರು ಮಾರ್ಚ್ 18ರಂದು ಶೃಂಗೇರಿಯಿಂದ ಪಂಚಲೋಹದ ಶಾರದಾಂಬೆ ವಿಗ್ರಹವನ್ನ ಕೊಂಡೊಯ್ದಿದ್ದು, ನಂತರ ಮಾರ್ಚ್ 22ರಂದು ಟಿಟ್ವಾಲ್‌ನಲ್ಲಿ ಕಾಶ್ಮೀರಿ ಪಂಡಿತರಿಂದ ಇದು ಪ್ರತಿಷ್ಠಾಪನೆ ಆಗಿತ್ತು. ಪಂಚಲೋಹದ ಶಾರದಾಂಭೆ ವಿಗ್ರಹಕ್ಕೆ ಇದೀಗ ಇಂದು ಶೃಂಗೇರಿ ಶ್ರೀಗಳು ಪೂಜೆ ನೆರವೇರಿಸಿದ್ದಾರೆ.
ಕಾಶ್ಮೀರದ ಟಿಟ್ವಾಲ್‌ಗೆ ತೆರಳಿ ಶೃಂಗೇರಿ ಶ್ರೀಗಳಾದ ಶ್ರೀ ವಿಧುಶೇಖರ ಮತ್ತು ಭಾರತೀ ಮಹಾಸ್ವಾಮೀಜಿಗಳು ಪೂಜೆ ಸಲ್ಲಿಸಿದ್ದಾರೆ. ಎರಡು ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರು ಶೃಂಗೇರಿಗೆ ಭೇಟಿ ನೀಡಿ ಸರ್ವಜ್ಞ ಪೀಠವನ್ನು ಪುನರ್ ಪ್ರತಿಷ್ಠಾಪಿಸುವಂತೆ ಮನವಿ ಮಾಡಿದ್ದರು. ಬಳಿಕ ಶೃಂಗೇರಿ ಜಗದ್ಗುರುಗಳ ಆಶೀರ್ವಾದದೊಂದಿಗೆ ಇದೀಗ ಪಂಚಲೋಹದ ಸುಂದರ ಮೂರ್ತಿ ಸರ್ವಜ್ಞ ಪೀಠದಲ್ಲಿ ಪ್ರತಿಷ್ಠಾಪನೆ ಆಗಿದೆ. ಇದೀಗ ಅದೇ ಶಾರದಾಂಭೇ ಮೂರ್ತಿಗೆ ಇಂದು ಶೃಂಗೇರಿ ಶ್ರೀಗಳು ಪೂಜೆ ಸಲ್ಲಿಸಿಲಿದ್ದಾರೆ.












Click it and Unblock the Notifications