Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು
Gas Bill: ಇರಾನ್ -ಇಸ್ರೇಲ್ ಯುದ್ಧದ ಪರಿಣಾಮ ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ಹಲವು ರಾಜ್ಯಗಳ ಪ್ರಮುಖ ನಗರದಲ್ಲಿ ಅಡುಗೆ ಅನಿಲದ ಅಭಾವ ಉಂಟಾಗಿದೆ. ಇದರ ಪರಿಣಾಮ ಗ್ರಾಹಕರಿಗೂ ತಟ್ಟುತ್ತಿದ್ದು, ರೆಸ್ಟೋರೆಂಟ್ವೊಂದರಲ್ಲಿ ಬ್ರೇಕ್ಫಾಸ್ಟ್ ಮಾಡಿದವರಿಗೆ ಗ್ಯಾಸ್ ಶುಲ್ಕ ಸೇರಿಸಿ ಬಿಲ್ ನೀಡಲಾಗಿದೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಹಕರೊಬ್ಬರು ರೆಸ್ಟೋರೆಂಟ್ಗೆ ತಿಂಡಿಗೆಂದು ಹೋಗಿದ್ದು, ಅವರು ಇಡ್ಲಿ, ವಡೆಯನ್ನು ತೆಗೆದುಕೊಂಡಿದ್ದಾರೆ. ವಿಚಿತ್ರ ಎಂಬಂತೆ ಬಿಲ್ನಲ್ಲಿ ಗ್ಯಾಸ್ ಶುಲ್ಕವನ್ನು ಸಹ ನಮೂದು ಮಾಡಲಾಗಿದೆ. ಇದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಬಿಲ್ ಚೆನ್ನೈನ ತಿರುವೆಂಕಡನಗರ್, ಎಂ.ಜಿ.ಆರ್. ಸಾಲೈ ಪೆರುಂಗುಡಿಯ "ಗ್ರೀರಾಸ್ ರೆಸ್ಟೋರೆಂಟ್"ಗೆ ಸೇರಿದ್ದಾಗಿದೆ. ಇದರಲ್ಲಿ ದಿನಾಂಕ 12/03/2026, ಸಮಯ 08:32 ಅಂತಾ ಇದೆ.

ಇಡ್ಲಿ, ವಡೆ, ಗ್ಯಾಸ್ ದರ
* ಒಂದು ಇಡ್ಲಿ - 33.33 ರೂಪಾಯಿ
* ಒಂದು ವಡೆ - 33.33 ರೂಪಾಯಿ
* ಗ್ಯಾಸ್ (Gas) - 9.52 ರೂಪಾಯಿ
* CGST - 1.90 ರೂಪಾಯಿ
* SGST - 1.90 ರೂಪಾಯಿ
* ಒಟ್ಟು - 80 ರೂಪಾಯಿಯ ಬಿಲ್ ಇದಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಇಲ್ಲಿ 'Gas' ಎಂಬ ಐಟಂಗೆ ಶುಲ್ಕ ವಿಧಿಸಿರುವುದು ಸ್ವಲ್ಪ ಕುತೂಹಲಕಾರಿಯಾಗಿದೆ. ಏಕೆಂದರೆ ರೆಸ್ಟೋರೆಂಟ್ ಬಿಲ್ಗಳಲ್ಲಿ ಸಾಮಾನ್ಯವಾಗಿ ಇಂತಹ ಹೆಸರಿನ ಐಟಂ ಇರುವುದಿಲ್ಲ. ಆದರೆ ಈ ಬಿಲ್ನಲ್ಲಿ 'Gas'ಗೆ 9.52 ರೂಪಾಯಿ ಶುಲ್ಕ ಸೇರಿಸಲಾಗಿದ್ದು, ಅಚ್ಚರಿ ಹುಟ್ಟಿಹಾಕಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ. ಇದೊಂದೆ ರೆಸ್ಟೋರೆಂಟ್ ಅಲ್ಲದೆ, ಪ್ರಮುಖ ನಗರಗಳ ಹೋಟೆಲ್ಗಳಲ್ಲೂ ಸಹ ಇದೇ ರೀತಿಯ ಘಟನೆಗಳು ನಡೆದಿರುವ ಉದಾಹರಣೆಗಳುವೆ.
ಅಡುಗೆ ಅನಿಲ (LPG) ಬೆಲೆ ಏರಿಕೆಯಾದಾಗ ಕೆಲವು ರೆಸ್ಟೋರೆಂಟ್ಗಳು ಹೆಚ್ಚುವರಿ ಇಂಧನ ಶುಲ್ಕವನ್ನು (Fuel Surcharge) ಬಿಲ್ನಲ್ಲಿ ಸೇರಿಸುತ್ತವೆ. ಕೆಲವೊಮ್ಮೆ ರೆಸ್ಟೋರೆಂಟ್ಗಳು ತೆರಿಗೆಗಳಲ್ಲದೆ ತಮ್ಮ ಖರ್ಚುವೆಚ್ಚಗಳನ್ನು ತೋರಿಸಲು ಈ ರೀತಿ ವಿಭಿನ್ನ ಹೆಸರಿನಲ್ಲಿ ಶುಲ್ಕ ವಿಧಿಸುತ್ತವೆ. ಇದು ಗ್ರಾಹಕರ ಹಕ್ಕಿನ ವಿಷಯವಾಗಿದೆ. ಬಿಲ್ನಲ್ಲಿ ಸ್ಪಷ್ಟವಿಲ್ಲದ ಶುಲ್ಕವನ್ನು ವಿಧಿಸಿದರೆ, ಗ್ರಾಹಕರು ಬಿಲ್ಲಿಂಗ್ ಕೌಂಟರ್ನಲ್ಲಿ ಅಥವಾ ರೆಸ್ಟೋರೆಂಟ್ ಮ್ಯಾನೇಜರ್ ಬಳಿ ಇದರ ಬಗ್ಗೆ ಕೇಳುವ ಹಕ್ಕನ್ನು ಹೊಂದಿರುತ್ತಾರೆ.
ಗ್ರಾಹಕರ ಜೇಬಿಗೆ ಕತ್ತರಿ
ಮತ್ತೊಂದೆಡೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಎಲ್ಪಿಜಿ (LPG) ಬಿಕ್ಕಟ್ಟು ಇದೀಗ ಸಾಮಾನ್ಯ ಹೋಟೆಲ್ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ತೀವ್ರ ಕೊರತೆಯಿಂದಾಗಿ ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರ್ಯಾಯ ಇಂಧನಗಳ ವೆಚ್ಚ ಹೆಚ್ಚಾಗುತ್ತಿರುವುದರಿಂದ ಹೋಟೆಲ್ಗಳು ಈ ಹೊರೆಗೆ ಗ್ರಾಹಕರನ್ನು ಹೊಣೆಯಾಗಿಸುತ್ತಿವೆ.
ಕೆಲವು ರೆಸ್ಟೋರೆಂಟ್ಗಳು ಬಿಲ್ನಲ್ಲಿ ಪ್ರತ್ಯೇಕವಾಗಿ ಗ್ಯಾಸ್ ಚಾರ್ಜ್ (Gas Charge) ಎಂದು ನಮೂದಿಸುತ್ತಿವೆ. ಇನ್ನು ಕೆಲವು ಹೋಟೆಲ್ಗಳು ಆಹಾರದ ದರವನ್ನು ಏರಿಕೆ ಮಾಡಿವೆ. ಉದಾಹರಣೆಗೆ ಮಿಸ್ಟರ್ ಆಂಧ್ರ ಮೀಲ್ಸ್ (ದೊಡ್ಡನೆಕ್ಕುಂದಿ) ಇಲ್ಲಿನ ಬಿಲ್ನಲ್ಲಿ ಪ್ರತಿ ಗ್ರಾಹಕರಿಂದ ಹೆಚ್ಚುವರಿಯಾಗಿ 30 ರೂಪಾಯಿ "ಗ್ಯಾಸ್ ಚಾರ್ಜ್" ವಸೂಲಿ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಹೋಟೆಲ್ ಮ್ಯಾನೇಜರ್ ಹೇಳೋದೇನು?
ಕೃಷ್ಣ ವೈಭವ ಹೋಟೆಲ್ನಲ್ಲಿ ಮೆನುವಿನ ಎಲ್ಲಾ ತಿನಿಸುಗಳ ಮೇಲೆ 5ರಿಂದ 10 ರೂಪಾಯಿವರೆಗೆ ದರ ಏರಿಕೆ ಮಾಡಲಾಗಿದೆ. ಇದಕ್ಕೆ ಕಮರ್ಷಿಯಲ್ ಗ್ಯಾಸ್ ಕೊರತೆ ಮತ್ತು ಪರ್ಯಾಯ ಇಂಧನಗಳ ವೆಚ್ಚವೇ ಕಾರಣ ಎಂದು ಹೋಟೆಲ್ ಮ್ಯಾನೇಜ್ಮೆಂಟ್ ತಿಳಿಸಿದೆ.
ಹೋಟೆಲ್, ಟಿಫಿನ್ ಸೆಂಟರ್ಗಳು ಮತ್ತು ಸಣ್ಣ ಮೆಸ್ ಮಾಲೀಕರು ಅಡುಗೆ ಕೆಲಸವನ್ನು ಕಡಿಮೆ ಮಾಡುತ್ತಿದ್ದಾರೆ. ಇನ್ನೂ ಕೆಲವೆಡೆ ಅಡುಗೆಮನೆಯನ್ನೇ ಮುಚ್ಚುವ ಪರಿಸ್ಥಿತಿ ಬಂದಿದೆ. ಈ ಬಿಕ್ಕಟ್ಟು ಕೇವಲ ರೆಸ್ಟೋರೆಂಟ್ಗಳಿಗೆ ಸೀಮಿತವಾಗಿಲ್ಲ. ಸ್ವೀಟ್ ಶಾಪ್ಗಳು ಮತ್ತು ಪಿಜಿಗಳಲ್ಲಿಯೂ ಊಟದ ಸೌಲಭ್ಯಗಳಿಗೆ ತೊಂದರೆಯಾಗಿದೆ.
ಗ್ರಾಹಕರ ಪರವಾಗಿ ಸರ್ಕಾರದ ಭರವಸೆ
ಸರ್ಕಾರವು ಈ ಪೂರೈಕೆ ಕೊರತೆಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದೆ. ಆದರೂ, ಹೋಟೆಲ್ ಮಾಲೀಕರು ಎಲ್ಪಿಜಿ ಲಭ್ಯತೆ ಸುಸ್ಥಿರವಾಗದಿದ್ದರೆ ಮುಂದಿನ ದಿನಗಳಲ್ಲಿ ಆಹಾರದ ದರಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ, ಅಡುಗೆ ಅನಿಲದ ಕೊರತೆಯು ಹೋಟೆಲ್ ಉದ್ಯಮದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದ್ದು, ಗ್ರಾಹಕರು ಹೋಟೆಲ್ಗಳಲ್ಲಿ ದುಬಾರಿ ದರವನ್ನು ಪಾವತಿಸುವಂತಾಗಿದೆ.
-
Free Biryani: ಒಂದು ಸಿಲಿಂಡರ್ ಕೊಡಿ, ತಿಂಗಳು ಪೂರ್ತಿ ಉಚಿತ ಬಿರಿಯಾನಿ ತಿನ್ನಿ: ಹೊಸೂರು ಹೋಟೆಲ್ನಿಂದ ಭರ್ಜರಿ ಆಫರ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications