ಆರೋಗ್ಯ ವಿಮಾ ಕ್ಷೇತ್ರದಲ್ಲಿ ಭರ್ಜರಿ ಪ್ರಗತಿ: 1.2 ಲಕ್ಷ ಕೋಟಿ ರೂ ದಾಟಿದ ಪ್ರೀಮಿಯಂ ಸಂಗ್ರಹ
ನವದೆಹಲಿ: ಭಾರತದಲ್ಲಿ ಆರೋಗ್ಯ ವಿಮಾ ವಲಯವು ಉತ್ತಮ ಬೆಳವಣಿಗೆ ಸಾಧಿಸಿದೆ. ಆರೋಗ್ಯ ವಿಮಾ ಕ್ಲೈಮ್ ಪ್ರಕ್ರಿಯೆಯಲ್ಲಿನ ದಕ್ಷತೆ ಮತ್ತು ನ್ಯಾಯಸಮ್ಮತ ಸ್ಪಂದನೆಯಿಂದಾಗಿ ನಿಗದಿತ ಖಚಿತ ಗುರಿ ಸಾಧಿಸಿದೆ. ಹಿಂದಿನ 2024-25ರ ಸಾಲಿನಲ್ಲಿ 1.2 ಲಕ್ಷ ಕೋಟಿ ರೂ.ಮೀರಿದ ಪ್ರೀಮಿಯಂಗಳೊಂದಿಗೆ ಆರೋಗ್ಯ ವಿಮಾ ಕ್ಷೇತ್ರವು ಗಣನೀಯವಾಗಿ ಪ್ರಗತಿ ಹೊಂದಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಭಾರತದ ಆರೋಗ್ಯ ವಿಮಾ ವಲಯವು ಸುಮಾರು ಶೇ.9ರಷ್ಟು ಅಭಿವೃದ್ಧಿ ಹೊಂದಿದೆ. ಒಟ್ಟು ಆರೋಗ್ಯ ವಿಮಾ ಪ್ರೀಮಿಯಂಗಳ ಪ್ರಮಾಣವು 1.2 ಲಕ್ಷ ಕೋಟಿ ರೂಪಾಯಿ ಮೀರಿದೆ. ಈ ಬೆಳವಣಿಗೆಯು ಹೆಚ್ಚುತ್ತಿರುವ ಆರೋಗ್ಯ ಕಾಳಜಿ, ಆರೋಗ್ಯದಲ್ಲಿ ತೊಡಗುತ್ತಿರುವ ಹಣಕಾಸು, ವೈದ್ಯಕೀಯ ವೆಚ್ಚಗಳ ವಿರುದ್ಧ ಆರ್ಥಿಕ ರಕ್ಷಣೆಯತ್ತ ಜನರು ತೋರುತ್ತಿರುವ ಒಲವನ್ನು ಇದು ಪ್ರತಿಬಿಂಬಿಸುತ್ತದೆ.

ನಗದು ರಹಿತ ಕ್ಲೇಮು, ಡಿಜಿಟಲ್ ವ್ಯವಸ್ಥೆಯ ಅನುಕೂಲ
ವಿಮಾ ಕ್ಷೇತ್ರವು ಪಾಲಿಸಿದಾರರಿಗೆ ದಕ್ಷತೆ ಹೆಚ್ಚಿಸಲು ಮತ್ತು ಸಕಾಲಿಕ ಬೆಂಬಲ ಒದಗಿಸುತ್ತಾ ಬಂದಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ನಗದುರಹಿತ ಆರೋಗ್ಯ ವಿಮಾ ಕ್ಲೈಮ್‌ಗಳ ಪ್ರಕ್ರಿಯೆಗೆ ಸಮಯ ನಿಗದಿಪಡಿಸಿದೆ. ನಗದು ರಹಿತ ಒಂದು ಗಂಟೆಯಲ್ಲಿ, ಅಂತಿಮ ಕ್ಲೇಮು ಮೂರು ಗಂಟೆಗಳಲ್ಲಿ ಆಗುವಂತೆ ಗಡುವು ನಿಗದಿಪಡಿಸಿದೆ. ಡಿಜಿಟಲ್ ವ್ಯವಸ್ಥೆ ಬಲಗೊಂಡಿದ್ದು, ಕ್ಲೇಮುಗಳು ಸಕಾಲಕ್ಕೆ ಆಗಲಿವೆ. ಇದು ಜನಸಾಮಾನ್ಯರಿಗೆ ಅನುಕೂಲ ಒದಗಿಸುತ್ತದೆ. ಇದು ಸಹ ಕ್ಷೇತ್ರ ಬೆಳವಣಿಗೆಗೆ ಪೂಕರವಾಗಿದೆ.
ಆರೋಗ್ಯ ವಿಚಾರದಲ್ಲಿ ಪಾಲಿಸಿದಾರರಿಗೆ ಸಮಯ ಮಿತಿಗಳ ವಿಳಂಬ ಕಡಿಮೆ ಮಾಡಲು ರೋಗಿಗಳಿಗೆ ಸಕಾಲದಲ್ಲಿ ವೈದ್ಯಕೀಯ ಆರೈಕೆ ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಗುರಿಯೊಂದಿಗೆ ವಿಮಾ ವಲಯವು ಕೆಲಸ ಮಾಡಿದೆ. ಇದು ಜನರ ನಂಬಿಕೆ ಹೆಚ್ಚಿಸುವ ಜೊತೆಗೆ ಪಾಲಿಸಿದಾರರ ಪ್ರಮಾಣ ಹೆಚ್ಚಿಸಿದೆ.
ಆರೋಗ್ಯ ವಿಮಾ ಕಂತುಗಳಲ್ಲಿ ಹೆಚ್ಚಳ
ಐಆರ್‌ಡಿಎಐನ 2024 ರ ನಿಯಮಗಳ ಪ್ರಕಾರ ಆರೋಗ್ಯ, ನ್ಯಾಯಯುತ ಅಂಶಗಳ ಮೇಲೆ ವಿಮಾ ಹಣ ನಿಗದಿ ಆಗಿದೆ. ವಿಶ್ವಾಸಾರ್ಹ ಮಾಹಿತಿ, ಗ್ರಾಹಕರರಿಗೆ ತ್ವರಿತ ಪ್ರತಿಕ್ರಿಯೆ ನೀಡುವ ಜೊತೆಗೆ ಸಾರ್ವಜನಿಕರ ಸಮಸ್ಯೆ ಆಧಾರದಲ್ಲಿ ಪರಿಹಾರೋಪಾಯ ಕಂಡುಕೊಳ್ಳಲಾಗಿದೆ. 2022-23, 2023-24 ಮತ್ತು 2024-25) ಕ್ಲೇಮ್‌ಗಳ ಪಾವತಿಯಲ್ಲಿ ಏರಿಕೆ ಆಗಿದೆ. ಅದರ ಪಟ್ಟಿ ಮುಂದಿದೆ.
ವಿಮಾ ಕ್ಲೈಮ್ ಪಾವತಿ ಅನುಪಾತ ಏರಿಕೆ, ಪಟ್ಟಿ
* 2022-23: 85.66%
* 2023-24: 82.46%
* 2024-25: 87.50%
1.37 ಲಕ್ಷ ದೂರುಗಳು ಸಲ್ಲಿಕೆ
IRDAI ಅಧಿಕೃತ ಜಾಲತಾಣದಲ್ಲಿ ನೀಡಿರುವ ಮಾಹಿತಿ ಪ್ರಕಾರ, ಹಿಂದಿನ 2024-25 ನೇ ಆರ್ಥಿಕ ವರ್ಷದಲ್ಲಿ 1,37,361 ಸಾಮಾನ್ಯ ಮತ್ತು ಆರೋಗ್ಯ ವಿಮಾ ದೂರುಗಳನ್ನು ವರದಿ ಆಗಿದೆ. ಅದರಲ್ಲಿ 1,27,755 (ಶೇ.93) ಅನ್ನು 2024-25 ನೇ ಹಣಕಾಸು ವರ್ಷದಲ್ಲಿಯೇ ವಿಲೇವಾರಿ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಈ ಕ್ಲೇಮ್‌ಗಳಲ್ಲಿ ನಿರಾಕರಣೆ, ವಿಮಾ ಮೊತ್ತವನ್ನು ಮೀರುವುದು, ಸಹ-ಪಾವತಿ ಷರತ್ತು, ಪಾಲಿಸಿಗಳಲ್ಲಿ ಉಪ-ಮಿತಿಗಳು, ಟಾಪ್-ಅಪ್ ಪಾಲಿಸಿಗಳಲ್ಲಿ ಕಡಿತಗೊಳಿಸುವ ಪ್ರಕ್ರಿಯೆ, ಶುಲ್ಕಗಳು, ವೈದ್ಯಕೀಯೇತರ ವೆಚ್ಚಗಳು ಇತ್ಯಾದಿ ಸೇರಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications