Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್
Gold Silver Price: ನಿರಂತರವಾಗಿ ತೀವ್ರ ಕುಸಿತ ಕಂಡಿದ್ದ ಚಿನ್ನ-ಬೆಳ್ಳಿ ಲೋಹಗಳ ದರಗಳಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ. ಜನವರಿ ಶೇ.22ರಷ್ಟು ಕುಸಿತ ಕಂಡಿದ್ದ ಚಿನ್ನ, ಇರಾನ್ ಮೇಲಿನ ಯುದ್ಧ ಆರಂಭವಾದ ಬಳಿಕ ಶೇ.15ರಷ್ಟು ಕುಸಿತ ಕಂಡಿತ್ತು. ಇದೀಗ ಕಳೆದ ಮೂರು ದಿನಗಳಲ್ಲಿ ಅಂದಾಜು 2ರಷ್ಟು ಏರಿಕೆ ದಾಖಲಿಸಿದೆ. ಈ ಮೂಲಕ ಖರೀದಿದಾರರಿಗೆ ಆಘಾತ ನೀಡಿದೆ. ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದ್ದು, ಇಂದಿನ ದರದ ಅಪ್ಡೇಟ್ ಇಲ್ಲಿದೆ.
ಬೆಳ್ಳಿ ದರದಲ್ಲಿ ಭರ್ಜರಿ ಏರಿಕೆ ಆಗಿದ್ದು, ಮೂರೇ ದಿನಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 20,000ಕ್ಕೂ ಅಧಿಕ ಏರಿಕೆ ದಾಖಲಿಸಿದೆ. ಬಿಳಿ ಲೋಹವು ಗರಿಷ್ಠ 4.20 ಲಕ್ಷ ರೂಪಾಯಿ ಕಂಡಿತ್ತು. ನಂತರ ಕನಿಷ್ಠ 2.30 ಲಕ್ಷ ರೂಪಾಯಿ ದಾಖಲಿಸಿತು. ಕಳೆದ ಮೂರು ದಿನಗಳಿಂದ ಏರಿಕೆ ಆಗುತ್ತಿದೆ.

ಒಂದು ಕೆಜಿ ಬೆಳ್ಳಿ ದರ ಮಾರ್ಚ್ 24ರಂದು ಮಂಗಳವಾರ 5,000 ರೂಪಾಯಿ, ಮಾರ್ಚ್ 25ರಂದು ಬುಧವಾರ 15,000 ರೂಪಾಯಿ ಹಾಗೂ ಇಂದು ಮಾರ್ಚ್ 26ರ ಗುರುವಾರ 100 ರೂಪಾಯಿ ಹೆಚ್ಚಾಗುವ ಮೂಲಕ ಅದರ ದರವು 2,50,100 ರೂ. ಮುಟ್ಟಿದೆ. ಭಾರತದ ಮಾರುಕಟ್ಟೆ ಸೇರಿ ಜಾಗತಿಕವಾಗಿ ಈ ಲೋಹಗಳ ದರದಲ್ಲಿ ಏರಿಳಿತ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.
ಚಿನ್ನದ ಬೆಲೆಯಲ್ಲಿ ಹೆಚ್ಚಳ
ಸತತವಾಗಿ ಇಳಿಕೆ ಕಾಣುತ್ತಿದ್ದ ಬಂಗಾರವನ್ನು ಮದುವೆ ಸಮಾರಂಭ, ಮುಂದಿನ ಹಬ್ಬಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಖರೀದಿಗೆ ಗ್ರಾಹಕರು ಮನಸ್ಸು ಮಾಡಿದ್ದರು. ಕಳೆದ ಎರಡು ದಿನಗಳಿಂದ ದರ ಹೆಚ್ಚಿಸಿಕೊಳ್ಳುವ ಮೂಲಕ ಚಿನ್ನಾಭರಣ ಪ್ರಿಯರಿಗೆ ಆಘಾತ ನೀಡಿದೆ. ದರ ಹೆಚ್ಚಳದಿಂದ ಹೂಡಿಕೆದಾರರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಮಾರ್ಚ್ 25ರಂದು ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 376 ರೂಪಾಯಿ ಮತ್ತು 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 345 ರೂಪಾಯಿ ಏರಿಕೆ ಆಗಿತ್ತು. ಇಂದು ಗುರುವಾರ (ಮಾ.26) ಕ್ರಮವಾಗಿ ಚಿನ್ನದ ಒಂದು ಗ್ರಾಮ ದರವು 22 ರೂಪಾಯಿ ಮತ್ತು 20 ರೂಪಾಯಿ ಏರಿಕೆ ಆಗಿದೆ. ಈ ಮೂಲಕ 24 ಕ್ಯಾರಟ್ 10 ಗ್ರಾಂ ದರ 1,46,890 ರೂಪಾಯಿ ತಲುಪಿದೆ. 22 ಕ್ಯಾರಟ್ ಬಂಗಾರದ ಬೆಲೆ 1,34,650 ರೂಪಾಯಿ ಮುಟ್ಟಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಇಂದಿನ ನಗರವಾರು ಚಿನ್ನದ ಬೆಲೆ ಮಾಹಿತಿ.
ಪ್ರಮುಖ ನಗರವಾರು 1 ಗ್ರಾಂ 22k ಚಿನ್ನದ ದರ, ಪಟ್ಟಿ
ಬೆಂಗಳೂರು: 13,465 ರೂಪಾಯಿ
ಚೆನ್ನೈ: 13,670 ರೂಪಾಯಿ
ದೆಹಲಿ: 13,480 ರೂಪಾಯಿ
ಮುಂಬೈ: 13,465 ರೂಪಾಯಿ
ಕೋಲ್ಕತ್ತ: 13,465 ರೂಪಾಯಿ
ಹೈದರಾಬಾದ್: 13,445 ರೂಪಾಯಿ
ಜೈಪುರ: 13,460 ರೂಪಾಯಿ
ಪ್ರಮುಖ ನಗರವಾರು 1 ಗ್ರಾಂ 24k ಚಿನ್ನದ ದರ, ಪಟ್ಟಿ
ಬೆಂಗಳೂರು: 14,689 ರೂಪಾಯಿ
ದೆಹಲಿ: 14,704 ರೂಪಾಯಿ
ಮುಂಬೈ: 14,689 ರೂಪಾಯಿ
ಕೋಲ್ಕತ್ತಾ: 14,689 ರೂಪಾಯಿ
ಚೆನ್ನೈ: 14,913 ರೂಪಾಯಿ
ಹೈದರಾಬಾದ್: 14,667 ರೂಪಾಯಿ
ಅಹಮದಾಬಾದ್: 14,672 ರೂಪಾಯಿ












Click it and Unblock the Notifications