Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್‌ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು
Bengaluru: ಬೆಂಗಳೂರಿನಿಂದ ಬೇರೆ ಊರುಗಳಿಗೆ ಹೋಗುವವರು ಹಾಗೂ ಬೇರೆ ಊರುಗಳಿಂದ ಬೆಂಗಳೂರಿಗೆ / ಮೆಜೆಸ್ಟಿಕ್‌ಗೆ ಬಂದು ಇಳಿಯುವವರಿಗೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಬರಹಗಾರರಾದ ವಿಶ್ವಾಸ್ ಭಾರದ್ವಾಜ್ (Vishwas Bharadwaj) ಅವರು ಸೋಷಿಯಲ್ ಮೀಡಿಯಾದಲ್ಲಿ ಬರಹವೊಂದನ್ನು ಹಂಚಿಕೊಂಡಿದ್ದು, ಇದು ವೈರಲ್ ಆಗುತ್ತಿದೆ. ವಿಶ್ವಾಸ್ ಭಾರದ್ವಾಜ್ ಅವರ ಬರಹ ಇಲ್ಲಿದೆ.
ಬೆಂಗಳೂರಿನಿಂದ ಬೇರೆ ಬೇರೆ ಭಾಗಗಳಿಂದ ರಾತ್ರಿ ಹೊರಡುವ ಖಾಸಗಿ ಬಸ್‌ಗಳು ಬೆಳಕು ಮೂಡುವ ಮೊದಲೆ ಅಂದರೆ ತೀರಾ 4:30ಕ್ಕೆ ನಮ್ಮನ್ನು ತಂದು ಮೆಜೆಸ್ಟಿಕ್ ಅಂಗಳಕ್ಕೆ ಬಿಸಾಕುತ್ತವೆ. ಮೆಜೆಸ್ಟಿಕ್‌ನಿಂದ ಮನೆಗೆ ಬರುವ ಸರ್ಕಸ್ ಇದೆಯಲ್ಲ ಅದು ಅನುಭವಿಸಲಾಗದ ನರಕ.

1) ನಮ್ಮನ್ನಿಳಿಸುವ ಜಾಗ ಬಿಎಂಟಿಸಿ ಬಸ್ ಸ್ಟ್ಯಾಂಡ್ ನಿಂದ ಬಹಳಷ್ಟು ದೂರವಿರುತ್ತದೆ. ಲಗ್ಗೇಜು ಹೊತ್ತುಕೊಂಡು ವಯಸ್ಸಾದವರನ್ನು ಮಕ್ಕಳನ್ನು ಕರೆದುಕೊಂಡು ನಡೆದು ಹೋಗಲು ಸಾಧ್ಯವಿಲ್ಲದ ಜಾಗವದು.
2) ಮೆಜೆಸ್ಟಿಕ್‌ನಲ್ಲಿ ಮೆಟ್ರೋ ಸ್ಟೇಷನ್ ಇದೆಯಲ್ಲ ಅದರ ತದ್ವಿರುದ್ಧ ದಿಕ್ಕಿನಲ್ಲಿ ಇಳಿಸಿ ಹೋಗುತ್ತಾನೆ. ಅಲ್ಲಿಗೆ ಮೆಟ್ರೋ ಕೂಡಾ ಅಲಭ್ಯ (ಬೆಳ್ಳಂಬೆಳಿಗ್ಗೆ 4:30 ಕ್ಕೆ ಮೆಟ್ರೊ ರೈಲುಗಳ ಚಾಲನೆಯೂ ಪ್ರಾರಂಭವಾಗಿರುವುದಿಲ್ಲ).
3) ಆ ಹೊತ್ತಿನಲ್ಲಿ ಓಲಾ, ಉಬರ್, ರ‍್ಯಾಪಿಡೋ ಮುಂತಾದ ಆ್ಯಪ್ ಗಳಲ್ಲಿ ನಿಮಗೆ ಆಟೋ ಆಗಲೀ, ಕ್ಯಾಬ್ ಆಗಲಿ ಬುಕ್ ಆಗುವುದೇ ಇಲ್ಲ. ಕಾರಣ ನಿಗೂಢ (ಬೇಕಿದ್ದರೆ ಪರೀಕ್ಷಿಸಿ ನೋಡಿ ಬೆಳಿಗ್ಗೆ 4ರಿಂದ 6ರವರೆಗೆ ಆಟೋ ಬುಕ್ ಆಗಲ್ಲ)
4) ಸಾಲಾಗಿ ನಿಂತ ಆಟೋ ಡ್ರೈವರ್‌ಗಳೆಂಬ ಹಗಲು ದರೋಡೆಕೋರರು ಅಕ್ಷರಶಃ ನಮ್ಮನ್ನು ದೋಚಲು ಹೊಂಚುಹಾಕಿ ನಿಂತಿರುತ್ತಾರೆ (ಮಾಮೂಲಿ ಸಂದರ್ಭದಲ್ಲಿ ಮೆಜೆಸ್ಟಿಕ್ ನಿಂದ ನಮ್ಮ ಮನೆಯಿರುವ ಇಟ್ಟಮಡುಗೆ ಗರಿಷ್ಟ 150 ರೂಪಾಯಿ ಮಾತ್ರ, ಆದರೆ ಈ ಹೊತ್ತಿನಲ್ಲಿ ಯಾವುದೇ ಆಟೋ ಡ್ರೈವರ್ ಕೇಳುವುದು ಮಿನಿಮಮ್ 600+ ರೂಪಾಯಿ)
5) ಮೆಜೆಸ್ಟಿಕ್‌ನಲ್ಲಿ ಆ ಹೊತ್ತಿನಲ್ಲಿ ಸಾಲು ಸಾಲು ಖಾಸಗಿ ಬಸ್‌ಗಳು ಟ್ರಾಫಿಕ್ ವ್ಯವಸ್ಥೆಯನ್ನು ನಾಶಮಾಡಲೆಂದೆ ಅಡ್ಡಡ್ಡ ಉದ್ದುದ್ದ ನಿಲ್ಲುತ್ತವೆ ವಿನಾಕಾರಣ
6) ನೀವು ಯಾವುದೇ ಆಟೋ ಡ್ರೈವರ್ ನನ್ನು ಯಾವುದೇ ಸ್ಥಳಕ್ಕೆ ಕರೆಯಿರಿ, ಅವರು ಹೇಳಿದ ರೇಟ್‌ಗೆ ಒಪ್ಪದಿದ್ದರೆ ಅವರು ಬರಲ್ಲ. ಅವರು ಕೇಳಿದ ಮೊತ್ತಕ್ಕೆ ನೀವು ಹೋಗದೇ ಇದ್ದರೇ ಕಣ್ಣಲ್ಲೇ ನಿಮ್ಮ ಖಾತಂ ಮಾಡುವಂತೆ ಗುರಾಯಿಸುವ ಆಟೋ ಡ್ರೈವರ್ ವೇಷದಲ್ಲಿರುವ ಪುಡಿ ರೌಡಿಗಳು ಹಳೆ ಮೈಸೂರು ಕನ್ನಡ ಭಾಷೆಯಿಂದ ಹಿಡಿದು ಉರ್ದು ಭಾಷೆಯವರೆಗೆ ಅವರ ಪದಕೋಶದ ಎಲ್ಲಾ ಬೈಗುಳಗಳ ಮಳೆ ಸುರಿಸುತ್ತಾರೆ, ಅದವರ ಸ್ವಾಗತ ಸಂಭಾಷಣೆ.
7) ಬೆಳಿಗ್ಗೆ ಆ ಹೊತ್ತಿನಲ್ಲಿ ನಿಮಗೆ ಒಬ್ಬನೆ ಒಬ್ಬ ಟ್ರಾಫಿಕ್ ಪೊಲೀಸನಾಗಲೀ ಅಥವಾ ಲಾ & ಆರ್ಡರ್ ಪೋಲೀಸರಾಗಲಿ ಕಾಣಿಸುವುದಿಲ್ಲ.
ಯಾರಾದರೂ ಒಬ್ಬನೇ ವ್ಯಕ್ತಿ ಊರಿಂದ ಬಸ್ಸಿಳಿದು ಆಟೋ ಸಹವಾಸವೇ ಬೇಡ ಎಂದು ರ್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡೋಣ ಎಂದುಕೊಂಡರೇ, ಗೂಂಡಾ ಆಟೋ ಡ್ರೈವರ್ ಗಳು ಆ ರ್ಯಾಪಿಡೋ ಬೈಕ್ ರೈಡರ್ ಗೆ ಹೊಡೆದು ಬಡಿದು ಹಣ್ಣುಗಾಯಿ ನೀರುಗಾಯಿ ಮಾಡಿ ಕಳಿಸ್ತಾರೆ. (ಈಗೀಗ ಮೆಜೆಸ್ಟಿಕ್ ನಿಂದ ನಿಮಗೆ ರ್ಯಾಪಿಡೋ ಬೈಕ್‌ಗಳೂ ಸಿಗುವುದಿಲ್ಲ). ಮಧ್ಯಮ ವರ್ಗದವರು ತಮ್ಮ ತಮ್ಮ ಊರುಗಳಿಂದ ಮೆಜೆಸ್ಟಿಕ್ ಗೆ ಬರುವವರಾದರೇ ಅವರು ಇಡೀ ವ್ಯವಸ್ಥೆಗೆ ಹಿಡಿಶಾಪ ಹಾಕಿ ನಿಟ್ಟುಸಿರು ಬಿಟ್ಟು ಹೆಣಗಾಡಿ ಮನೆ ಸೇರಿಕೊಳ್ಳಬೇಕಾದ ಪರಿಸ್ಥಿತಿ ಇದೆ.
ಬೆಂಗಳೂರಲ್ಲಿ ಹೀಗೆ ಅವ್ಯವಸ್ಥೆಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ಬೆಳಗಿನ ಜಾವದ ಸಿಹಿನಿದ್ದೆ. ಹೋಮ್ ಮಿನಿಸ್ಟರ್ ಸಾಹೇಬರು ಇದ್ದಾರೋ ಇಲ್ಲವೋ ಅವರೇ ಹೇಳಬೇಕು. ಟ್ರಾಫಿಕ್ ಪೊಲೀಸ್ ಮತ್ತು ಲಾ & ಆರ್ಡರ್ ಕಮಿಷನರ್ ಗಮನಕ್ಕೆ ಈ ವಿಚಾರಗಳು ಬರತ್ತವೋ ಇಲ್ಲವೋ ಅಥವಾ ಅವರೂ ಈ ಅವ್ಯಸ್ಥೆಯಿಂದ ಆರ್ಥಿಕ ಫಲಾನುಭವಿಯೋ ಅವರೇ ಸ್ಪಷ್ಟಪಡಿಸಲಿ. ಒಟ್ಟಿನಲ್ಲಿ ನಮ್ಮ ಈ ದರಿದ್ರ ವ್ಯವಸ್ಥೆ ಬಡವರ ಮತ್ತು ಮಧ್ಯಮ ವರ್ಗದ ರಕ್ತ ಹೀರುವುದರಲ್ಲೇ ಪರಮಸುಖ ಕಾಣ್ತಿದೆ ಅನ್ನೋದು ಸತ್ಯ.
Bengaluru ನೆಟ್ಟಿಗರು ಹೇಳಿದ್ದೇನು
ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಮೊನ್ನೆ ಆಟೋದವರು ಮೆಜೆಸ್ಟಿಕ್‌ನಿಂದ ರಾಜಾಜಿನಗರಕ್ಕೆ 1200 ರೂ ಕೇಳಿದ್ದರು. ಅದೂ ಕನ್ನಡದವರು ಅಂತ ಅಷ್ಟಂತೆ. ಇನ್ನು ಬೇರೆಯವರಿಗೆ ಎಷ್ಟೋ ಎಂದು ದರ್ಶನ್ ಆರಾಧ್ಯ ಎನ್ನುವವರು ಹೇಳಿದ್ದಾರೆ.
ಶ್ರೀಪಾದ್ ಹೆಗಡೆ ಎನ್ನುವವರು, ಕರ್ನಾಟಕದಲ್ಲಿ ಮಂಗಳೂರೊಂದನ್ನು ಬಿಟ್ಟು ಮಿಕ್ಕವೆಲ್ಲ ಹೆಚ್ಚು ಕಡಿಮೆ ಹೀಗೆ. ಈ ಆನ್‌ಲೈನ್ ಆ್ಯಪ್‌ಗಳಲ್ಲಿ ನಮಗೆ ಬೇಕಾದ ಸಮಯದಲ್ಲಿ ಅದೂ ಅರ್ಜೆಂಟ್ ಇದ್ದಾಗ ಬುಕ್ ಆಗುವುದಿಲ್ಲ. ಅದರಲ್ಲೂ ನಾಲ್ಕೇ ನಾಲ್ಕು ಹನಿ ಮಳೆ ಬಂತು ಅಂದರೆ ಮುಗೀತು. ಇನ್ನು ಬರುವಾಗ ಬೆಳಗಿನ ಜಾವ ಇಳಿದಾಗ ಇವರ ದರೋಡೆ ಹೇಳಲಸಾಧ್ಯ. ನನಗಂತೂ ರೇಗಿ ಹೋಗುತ್ತದೆ.
ನನಗೆ ಬಸ್ ಚಾರ್ಜ್ 6000 ಇದ್ದಾಗ , ಬೆಂಗಳೂರಿನಲ್ಲಿ ಇಳಿದಾಗ ಮನೆಗೆ ಹೋಗುವುದಕ್ಕೆ 200 ರೂ. ಯಾರು ಹೀಗೆ 1979ರಲ್ಲಿ ನಾನು ಬೆಂಗಳೂರಿಗೆ ಬಂದವ. ನಂತರ ಬೆಂಗಳೂರಿನಲ್ಲಿ ಇಳಿದಾಗ ಮಾತ್ರ ಆ ಕಾಲದಲ್ಲಿ ನಾನು ಆಟೋದಲ್ಲಿ ಬರುತ್ತಿದ್ದೆ, ಉಳಿದೆಲ್ಲ ಸಮಯದಲ್ಲಿ ಕಾಲ್ನಡಿಗೆ ಅಥವಾ ಬಸ್. ಒಮ್ಮೆಯೂ ಆಟೊ ಡ್ರೈವರ್ ಜೊತೆ ಸೆಣಸಾಡದೆ ಇದ್ದ ಉದಹಾರಣೆಯೇ ಇರಲಿಲ್ಲ. ಮಂಗಳೂರಿನಲ್ಲಿ ಈಗ ಐವತ್ತು ವರ್ಷಗಳ ಹಿಂದೆಯೂ ಈದರೋಡೆ ಇರಲಿಲ್ಲ, ಈಗಲೂ ಅನಿಸುತ್ತದೆ. ಏಕೆಂದರೆ ಕಳೆದ ವರ್ಷ ಎರಡು ದಿನ ಮತ್ತು ಭೇಟಿ ಬಾರಿ ತಡ ರಾತ್ರಿ ಸಹ ನಡೆದಿದ್ದೇನೆ. ಬರುವುದಿಲ್ಲವೆಂದು ಹೇಳಲಿಲ್ಲ ಮತ್ತು ಮೀಟರ್‌ಗಿಂತ ಹೆಚ್ಚು ಕೇಳಲಿಲ್ಲ ಎಂದು ಮಂಗಳೂರು - ಬೆಂಗಳೂರು ಆಟೋ ಚಾಲಕರ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.
ಮುರಳಿ ಎನ್ನುವವರು, ವಿಶ್ವಾಸ್... ಇದು ಖಾಸಗಿ ಬಸ್ ಪ್ರಯಾಣಿಕರ ಸಮಸ್ಯೆ. ನಿಜ ಹೇಳ್ತೀನಿ ಈ ದುರಹಂಕಾರಿ ಖಾಸಗಿ ಬಸ್‌ಗಳ ಸಿಬ್ಬಂದಿಗಿಂತ ನಮ್ಮ ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿ ಬಹುಪಾಲು ಉತ್ತಮ. ನಿಮ್ಮನ್ನವರು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಬಳಿ ಬಿಡ್ತಾರೆ. ಆ ವೇಳೆ ಆಟೋ ಹಿಡಿಯುವ ಬದಲಿಗೆ ಐದರ ವರೆಗೆ ಕಾದು ಮೆಟ್ರೋ ಹತ್ತೋದು ಬಹಳ ಉತ್ತಮ ಕೆಲಸ.
ಖಾಸಗಿ ಬಸ್‌ಗಳ concentration ಟ್ಯಾಂಕ್ ಬಂಡ್ ರೋಡ್, ಸುಭೇದಾರ್ ಛತ್ರಂ ರಸ್ತೆ ಹಾಗೂ ಆನಂದ ರಾವ್ ಸರ್ಕಲ್‌ಗಳಲ್ಲಿ ಹೆಚ್ಚು. ಇಲ್ಲಿ ನೀವು ಹೇಳಿದ ಎಲ್ಲಾ ಸಮಸ್ಯೆಗಳು ಅನಾವರಣ ಆಗ್ತವೆ. ಅಷ್ಟೊತ್ನಲ್ಲಿ ಉಬರ್ ಆಟೋ ಬುಕ್ ಆಗ್ತವೆ. ಇದು ನನ್ನ ವೈಯಕ್ತಿಕ ಅನುಭವ. ನಾನು ಬಿಎಂಟಿಸಿ ಬಸ್ ಹತ್ತೋದು ಬಹಳ ಕಡಿಮೆ. ಯಾವಾಗಲೋ ಒಮ್ಮೆ ಬೆಂಗಳೂರಿಗೆ ಕೆಲಸದ ನಿಮಿತ್ತ ಬರುವ ನಮಗೆ ಮೆಟ್ರೋ ಪ್ರಯಾಣ + ಒಂದಿಷ್ಟು ಸ್ಥಳೀಯ ಉಬರ್ ಆಧರಿತ ಆಟೋ ಸರಿ ಅನ್ನಿಸ್ತದೆ ಎಂದು ಹೇಳಿದ್ದಾರೆ.
-
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
Viral Video: ಮಗುವಿಗೆ 'ವಿರಾಟ್' ಎಂದು ಹೆಸರಿಟ್ಟ ಮಹಾರಾಷ್ಟ್ರದ ದಂಪತಿ, ವಿಡಿಯೋ ವೈರಲ್ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್‌ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ











Click it and Unblock the Notifications