Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ
ರಾಜಧಾನಿ ಬೆಂಗಳೂರಿನ ಕಾಡುಗೋಡಿ ಕೈಗಾರಿಕಾ ಪ್ರದೇಶದಲ್ಲಿರುವ ಒಟ್ಟು ಸುಮಾರು 78 ಎಕರೆ ಜಮೀನು ಇದ್ದಕ್ಕಿದ್ದಂತೆ ತೀವ್ರ ಕಾನೂನು ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಎಂಬೆಸ್ಸಿ ಡೆವಲಪ್‌ಮೆಂಟ್ ಕಚೇರಿ ಅಂಗಸಂಸ್ಥೆಗಳ ಪೈಕಿ ಭೂಮಿಯನ್ನು ಹಿಂತಿರುಗಿಸುವಂತೆ ಆದೇಶಿಸಿದೆ. ಕಂಪನಿಗೆ ಒಂದು ತಿಂಗಳು ಗಡುವು ನೀಡಲಾಗಿದೆ ಎಂದು ಆದೇಶದಲ್ಲಿ ಮಂಡಳಿ ತಿಳಿಸಿದೆ. ಕಂಪನಿಯು ಈ ಆದೇಶ ಪ್ರಶ್ನಿಸಲು ಮುಂದಾಗಿದೆ.
ಈ ಬಗ್ಗೆ ಎಂಬೆಸ್ಸಿ ಅಂಗಸಂಸ್ಥೆಯಾದ ರಿಯಾಲ್ಟಿ ಸಂಸ್ಥೆ ಎಂಬೆಸ್ಸಿ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಿದೆ. ಇದೇ ತಿಂಗಳ ಮಾರ್ಚ್ 16ರಂದು ಮಂಡಳಿ ಆದೇಶ ಹೊರಡಿಸಿದೆ. ಜಾಗ ಹಿಂತಿರುಗಿಸಲು ಒಟ್ಟು 30 ದಿನಗಳ ಕಾಲಾವಕಾಶ ನೀಡಲಾಗಿದೆ.

2029 ರವರೆಗೆ ದೀರ್ಘಾವಧಿ ಒಪ್ಪಂದ
ಸದರಿ ಈ 78 ಎಕರೆ ವಿಸ್ತೀರ್ಣದ ಭೂಮಿಯನ್ನು ಎಂಬಸಿ ಈಸ್ಟ್ ಬ್ಯುಸಿನೆಸ್ ಪಾರ್ಕ್ ಲಿಮಿಟೆಡ್ (ಇಇಬಿಪಿಎಲ್) 2007 ರ ಜೂನ್ಲ್ಲಿ ಸಹಿ ಮಾಡಿದ ಗುತ್ತಿಗೆ-ಕಮ್-ಮಾರಾಟ ಒಪ್ಪಂದದಡಿಯಲ್ಲಿ ಪಡೆದಿದೆ. ಈ ಒಪ್ಪಂದವು ಮುಂದಿನ ಎರಡು ವರ್ಷಗಳ ನಂತರ ಅಂದರೆ 2029 ರವರೆಗೆ ಅವಧಿವರೆಗೆ ಮಾನ್ಯತೆ ಇದೆ. ಇದೊಂದು ದೀರ್ಘ ಒಪ್ಪಂದವಾಗಿದೆ. ಮಾತ್ರವಲ್ಲದೇ ಕಂಪನಿಯು ಒಪ್ಪಂದದ ನಿಯಮ ಉಲ್ಲಂಘಿಸಿದೆ ಎಂದು ಕೆಐಎಡಿಬಿ ಆರೋಪಿಸಿದೆ.
ಆರೋಪ ನಿರಾಕರಿಸಿದ ಕಂಪನಿ
ಮೂರನೇ ವ್ಯಕ್ತಿಗಳ ಜೊತೆಗೆ ಇಇಬಿಪಿಎಲ್ ಒಪ್ಪಂದ ಮಾಡಿಕೊಂಡಿದ್ದರಿಂದ ಇಂದು ಜಾಗದ ವಿಚಾರ ವಿವಾದಕ್ಕೆ ತಿರುಗಿದೆ. ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (KIADB) ಪ್ರಕಾರ, ಇಇಬಿಪಿಎಲ್ ಪೂರ್ವಾನುಮತಿ ಇಲ್ಲದೆ ಭೂಮಿಯ ಕೆಲವು ಭಾಗಗಳಿಗೆ ತಿಳುವಳಿಕೆ, ಒಪ್ಪಂದಗಳು ಮತ್ತು ಮಾರಾಟ ಒಪ್ಪಂದವನ್ನು ಮಾಡಿಕೊಂಡಿದೆ. ಗುತ್ತಿಗೆ ಷರತ್ತುಗಳಿಗೆ ಅನುಗುಣವಾಗಿ ಕೈಗಾರಿಕೆ ಮಂಡಳಿಯು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ಪಡೆದ ನಂತರವೇ ಉಪ-ಗುತ್ತಿಗೆ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿ ಕಂಪನಿಯು ತನ್ನ ಮೇಲಿನ ಆರೋಪ ನಿರಾಕರಿಸಿದೆ.
ಮಾರಾಟ ಮಾಡುವ ಒಪ್ಪಂದಗಳು ಆಸ್ತಿ ಹಕ್ಕುಗಳ ವರ್ಗಾವಣೆಗೆ ಸಮನಾಗಿರುವುದಿಲ್ಲ ಮತ್ತು ಕೈಗಾರಿಕೆ ಮಂಡಳಿಯಿಂದ ಮಾರಾಟ ಪತ್ರಗಳು ಸೇರಿದಂತೆ ಅಗತ್ಯ ಅನುಮೋದನೆಗಳಿಗೆ ಒಳಪಟ್ಟು ಕಾರ್ಯಗತಗೊಳಿಸಲಾಗಿದೆ ಎಂದು ಕೆಐಎಡಿಬಿ ತಿಳಿಸಿದೆ.
ಈ ವ್ಯವಸ್ಥೆಗಳು ಒಪ್ಪಂದದ ಉಲ್ಲಂಘನೆ ಆಗಿಲ್ಲ, ಯೋಜನೆ ಸಮಯಾವಧಿಯಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಸದ್ಯ ವಿವಾದವು ಹೊಸ ತಿರುವು ಪಡೆದುಕೊಂಡಿದಕ್ಕೆ ಇಇಪಿಬಿಎಲ್ ಕಳವಳ ವ್ಯಕ್ತಪಡಿಸಿದೆ. ಒಪ್ಪಂದಕ್ಕೆ ಕುರಿತಂತೆ ಈ ಹಿಂದೆ ತಿಳಿಸಿದ್ದ ಮಾಹಿತಿಗಳನ್ನು ಕಡೆಗಣಿಸಲಾಗಿದೆ. ನೈಸರ್ಗಿಕ ನ್ಯಾಯದ ದಾರಿಯಲ್ಲಿ ಮಾಡಿಕೊಂಡ ಒಪ್ಪಂದದ ಮೇಲೆ ಒಂದಷ್ಟು ಪ್ರಶ್ನೆಗಳನ್ನು ಹುಟ್ಟಿಕೊಂಡಿವೆ ಎಂದು ಅಸಮಾಧಾನ ಹೊರ ಹಾಕಿದೆ.
ಇಷ್ಟಕ್ಕೆ ಸುಮ್ಮನಾಗದ ಎಂಬೆಸ್ಸಿ ಡೆವಲಪ್‌ಮೆಂಟ್ಸ್ ಕಂಪನಿ ತನ್ನ ಮುಂದಿರುವ ಆಯ್ಕೆಗಳನ್ನು ಪರಿಶೀಲಿಸುತ್ತಿದೆ. ಭೂಮಿ ಹಿಂತಿರುಗಿವಂತೆ ಸೂಚಿಸಿರುವ ಆದೇಶವನ್ನು ನ್ಯಾಯಯುತವಾಗಿ ಪ್ರಶ್ನಿಸಲು ಕಂಪನಿ ಚಿಂತನೆ ನಡೆಸಿದೆ. ಸಂಭಾವ್ಯ ಆರ್ಥಿಕ ಮತ್ತು ಕಾರ್ಯಾಚರಣೆಯ ಪರಿಣಾಮ ಎದುರಿಸುವ ಉದ್ದೇಶದಿಂದ ಈ ನಿರ್ಧಾರ ಬಂದಿದೆ ಎನ್ನಲಾಗಿದೆ.












Click it and Unblock the Notifications