Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್‌ನಿಂದ ಹೊಸ ನಿಯಮ
ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಅನುಕೂಲವಾಗುವ ಸಾಕಷ್ಟು ಉಪಕ್ರಮ ಜಾರಿಗೆ ತಂದಿದೆ. ಮುಂದುವರಿದು ಇದೀಗ ಮೊದಲು ಬುಕ್ ಮಾಡಿ ನಂತರ ಕಾರಣಾಂತರಗಳಿಂದ ಮಾಡುವ ಟಿಕೆಟ್ ರದ್ದತಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಏಪ್ರಿಲ್‌ನಲ್ಲಿ ಜಾರಿಗೆ ತರಲು ಮುಂದಾಗಿದೆ. ಈ ಮೂಲಕ ಮಧ್ಯವರ್ತಿಗಳ ಟಿಕೆಟ್ ಬುಕಿಂಗ್ ದುರುಪಯೋಗ ತಡೆಗಟ್ಟಲಿದೆ.
ದೃಢಪಡಿಸಿದ ಟಿಕೆಟ್‌ಗಳ ರದ್ದತಿಗೆ ತನ್ನ ನಿಯಮಗಳನ್ನು ರೈಲ್ವೆ ಇಲಾಖೆ ಪರಿಷ್ಕರಿಸಿ ಹೊಸ ನಿಯಮಗಳು ಏಪ್ರಿಲ್ 1 ರಿಂದ ಏಪ್ರಿಲ್ 15ರ ನಡುವೆ ಜಾರಿಗೆ ತರಲಿದೆ. ಈ ನಿಯಮದ ಪ್ರಕಾರ ಬೋರ್ಡಿಂಗ್ ನಿಲ್ದಾಣಗಳಲ್ಲಿ ಕೊನೆಯ ಕ್ಷಣದ ಬದಲಾವಣೆ ಮಾಡುವ ಪ್ರಯಾಣಿಕರಿಗೆ ಪ್ರಯೋಜನ ಒದಗಿಸುತ್ತದೆ. ರೈಲು ನಿಲ್ದಾಣದಿಂದ ಹೊರಡುವ ಸಮಯ ಹಲವು ಗಂಟೆಗಳ ಆಧಾರದಲ್ಲಿ ಟಿಕೆಟ್ ರದ್ದತಿ, ರದ್ದುಗೊಂಡ ಟಿಕೆಟ್ ಹಣದ ಪೈಕಿ ಎಷ್ಟು ದಂಡವಾಗಿ ಕಡಿತಗೊಳ್ಳಲಿದೆ, ಎಷ್ಟು ಮರಳಿ ಪ್ರಯಾಣಿಕರಿಗೆ ಪಾವತಿ ಆಗಲಿದೆ ಎಂಬ ಮಾಹಿತಿ ಇಲ್ಲಿದೆ.

ಟಿಕೆಟ್ ರದ್ದು ಸಮಯ, ಹಣ ಮರುಪಾವತಿ
ಪರಿಷ್ಕೃತ ನಿಯಮಗಳ ಪ್ರಕಾರ, ರೈಲು ನಿರ್ಗಮಿಸುವ 72 ಗಂಟೆಗೂ ಮೊದಲು ಟಿಕೆಟ್ ರದ್ದುಗೊಳಿಸಿದರೆ ಪ್ರಯಾಣಿಕರಿಗೆ ಮರಳಿ ಗರಿಷ್ಠ ಹಣ ಮರು ಪಾವತಿ ಆಗುತ್ತದೆ. ಒಬ್ಬ ಪ್ರಯಾಣಿಕ ಪ್ರಯಾಣಕ್ಕೂ ಮುನ್ನ 72 ಗಂಟೆಗಳಿಂದ 24 ಗಂಟೆಗಳ ನಡುವೆ ಟಿಕೆಟ್ ರದ್ದುಗೊಳಿಸಿದರೆ ಶೇ.25ರಷ್ಟು ಹಣ ದಂಡವಾಗಿ ಕಡಿತಗೊಂಡು ಉಳಿದ ಹಣವನ್ನು ಮರು ಪಾವತಿ ರೂಪದಲ್ಲಿ ಪಡೆಯುತ್ತಾರೆ.
ಪ್ರಯಾಣಕ್ಕೂ ಕೆಲವೇ ಗಂಟೆಗಳ ಮುಂಚಿತವಾಗಿ ಅಂದರೆ ಟಿಕೆಟ್ ರದ್ದುಗೊಳಿಸುವುದು ತಡವಾದರೆ ದಂಡದ ಪ್ರಮಾಣ ಹೆಚ್ಚಾಗುತ್ತದೆ. ಕೇವಲ 24ರಿಂದ 8 ಗಂಟೆಗಳ ನಡುವೆ ಟಿಕೆಟ್ ರದ್ದುಗೊಳಿಸಿದರೆ, ಕನಿಷ್ಠ ಶುಲ್ಕಕ್ಕೆ ಒಳಪಟ್ಟು ಅರ್ಧದಷ್ಟು (50 ಪ್ರತಿಶತ) ಟಿಕೆಟ್ ಕಡಿತಗೊಳ್ಳುತ್ತದೆ. ರೈಲು ನಿರ್ಗಮನ ಸಮಯಕ್ಕಿಂತ ಅತೀ ಕಡಿಮೆ ಸಮಯವಿದ್ದಾಗ ಟಿಕೆಟ್ ರದ್ದುಗೊಳಿಸಲು, ಮರುಪಾವತಿಗೆ ಅನುಮತಿ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ದಲ್ಲಾಳಿಗಳ ಟಿಕೆಟ್ ಬುಕಿಂಗ್‌ಗೆ ಕಡಿವಾಣ
ಟಿಕೆಟ್ ಮಾದರಿಗಳ ಮೌಲ್ಯಮಾಪನದ ಪ್ರಕಾರ, ರೈಲು ನಿರ್ಗಮನ ಸಮಯಕ್ಕೂ ಮೊದಲು ದಲ್ಲಾಳಿಗಳು ಹೆಚ್ಚು ಟಿಕೆಟ್‌ಗಳನ್ನು ಬುಕ್ ಮಾಡುತ್ತಾರೆ. ನಂತರ ಮಾರಾಟವಾಗದ ಟಿಕೆಟ್‌ಗಳನ್ನು ರದ್ದುಗೊಳಿಸುತ್ತಾರೆ. ಇದರಿಂದಾಗಿ ಗಮನಾರ್ಹ ಬುಕಿಂಗ್ ಮೊತ್ತದ ಹಣ ಮರಳಿ ಪಡೆಯುತ್ತಿದ್ದಾರೆ. ಸದ್ಯ ಟಿಕೆಟ್ ದರ ಮರು ಪಾವತಿ ನಿಯಮ ಪರಿಷ್ಕರಣೆಯಿಂದಾಗಿ ದಲ್ಲಾಳಿಗಳ ಟಿಕೆಟ್ ಬುಕಿಂಗ್ ಮೂಲಗುಂಪು ಮಾಡಲಾಗುತ್ತದೆ ಎಂದು ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಬೋರ್ಡಿಂಗ್ ಸ್ಟೇಷನ್ ಬದಲಾವಣೆ ಅವಕಾಶ
ಇನ್ನೂ ಹೊಸ ನಿಯಮದ ಪ್ರಕಾರ, ರೈಲು ಹೊಡುವ 30 ನಿಮಿಷಗಳ ಮುನ್ನ ಪ್ರಯಾಣಿಕರು ತಮ್ಮ ಬೋರ್ಡಿಂಗ್ ನಿಲ್ದಾಣ ಬದಲಾಯಿಸಲು ಅವಕಾಶ ನೀಡಲಾಗಿದೆ. ಈ ಬದಲಾವಣೆಯಿಂದ ಬೆಂಗಳೂರಿನಂತಹ ಬಹು ನಿಲ್ದಾಣಗಳನ್ನು ಹೊಂದಿರುವ ನಗರದ ಪ್ರಯಾಣಿಕರಿಗೆ ಸಹಾಯವಾಗಲಿದೆ. ತಮ್ಮ ಅನುಕೂಲಕರ ಅಥವಾ ಹತ್ತಿರದ ರೈಲು ನಿಲ್ದಾಣದಿಂದ ರೈಲು ಹತ್ತಲು ಅನುಕೂವಾಗಲಿದೆ.












Click it and Unblock the Notifications