ಹಿರಿಯ ನಾಗರಿಕರಿಗೆ ರೈಲ್ವೇ ನಿಯಮಗಳು 2026: ರಿಯಾಯಿತಿ ಇಲ್ಲದಿದ್ದರೂ ಸೌಲಭ್ಯಗಳು ಮುಂದುವರಿಕೆ
ನವದೆಹಲಿ: ಭಾರತೀಯ ರೈಲ್ವೇ ಹಿರಿಯ ನಾಗರಿಕರಿಗೆ ಸಂಬಂಧಿಸಿದ 2026ರ ಕೆಲವು ಪ್ರಮುಖ ಸೌಲಭ್ಯಗಳನ್ನು ಇನ್ನು ಕೂಡ ಜಾರಿಗೊಳಿಸಿಲ್ಲ. ಕೋವಿಡ್ ನಂತರ ಸ್ಥಗಿತಗೊಳಿಸಲಾದ ಹಿರಿಯ ನಾಗರಿಕರ ಈ ರಿಯಾಯಿತಿಗಳಿಗೆ ಬೇಡಿಕೆಗಳಿದ್ದರು ರೈಲ್ವೇ ಇಲಾಖೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ.
2026ರ ಮೊದಲು ಅಂದರೆ ಕೋವಿಡ್ ಮೊದಲು 60 ವರ್ಷ ಮೇಲ್ಪಟ್ಟ ಪುರುಷರಿಗೆ 40% ಮತ್ತು 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 50% ಟಿಕೆಟ್ ರಿಯಾಯಿತಿ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಹಿರಿಯ ನಾಗರಿಕರು ಸಂಪೂರ್ಣ ದರದಲ್ಲೇ ಟಿಕೆಟ್ ಪಡೆಯಬೇಕಾಗಿದೆ. ಆದರೂ ಹಿರಿಯ ನಾಗರಿಕರ ಪ್ರಯಾಣಕ್ಕೆ ಅನುಕೂಲ ಆಗುವಂತೆ ಕೆಲವು ಪ್ರಮುಖ ಸೌಕರ್ಯಗಳು ಮುಂದುವರೆದಿವೆ.

ಕೆಳಗಡೆ ಬರ್ತ್‌ಗಳಿಗೆ ಆದ್ಯತೆ
ಹಿರಿಯ ನಾಗರಿಕರು 45 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಕೆಳಗಡೆ ಬರ್ತ್‌ಗಳಿಗೆ ಆದ್ಯತೆ ನೀಡಲಾಗುತ್ತದೆ. ಬುಕಿಂಗ್ ಸಮಯದಲ್ಲಿ ವಿಶೇಷವಾಗಿ ಆಯ್ಕೆ ಮಾಡದಿದ್ದರೂ ಈ ಲಭ್ಯತೆ ಇದ್ದರೆ ಸ್ವಯಂಚಾಲಿತವಾಗಿ ಕೆಳಗಡೆ ಬರ್ತ್ ನೀಡಲಾಗುತ್ತದೆ. ಪ್ರತಿ ಕೋಚ್‌ನಲ್ಲಿ ಕೆಲವು ಕೆಳಗಡೆ ಬರ್ತ್‌ಗಳನ್ನು ಮೀಸಲಿಡಲಾಗಿದೆ. ಸ್ಲೀಪರ್ ಕ್ಲಾಸ್‌ನಲ್ಲಿ ಸುಮಾರು 6-7 ಲೋವರ್ ಬರ್ತ್‌ಗಳು, 3ACನಲ್ಲಿ 4-5 ಹಾಗೂ 2ACನಲ್ಲಿ 3-4 ಬರ್ತ್‌ಗಳನ್ನು ಕಾಯ್ದಿರಿಸಲಾಗಿರುತ್ತದೆ.
ವಿಶೇಷಚೇತನರಿಗೆ ಪ್ರತ್ಯೇಕ ಕೋಟಾ
ವಿಶೇಷಚೇತನ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ವಿಶೇಷ ಮೀಸಲಾತಿ ಕೋಟಾವನ್ನು ಒದಗಿಸಿದೆ. ಇದು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಜೊತೆಗೆ ರಾಜಧಾನಿ, ಶತಾಬ್ದಿ ತರದ ಪ್ರೀಮಿಯಂ ರೈಲುಗಳಲ್ಲಿಯೂ ಲಭ್ಯವಿದೆ. ಈ ಕೋಟಾದಡಿಯಲ್ಲಿ ಸ್ಲೀಪರ್ ಕ್ಲಾಸ್‌ನಲ್ಲಿ 4 ಬರ್ತ್‌ಗಳು (ಇದರಲ್ಲೂ 2 ಲೋವರ್), 3AC/3E ಕೋಚ್‌ಗಳಲ್ಲಿ 4 ಬರ್ತ್‌ಗಳು ಮತ್ತು 2S ಅಥವಾ ಚೇರ್ ಕಾರ್‌ನಲ್ಲಿ 4 ಸೀಟುಗಳನ್ನು ಕಾಯ್ದಿರಿಸಲಾಗಿರುತ್ತದೆ.
ಪ್ರಯಾಣದ ವೇಳೆ ಆದ್ಯತೆ ನೀಡುವುದು
ರೈಲು ಹೊರಟ ಬಳಿಕ ಕೆಳಗಡೆ ಬರ್ತ್ ಖಾಲಿಯಾಗಿದ್ದರೆ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಗರ್ಭಿಣಿಯರಿಗೆ ಆದ್ಯತೆ ನೀಡಿ ಅವುಗಳನ್ನು ಹಂಚಿಕೆ ಮಾಡಲಾಗುತ್ತದೆ. ಒಟ್ಟಿನಲ್ಲಿ ದರಗಳಲ್ಲಿ ರಿಯಾಯಿತಿ ಇಲ್ಲದಿದ್ದರೂ ಹಿರಿಯ ನಾಗರಿಕರು ಮತ್ತು ವಿಶೇಷ ಅಗತ್ಯವಿರುವ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸುಲಭ ಪ್ರಯಾಣವನ್ನು ಖಚಿತಪಡಿಸಲು ರೈಲ್ವೆ ಇಲಾಖೆ ಈ ಸೌಲಭ್ಯಗಳನ್ನು ಮುಂದುವರಿಸಿದೆ.
ಡಿಜಿಟಲ್ ಬುಕ್ಕಿಂಗ್
ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ಡಿಜಿಟಲ್ ಸೇವೆಗಳ ಬಳಕೆಯನ್ನು ತಿಳಿದುಕೊಳ್ಳುವುದು ತುಂಬಾ ಅಗತ್ಯವಾಗಿದೆ. IRCTC ಮೂಲಕ ಸುಲಭವಾಗಿ ಟಿಕೆಟ್ ಕಾಯ್ದಿರಿಸಲು ಅವಕಾಶವಿದ್ದು ತಮ್ಮ ಕುಟುಂಬದ ಸದಸ್ಯರು ಅಥವಾ ಸಹಾಯಕರ ನೆರವಿನಿಂದ ಇದನ್ನು ಬಳಸಬಹುದು.












Click it and Unblock the Notifications