Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು
Tamarind Sale: ಸಾಮಾನ್ಯವಾಗಿ ಹುಣಸೆ ಹಣ್ಣು ಅಡುಗೆ ಮನೆಯಲ್ಲಿ ಇರಲೇಬೇಕಾದ ಪ್ರಮುಖ ಪದಾರ್ಥವಾಗಿದೆ. ಆದರೆ, ತುಮಕೂರಿನ ಈ ಹುಣಸೆ ಹಣ್ಣಿನ ಬೆಲೆ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ. ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಹುಣಸೆ ಬರೋಬ್ಬರಿ 44 ಸಾವಿರ ರೂಪಾಯಿಗೆ ಮಾರಾಟವಾಗಿದ್ದು, ಇದರಿಂದ ರೈತ ಜಯಣ್ಣ ಅವರ ಮುಖದಲ್ಲಿ ಮಂದಹಾಸ ಮೂಡಿದೆ. ಈ ಕುರಿತು ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ತುಮಕೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ವಹಿವಾಟು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಗುಬ್ಬಿ ತಾಲ್ಲೂಕಿನ ಕುಂಟರಾಮನಹಳ್ಳಿಯ ರೈತ ಜಯಣ್ಣ ಎಂಬುವವರು ತಾವು ಬೆಳೆದ ಅತ್ಯುತ್ತಮ ಗುಣಮಟ್ಟದ ಹುಣಸೆ ಹಣ್ಣನ್ನು ಮಾರುಕಟ್ಟೆಗೆ ತಂದಿದ್ದರು.

ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು
ಜಯಣ್ಣ ಅವರು ತಂದಿದ್ದ ಕೇವಲ 55 ಕೆ.ಜಿ ತೂಕದ ಹುಣಸೆ ಹಣ್ಣನ್ನು ವ್ಯಾಪಾರಿಯೊಬ್ಬರು ₹24,200 ನೀಡಿ ಖರೀದಿಸಿದ್ದಾರೆ. ಇದರ ಲೆಕ್ಕಾಚಾರದ ಪ್ರಕಾರ ಪ್ರತಿ ಕ್ವಿಂಟಲ್‌ಗೆ ₹44,000 ದರ ಸಿಕ್ಕಂತಾಗಿದೆ. ಇದು ಈ ವರ್ಷದ ಹಂಗಾಮಿನಲ್ಲೇ ಅತಿ ಹೆಚ್ಚು ಬೆಲೆಯಾಗಿದೆ. ವಿಶೇಷ ಅಂದ್ರೆ, ಇದೇ ಮರದ ಹಣ್ಣು ಕಳೆದ ವರ್ಷ ಕ್ವಿಂಟಲ್‌ಗೆ ಬರೋಬ್ಬರಿ ₹47,000ಕ್ಕೆ ಮಾರಾಟವಾಗಿತ್ತು.
ಯಾವ ತಳಿಗೆ ಎಷ್ಟಿದೆ ಬೆಲೆ?
ಮಾರುಕಟ್ಟೆಯಲ್ಲಿ ಕೇವಲ ಜಯಣ್ಣ ಅವರ ಹಣ್ಣು ಮಾತ್ರವಲ್ಲದೆ, ವಿವಿಧ ತಳಿಗಳಿಗೂ ಉತ್ತಮ ಬೆಲೆ ಲಭಿಸುತ್ತಿದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ಗುರುತಿಸಿರುವ 'ಲಕ್ಷ್ಮಣ' ಎಂಬ ವಿಶೇಷ ತಳಿಯ ಹುಣಸೆ ಕ್ವಿಂಟಲ್‌ಗೆ ₹34,000 ರೂಪಾಯಿವರೆಗೆ ಮಾರಾಟವಾಗಿರುವ ಉದಾಹರಣೆ ಇದೆ.
ಗುಣಮಟ್ಟಕ್ಕೆ ಅನುಗುಣವಾಗಿ ಕ್ವಿಂಟಲ್‌ಗೆ ಕನಿಷ್ಠ ₹11,500 ರಿಂದ ₹34,000 ವರೆಗೆ ಮಾರಾಟವಾಗುತ್ತಿದೆ. "ರೈತರು ಬೆಳೆಯುವ ಬೆಳೆ ಗುಣಮಟ್ಟದಿಂದ ಕೂಡಿದ್ದರೆ ಮಾರುಕಟ್ಟೆಯಲ್ಲಿ ಅದಕ್ಕೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಜಯಣ್ಣ ಅವರ ಹಣ್ಣು ಅಷ್ಟು ಉತ್ಕೃಷ್ಟವಾಗಿದ್ದರಿಂದ ಈ ದಾಖಲೆ ಬೆಲೆ ಸಿಕ್ಕಿದೆ" ಎಂದು ಹಿರಿಯ ವರ್ತಕ ದೇವೇಂದ್ರಪ್ಪ ತಿಳಿಸಿದ್ದಾರೆ ಅಂತಾ ಪ್ರಜಾವಾಣಿ ವರದಿ ಮಾಡಿದೆ. ಒಟ್ಟಿನಲ್ಲಿ ಹೇಳುವುದಾದರೆ, ಸರಿಯಾದ ನಿರ್ವಹಣೆ ಮತ್ತು ಉತ್ತಮ ತಳಿಗಳನ್ನು ಬೆಳೆದರೆ ಹುಣಸೆ ಹಣ್ಣು ಕೂಡ ರೈತರ ಪಾಲಿಗೆ 'ಕಲ್ಪವೃಕ್ಷ'ವಾಗಬಲ್ಲದು ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.












Click it and Unblock the Notifications