Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್

Bengaluru Startup: ಕರ್ನಾಟಕ - ಬೆಂಗಳೂರು ಸ್ಟಾರ್ಟ್‌ಅಪ್ ರಾಜಧಾನಿ ಅಲ್ಲ, ಮಹಾರಾಷ್ಟ್ರವೇ ನಿಜವಾದ ಸ್ಟಾರ್ಟ್‌ಅಪ್ ರಾಜಧಾನಿ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೇಳಿದ್ದಾರೆ. ಮಹಾರಾಷ್ಟ್ರ ನಿಜವಾದ ಸ್ಟಾರ್ಟ್ಅಪ್ ರಾಜಧಾನಿ; ಬೆಂಗಳೂರು ಅಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು ದೇಶದಲ್ಲಿಯೇ ಸ್ಟಾರ್ಟ್ ಅಪ್ ರಾಜಧಾನಿಯಾಗಿ ಮುನ್ನುಗ್ಗುತ್ತಿದೆ. ಬೆಂಗಳೂರು ಹಲವು ವಿಚಾರಗಳಲ್ಲಿ ಮುಂಚೂಣಿಯಲ್ಲಿದೆ. ಆದರೆ ಬೆಂಗಳೂರಿಗೆ ವಿವಿಧ ರಾಜ್ಯಗಳ ಪ್ರಮುಖ ನಗರಗಳಿಂದ ಭಾರೀ ಪೈಪೋಟಿ ಇದೆ. ಇದೀಗ ಬೆಂಗಳೂರು ಸ್ಟಾರ್ಟ್ ಅಪ್ ರಾಜಧಾನಿ ಆಗುವುದಕ್ಕೆ ಸಾಧ್ಯವೇ ಇಲ್ಲ. ಅದೇನಿದ್ದರೂ ಮಹಾರಾಷ್ಟ್ರ ಮಾತ್ರ ಎಂದು ದೇವೇಂದ್ರ ಫಡ್ನವೀಸ್ ಅವರು ಹೇಳಿದ್ದಾರೆ.

Bengaluru Startup

ಫೋರ್ಬ್ಸ್ ಇಂಡಿಯಾ ಲೀಡರ್‌ಶಿಪ್ ಅವಾರ್ಡ್ಸ್ 2026 ರಲ್ಲಿ ಮಾತನಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರವನ್ನು ಭಾರತದ ನಿಜವಾದ ಸ್ಟಾರ್ಟ್‌ಅಪ್ ರಾಜಧಾನಿ ಎಂದು ಹೇಳಿದದಾರೆ. ಸಂಪೂರ್ಣ ಸಂಖ್ಯೆಗಳು, ಹೂಡಿಕೆಗಳು ಮತ್ತು ಯುನಿಕಾರ್ನ್ ಎಣಿಕೆಯಲ್ಲಿ ಬೆಂಗಳೂರನ್ನು ಮೀರಿಸಿದ್ದು. ಭಾರತದ 1.5 GW ಕಾರ್ಯಾಚರಣಾ ಡೇಟಾ ಸೆಂಟರ್ ಸಾಮರ್ಥ್ಯದಲ್ಲಿ 1 GW ಗಿಂತ ಹೆಚ್ಚು ಸಾಮರ್ಥ್ಯವನ್ನು ಮಹಾರಾಷ್ಟ್ರ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಮತ್ತು ಹೈದರಾಬಾದ್ ಸಾಂಪ್ರದಾಯಿಕವಾಗಿ ಪ್ರಮುಖ ಸ್ಟಾರ್ಟ್‌ಅಪ್‌ ಆಗಿವೆ. ಆದರೆ ಹೂಡಿಕೆ ಹಾಗೂ ಒಟ್ಟು ಸ್ಟಾರ್ಟ್‌ಅಪ್‌ಗಳ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. 1 GW ಗಿಂತ ಹೆಚ್ಚಿನ ಸಾಮರ್ಥ್ಯದೊಂದಿಗೆ ಭಾರತದ ಡೇಟಾ ಸೆಂಟರ್ ಹಬ್ ಆಗಿ ಮಹಾರಾಷ್ಟ್ರವು ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ, ಇದು ದೃಢವಾದ ಡಿಜಿಟಲ್ ಮೂಲಸೌಕರ್ಯವನ್ನು ಸೂಚಿಸುತ್ತದೆ ಎನ್ನುವ ವಾದವೂ ಇದೆ.

Bengaluru Startup ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದೇನು

ಮಹಾರಾಷ್ಟ್ರಕ್ಕೆ ಯಾಕೆ ಕಂಪನಿಗಳು ಹೆಚ್ಚಾಗಿ ಬರಬೇಕು ಹಾಗೂ ಮಹಾರಾಷ್ಟ್ರ ಕಂಪನಿಗಳಿಗೆ ಏಕೆ ಸೂಕ್ತವಾಗಿದೆ ಎನ್ನುವ ಪ್ರಶ್ನೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಉತ್ತರಿಸಿದ್ದಾರೆ. ಈ ಹಿಂದೆ ಮಹಾರಾಷ್ಟ್ರ, ಗುಜರಾತ್ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಭಾರೀ ಪೈಪೋಟಿ ಇತ್ತು. ಆದರೆ ಈಗ ಕನಿಷ್ಠ 10 ರಾಜ್ಯಗಳ ನಡುವೆ ಭಾರೀ ಪೈಪೋಟಿ ಇದೆ. ಸ್ಪರ್ಧಾತ್ಮಕ ಫೆಡರಿಲಿಸಂ ಅನ್ನು ನಾವು ಸ್ವಾಗತ ಮಾಡುತ್ತೇವೆ.

ನಾವು ಸ್ಟಾರ್ಟ್‌ ಅಪ್ ಕ್ಯಾಪಿಟಲ್ ಇದ್ದೇವೆ. ನಮ್ಮಲ್ಲಿ ಅತ್ಯಂತ ಹೆಚ್ಚು ಸ್ಟಾರ್ಟ್‌ಅಪ್‌ಗಳಿವೆ. ನಾವು ಸಂಖ್ಯೆ ಹಾಗೂ ಹೂಡಿಕೆಯ ವಿಚಾರದಲ್ಲಿ ನಾವು ಸ್ಟಾರ್ಟ್ ಅಪ್ ರಾಜಧಾನಿ ಆಗಿದ್ದೇವೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+