Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್‌

ಬೆಂಗಳೂರು: ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಕಳಂಕ ತರುವಂತಹ ಆಘಾತಕಾರಿ ಘಟನೆಯೊಂದು ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ. ಪ್ರತಿಷ್ಠಿತ ಖಾಸಗಿ ಮೆಡಿಕಲ್ ಕಾಲೇಜ್‌ ಒಂದರಲ್ಲಿ ಪಾಠ ಮಾಡಬೇಕಾದ ಪ್ರಾಧ್ಯಾಪಕನೊಬ್ಬ, ತರಗತಿಯಲ್ಲೇ ಎಲ್ಲರ ಮುಂದೆಯೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್ ಮಾಡಿದ್ದಾನೆ. ಈ ಅಸಭ್ಯ ವರ್ತನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ಹಾಗೂ ಸಹಪಾಠಿಗಳು ಸೇರಿ ಆತನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ನೆಲಮಂಗಲ ತಾಲೂಕಿನ ಟಿ. ಬೇಗೂರು ಬಳಿ ಇರುವ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಈ ಹೈಡ್ರಾಮಾ ನಡೆದಿದೆ. ಪ್ರೊಫೆಸರ್ ಅಬ್ದುಲ್ ಎಂಬಾತನೇ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪಿ. ತರಗತಿಯಲ್ಲಿ ಪಾಠ ನಡೆಯುತ್ತಿದ್ದ ವೇಳೆ, ಇತರೆಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿರುವಾಗಲೇ ಈತ ಏಕಾಏಕಿ ವಿದ್ಯಾರ್ಥಿನಿಯ ಬಳಿ ತೆರಳಿ ಚಾಕೊಲೇಟ್ ನೀಡಿ 'ಐ ಲವ್ ಯೂ' ಎಂದು ಪ್ರಪೋಸ್ ಮಾಡಿದ್ದಾನೆ. ಪ್ರಾಧ್ಯಾಪಕನ ಈ ಅನಿರೀಕ್ಷಿತ ವರ್ತನೆಯಿಂದ ದಂಗಾದ ವಿದ್ಯಾರ್ಥಿನಿ, ತಕ್ಷಣವೇ ತರಗತಿಯಲ್ಲೇ ಆತನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.

Professor

ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ, "ಈ ಹಿಂದೆ ನೀನೇ ನನಗೆ ಪ್ರಪೋಸ್ ಮಾಡಿರಲಿಲ್ಲವೇ?" ಎಂದು ಪ್ರೊಫೆಸರ್ ಅಬ್ದುಲ್ ಮರುಪ್ರಶ್ನೆ ಹಾಕುವ ಮೂಲಕ ತನ್ನ ತಪ್ಪನ್ನು ಮುಚ್ಚಿಹಾಕಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, "ಇದಕ್ಕೆ ಸಾಕ್ಷಿಯಾಗಿ ನನ್ನ ಬಳಿ ಸಿಸಿಟಿವಿ ದೃಶ್ಯಾವಳಿಗಳಿವೆ" ಎಂದು ಆವಾಜ್ ಹಾಕಿದ್ದಾನೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ವಿದ್ಯಾರ್ಥಿನಿ, "ಹಾಗಾದರೆ ಈಗಲೇ ಆ ಸಿಸಿಟಿವಿ ವಿಡಿಯೋವನ್ನು ತೋರಿಸು, ಸಾಕ್ಷಿ ಕೊಡು" ಎಂದು ಪಟ್ಟು ಹಿಡಿದಿದ್ದಾಳೆ. ವಿದ್ಯಾರ್ಥಿನಿಯ ಆಕ್ರೋಶ ಕಂಡು ಕಕ್ಕಾಬಿಕ್ಕಿಯಾದ ಲೆಕ್ಚರರ್, "ಈ ಬಗ್ಗೆ ನಾಳೆ ಮಾತನಾಡುತ್ತೇನೆ" ಎಂದು ಹೇಳಿ ಕ್ಲಾಸ್ ರೂಮ್‌ನಿಂದ ಹೊರನಡೆಯಲು ಯತ್ನಿಸಿದ್ದಾನೆ.

ಈ ವೇಳೆ ಆಕ್ರೋಶದ ಕಟ್ಟೆಯೊಡೆದ ವಿದ್ಯಾರ್ಥಿನಿ, ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಪ್ರೊಫೆಸರ್‌ಗೆ ತರಗತಿಯಲ್ಲೇ ಥಳಿಸಿದ್ದಾಳೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಪರವಾಗಿ ನಿಂತ ತರಗತಿಯ ಇತರೆ ವಿದ್ಯಾರ್ಥಿಗಳು ಸಹ ಪ್ರಾಧ್ಯಾಪಕನಿಗೆ ಜೊತೆಗೆ ವಾಗ್ವಾದಕ್ಕಿಳಿದು ಹಲ್ಲೆ ನಡೆಸಿದ್ದಾರೆ. ತರಗತಿಯಲ್ಲಿದ್ದ ಮತ್ತೋರ್ವ ವಿದ್ಯಾರ್ಥಿ ತನ್ನ ಮೊಬೈಲ್‌ನಲ್ಲಿ ಈ ಇಡೀ ಘಟನೆಯನ್ನು ಸೆರೆಹಿಡಿದಿದ್ದು, ಪ್ರಸ್ತುತ ಈ ವಿಡಿಯೋ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ವಿದ್ಯಾದಾನ ಮಾಡಬೇಕಾದ ಪ್ರಾಧ್ಯಾಪಕನೇ ವಿದ್ಯಾರ್ಥಿನಿಯರೊಂದಿಗೆ ಈ ರೀತಿ ಅಸಭ್ಯವಾಗಿ ವರ್ತಿಸಿರುವುದು ಸಾರ್ವಜನಿಕರ ಹಾಗೂ ಪೋಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯಿಂದಾಗಿ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ಘನತೆಗೆ ಧಕ್ಕೆಯಾದಂತಾಗಿದೆ. ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆ ಪೋಷಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋ ಆಧಾರದ ಮೇಲೆ ಪೊಲೀಸರು ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕಾಲೇಜು ಆಡಳಿತ ಮಂಡಳಿಯು ಆರೋಪಿ ಪ್ರೊಫೆಸರ್ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು ಎಂಬ ಕೂಗು ಬಲವಾಗಿದೆ. ಸದ್ಯ ಪ್ರೊಫೆಸರ್ ಅಬ್ದುಲ್ ವಿರುದ್ಧ ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+