Get Updates
Get notified of breaking news, exclusive insights, and must-see stories!

Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ

Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು: ಎಂಪನೇಲ್ಡ್‌ ಮನಶ್ಶಾಸ್ತ್ರಜ್ಞರಾದ ರೂಪಾ ರಾವ್ ಅವರ ಬರಹ ಇಲ್ಲಿದೆ. ನೀವು ಯಾವುದಾದರೂ ಸಿನಿಮಾ ನೋಡಿರಬಹುದು. ಯಾರೋ ಹೇಳಿದ ಕಥೆ ಕೇಳಿರಬಹುದು ಅಥವಾ ಇನ್ಯಾವುದೋ ಒಂದು ಘಟನೆ ನಿಮ್ಮ ಕಿವಿಗೆ ಬಿದ್ದಿರಬಹುದು. ಆ ಕ್ಷಣದಲ್ಲಿ ಅದು ಮರೆತು ಹೋಗಿರುತ್ತದೆ. ಆದರೆ, ಮತ್ತೆ ಕೆಲವು ದಿನಗಳ ನಂತರ ನೀವು ಯಾವುದೋ ಬರಹ ಅಥವಾ ಕಥೆ ಬರೆಯಲು ಹೋಗ್ತೀರಿ, ಆಗ ಒಂದು ಹೊಸ ಆಲೋಚನೆ ಬರುತ್ತದೆ. ಹಠಾತ್ ಅಂತ ಬಹಳ ಸುಲಭವಾಗಿ.

"ವಾ... ಸೂಪರ್ , ಅದ್ಭುತ. ನಾನು ಹೊಸ ಆಲೋಚನೆ ಮಾಡಿದೆ." "ಇದು ನನ್ನದು." ಅಂತ ಅಂದುಕೊಳ್ತೀರಿ.. ಅದನ್ನೂ ಬರೆದು ಬಿಡ್ತೀರಿ ಕೆಲವು ದಿನಗಳ ನಂತರ ಯಾರೋ ಬರ್ತಾರೆ. ಇದು ನನ್ನದು ಅಥವಾ ಇಂತಹ ಬರಹದ್ದು ಅಥವಾ ಇಲ್ಲಿಂದ ಕದ್ದಿದ್ದು.. ಅಂತ ನಿಮಗೆ ಅದನ್ನು ಮುಂಚೆ ನೋಡಿದ ಘಟನೆಯೇ ನೆನಪಿರಲ್ಲ ನಾನು ಕೇಳೇಇಲ್ಲ , ಓದಿಯೇ ಇಲ್ಲ ಎಂದೆಲ್ಲ ಸಮರ್ಥಿಸಿಕೊಳ್ಳಲು ಪ್ರಯತ್ನಪಡ್ತೀರೀ ಇಲ್ಲಿ ಏನಾಗ್ತಿದೆ.

Love Mocktail 3

ಇದರಲ್ಲಿ ಮೊದಲ ಭಾಗವನ್ನು ಅಂದರೆ ಎಲ್ಲೋ ಕೇಳಿದ ನೋಡಿದ ಅಥವಾ ಓದಿದ ಕಥೆಯೊಂದು ನಮ್ಮದೇ ಮನಸಿನ ಮೂಲೆ ಇಂದ ಬಂದಂತೆ ಭಾಸವಾಗುವುದನ್ನು ನಾವು ಕ್ರಿಪ್ಟೋಮ್ನೇಶಿಯಾ ಎಂದು ಕರೆಯುತ್ತೇವೆ. ನಂತರದಲ್ಲಿ ಅದು ನಮ್ಮ ಮನಸ್ಸು ನಮ್ಮ image ಕಾಪಾಡಿಕೊಳ್ಳಲು ಕಥೆಯನ್ನು ಕಟ್ಟಿಕೊಳ್ಳುತ್ತದೆ. ಇದೇ ಕಾನ್ಫ್ಮಾಬ್ಯುಲೇಶನ್. ಆ ನೆನಪು, ನೀವು ಓದಿದ್ದೀರಾ ಎಂದು ತಿಳಿಸುವ ನೆನಪು ನಿಮ್ಮಿಂದಲೇ ಬಚ್ಚಿಟ್ಟುಕೊಂಡಿದೆ. ಆ ನೆನಪನ್ನು ನೆನಪಿಸಬಾರದು ಎಂದು ನಿಮ್ಮ ಮನಸ್ಸೂ ಗಟ್ಟಿಯಾಗಿ ಸೆಲ್ಫ ಸರ್ವಿಂಗ್ ಬಯಾಸ್ ಮಾಡಿಬಿಡುತ್ತದೆ. ನಿಜ ಹೇಳಬೇಕೆಂದರೆ ಅದು ಮರೆತಿರಲ್ಲ ಡಿಲೀಟೂ ಆಗಿರಲ್ಲ. ಮನಸ್ಸು ವಿಷಯವನ್ನು ನೆನಪಿಟ್ಟುಕೊಳ್ಳುತ್ತದೆ ಆದರೆ ಅದು ಎಲ್ಲಿಂದ ಸ್ಥಳವನ್ನು ಮರೆತುಬಿಡುತ್ತದೆ.

ಆದ್ದರಿಂದ ಆ ಆಲೋಚನೆ ಮತ್ತೆ ಬಂದಾಗ, ಅದು ಎಲ್ಲಿಂದ ಬಂದಿದೆ ಎಂದು ಗೊತ್ತಾಗಲ್ಲ. ಅದು ಕೇವಲ ಹೊಳೆಯುತ್ತದೆ ಅಲ್ಲಲ್ಲ ಮಲಗಿದ್ದು ಮನಸಿನ ಮೂಲೆ ಇಂದ ಎದ್ದು ಬರುತ್ತೆ ಕೈಕಾಲು ಮುಖ ತೊಳೆದುಕೊಂಡು ಹೊಳೆಯುತ್ತಾ , ಅದು ಎಷ್ಟು ಸಹಜ ಅಂದರೆ ನೀವು ಅದನ್ನು ನಿಮ್ಮದೇ ಎಂದು ಸುಲಭವಾಗಿ ನಂಬಿಬಿಡ್ತೀರಿ
ಮನಸ್ಸು ನಿರಂತರವಾಗಿ ಗಮನಿಸುತ್ತಿರುತ್ತದೆ ಕೆಲವು ಜಾಗೃತ ಮನಸಿನಲ್ಲಿ ಇನ್ನೂ ಕೆಲವು ಸುಪ್ತ ಮನಸ್ಸಿನ ಮೂಲಕ , ಅವುಗಳನ್ನು ನಮಗರಿವಿಲ್ಲದಂತೆಯೇ ಅಳವಡಿಸಿಕೊಳ್ಳುತ್ತೇವೆ ಸಂಗ್ರಹಿಸುತ್ತೇವೆ.

ಕೆಲವು ವಿಷಯಗಳು ಮನಸ್ಸಿನ ಆಳಕ್ಕೆ ಹೋಗುತ್ತವೆ. ಜಾಗೃತ‌ಮನಸಿನ ಅರಿವಿಗೂ ಬಾರದಷ್ಟು ಹಿಂದೆ ಉಳಿಯುತ್ತವೆ. ಯಾವಾಗಲೋ ನಮಗೆ ಹೊಸ ಕಥೆಗೆ ಅಂತ‌ ಕೂತಾಗ ಅವು ಅಲ್ಲಿಂದಲೇ ಮೇಲಕ್ಕೆ ಬರುತ್ತವೆ. ನಮ್ಮ ಮನಸಿನ ಆಳದಿಂದ ಬಂದಿದ್ದರಿಂದ ಅದು ನಮ್ಮದೇ ಅನಿಸುತ್ತೆ ಅಂದರೆ ಕೋಗಿಲೆಯ ಮರಿಯನ್ನು ತನ್ನದೇ ಮರಿ ಅಂದುಕೊಳ್ಳುವ ಪೆದ್ದು ಕಾಗೆಯಂತಹುದೇ. ಆದ್ದರಿಂದ ಕೆಲವೊಮ್ಮೆ ನಾವು ಗಟ್ಟಿಯಾಗಿ ಸಮರ್ಥಿಸಿಕೊಳ್ತೆವೆ: "ಇದು ನನ್ನದೇ ಕಥೆ ಬರಹ ಇತ್ಯಾದಿ." ಒಂದು ವಿಷಯ ನೆನಪಿಟ್ಟು ಕೊಳ್ಳಬೇಕು ನಾವು ಬರೀ ಸೃಜನಶೀಲರಲ್ಲ.

Love Mocktail 3: ಒಂದು ಕ್ಷಣ ನಿಲ್ಲಿ, ಯೋಚಿಸಿ

ನಾವು ಅನುಭವಗಳ ಸಂಗ್ರಾಹಕರು. ಹಾಗಾಗಿ ಮುಂದಿನ ಸಲ ಯಾವದೋ ಒಂದು ಆಲೋಚನೆ ತುಂಬಾ ಸುಲಭವಾಗಿ ಸರಾಗವಾಗಿ ಬಂದರೆ ಒಂದು ಕ್ಷಣ ನಿಲ್ಲಿ. ಯೋಚಿಸಿ "ಇದು ನನ್ನ ಆಲೋಚನೆಯಾ ಅಥವಾ ನನ್ನ ಯಾವುದೋ ನೆನಪಾ?" ಯಾಕೆಂದರೆ ಕೆಲವೊಮ್ಮೆ‌ನಮ್ಮದೇ ಅಂತ ಅಂದುಕೊಂಡದ್ದು ಇನ್ಯಾರದ್ದೋ ಕೂಸಾಗಿರುತ್ತೆ. ಆ ಕೂಸಿನ ಪೋಷಕರು ಎಲ್ಲೋ ನೋವಿನಲ್ಲಿ ನೊಂದಿರುತ್ತಾರೆ. ಇತ್ತೀಚೆಗೆ Raghavendra M Naik ಅವರ ಕಥೆ ಕೇಳಿಯೂ ನನಗೆ ಆ ಕಥೆ ಕೇಳಿದ ನೆನಪೇ ಇಲ್ಲ ಎಂದ ಡಾರ್ಲಿಂಗ್ ಕೃಷ್ಣ Darling Krishna ಅವರಿಗೆ ಹೀಗೇ ಆಗಿರಬಹುದಾ ಎನ್ನುವ ಪ್ರಶ್ನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+