Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು

Tamarind Price: ಕರ್ನಾಟಕದ ವಿವಿಧ ಭಾಗದಲ್ಲಿ ಗುಣಮಟ್ಟದ ಹುಣಸೆ ಹಣ್ಣಿಗೆ ಭರ್ಜರಿ ಬೆಲೆ ಬರುತ್ತಿದೆ. ತುಮಕೂರು ಸೇರಿದಂತೆ ವಿವಿಧ ಭಾಗದಲ್ಲಿ ಗುಣಮಟ್ಟದ ಹುಣಸೆ ಹಣ್ಣಿಗೆ ಭರ್ಜರಿ ಬೆಲೆ ಬರುತ್ತಿದೆ. ಮಾರ್ಚ್‌ 26ರಂದು ಮಾರುಕಟ್ಟೆಯಲ್ಲಿ ಹುಣಸೆ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿನ ಬೆಲೆಯು ಹೆಚ್ಚಾಗುತ್ತಿದ್ದು, ಹುಣಸೆ ಕೃಷಿಕರಲ್ಲಿ ಸಂತೋಷವನ್ನುಂಟು ಮಾಡಿದೆ. ಮಾರ್ಚ್ 2026ರ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ ಹುಣಸೆ ಹಣ್ಣಿನ ಬೆಲೆಯು ಪ್ರತಿ ಕೆಜಿಗೆ 110 ರೂಪಾಯಿಯಿಂದ 135 ರೂಪಾಯಿ ಆಸುಪಾಸಿನಲ್ಲಿವೆ. ಬೆಂಗಳೂರಿನಲ್ಲಿ ಹುಣಸೆ ಹಣ್ಣಿನ ಸಗಟು ಮಂಡಿ ಬೆಲೆಗಳು ಕ್ವಿಂಟಲ್‌ಗೆ (100 ಕೆಜಿ) 12,000 ರೂಪಾಯಿಯಿಂದ 15,000 ರೂಪಾಯಿಯ ವರೆಗೆ ಇದೆ. ಇನ್ನು ಉತ್ತಮ ಗುಣಮಟ್ಟದ ಒಣಗಿದ ಹುಣಸೆಹಣ್ಣಿನ ಬೆಲೆಯು ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 250 ರೂಪಾಯಿಯ ವರೆಗೆ ಇದೆ.

Tamarind Price

ಹುಣಸೆ ಹಣ್ಣಿನ ಪ್ರಮುಖ ಮಾರುಕಟ್ಟೆ ಬೆಲೆಯು

ಸಗಟು (ಬೆಂಗಳೂರು ಮಂಡಿ): ಅಂದಾಜು 110 ರೂಪಾಯಿಯಿಂದ 135 ರೂಪಾಯಿ ಪ್ರತಿ ಕೆಜಿಗೆ ಇದೆ.

ಸಗಟು (ಕೋಲಾರ): 23 ರೂಪಾಯಿಂದ 29 ರೂಪಾಯಿ ಪ್ರತಿ ಕೆ.ಜಿಗೆ(ವೈವಿಧ್ಯ ಮತ್ತು ಮಾರುಕಟ್ಟೆಯನ್ನು ಅವಲಂಬಿಸಿ ಬದಲಾಗುತ್ತದೆ).

ಚಿಲ್ಲರೆ/ಪ್ಯಾಕ್ ಮಾಡಿದ ಬೆಲೆ: 90 ರೂಪಾಯಿಯಿಂದ 250 ರೂಪಾಯಿಯ ವರೆಗೆ ಪ್ರತಿ ಕೆ.ಜಿಗೆ ಇದೆ.

ಹುಣಸೆ ಬೀಜ: ಅಂದಾಜು 25 ರೂಪಾಯಿಯಿಂದ 34 ರೂಪಾಯಿ ಕೆ.ಜಿಗೆ ಇದೆ.

ಇನ್ನು ಸಾಮಾನ್ಯ ತಿರುಳಿಗೆ ಹೋಲಿಸಿದರೆ ಬೀಜರಹಿತ ಮತ್ತು ಉತ್ತಮ ಗುಣಮಟ್ಟದ ಒಣಗಿದ ಹುಣಸೆಹಣ್ಣು ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಈ ಮಾದರಿಯ ಹುಣಸೆ ಹಣ್ಣು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ 250 ರೂಪಾಯಿ ಇದೆ.

ಹುಣಸೆ ಹಣ್ಣಿನ ಬೆಲೆ ಹೆಚ್ಚಳಕ್ಕೆ ಕಾರಣವೇನು

ಇನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಹುಣಸೆ ಹಣ್ಣಿನ ಬೆಲೆಯು ಭರ್ಜರಿ ಹೆಚ್ಚಳವಾಗುತ್ತಿದೆ. ಹುಣಸೆ ಹಣ್ಣಿನ ಬೆಲೆ ಗಗನಕ್ಕೇರಲು ಪ್ರಮುಖ ಎರಡು ಕಾರಣಗಳಿವೆ. ಇದರಲ್ಲಿ ಮುಖ್ಯವಾಗಿ ಹುಣಸೆಯಲ್ಲಿ ಇಳುವರಿ ಕುಂಠಿತ ಮತ್ತು ಮಾರುಕಟ್ಟೆಯಲ್ಲಿನ ಹೆಚ್ಚಿನ ಬೇಡಿಕೆ ಇರುವುದು ಪ್ರಮುಖ ಕಾರಣವಾಗಿದೆ. 2026ರ ಮಾರ್ಚ್ ವೇಳೆಗೆ ಹುಣಸೆ ದರ ಪ್ರತಿ ಕ್ವಿಂಟಾಲ್‌ಗೆ 36,000 ರೂಪಾಯಿಯಿಂದ 44,000 ರೂಪಾಯಿ ತಲುಪಿದೆ.

ಮಳೆ ಕೊರತೆ ಮತ್ತು ಇಳುವರಿ ಕುಸಿತ

ಇನ್ನು ಈ ಬಾರಿ ಕರ್ನಾಟಕದ ಮಳೆ ಕೊರತೆ ಹಾಗೂ ಹುಣಸೆ ಇಳುವರಿ ಕುಸಿತ ಕಂಡಿರುವುದು ಸಹ ಬೆಲ ಏರಿಕೆಗೆ ಕಾರಣವಾಗಿದೆ. ಹುಣಸೆ ಮರಗಳಲ್ಲಿನ ಕಾಯಿಗಳ ಗಾತ್ರ ಸಣ್ಣದಾಗಿದ್ದು, ಒಟ್ಟಾರೆ ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಅಲ್ಲದೆ ಇದೇ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಪೂರೈಕೆ ಕುಸಿತ ಕಾಣುತ್ತಿರುವುದು ಹುಣಸೆ ಹಣ್ಣಿನ ಬೆಲೆ ದುಪ್ಪಟ್ಟಾಗಿದೆ ಹುಣಸೆ ಮರ ಹತ್ತಿ ಕಾಯಿ ಬಿಡಿಸಲು ಹಾಗೂ ಸಂಸ್ಕರಿಸಲು (ಸಿಪ್ಪೆ, ನಾರು ಬೇರ್ಪಡಿಸಲು) ಕಾರ್ಮಿಕರು ಸಿಗದೆ ಇರುವುದು ಸಹ ಸಮಸ್ಯೆಗೆ ಕಾರಣವಾಗಿದೆ. ಇದರಿಂದ ಹುಣಸೆ ಹಣ್ಣು ಮಾರುಕಟ್ಟೆಗೆ ಬರುವುದನ್ನು ವಿಳಂಬವಾಗುತ್ತಿದೆ.

ಇನ್ನು ಉತ್ತಮ ಗುಣಮಟ್ಟದ ಹುಣಸೆ ಹಣ್ಣಿಗೆ ಉದಾ: ಲಕ್ಷ್ಮಣ ತಳಿ ಮಾರುಕಟ್ಟೆಯಲ್ಲಿ ಭಾರಿ ಬೆಲೆ ಸಿಗುತ್ತಿದೆ. ಆದರೆ, ಉತ್ಪಾದನಾ ವೆಚ್ಚ: ಮರದಿಂದ ಹಣ್ಣು ಉದುರಿಸಿ, ಸಂಸ್ಕರಿಸಿ ಮಾರುಕಟ್ಟೆಗೆ ತರುವವರೆಗಿನ ವೆಚ್ಚವೂ ಹೆಚ್ಚಾಗಿದೆ. ಈ ಕಾರಣಗಳಿಂದಾಗಿ ಹುಣಸೆ ಹಣ್ಣಿನ ಬೆಲೆಯು ದುಬಾರಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+