ಹಫೀಸ್ ಸಯೀದ್ ಬಿಡುಗಡೆ: ಮೋದಿಯವರನ್ನು ವ್ಯಂಗ್ಯವಾಡಿದ ರಾಹುಲ್

Subscribe to Oneindia Kannada

ನವದೆಹಲಿ, ನವೆಂಬರ್ 25: 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಇ ತಯ್ಯಬಾ ಮುಖ್ಯಸ್ಥ ಹಫೀಸ್ ಸಯೀದ್ ಗೃಹ ಬಂಧನದಿಂದ ಬಿಡುಗಡೆಯಾಗಿದ್ದಾನೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಲೇವಡಿ ಮಾಡಿದ್ದಾರೆ.

ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಗೃಹ ಬಂಧನದಿಂದ ಮುಕ್ತ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ 'ಹಗ್ ಪ್ಲೊಮಸಿ' ವಿಫಲವಾಗಿದೆ ಎಂದು ಹೇಳಿರುವ ರಾಹುಲ್, 'ತಕ್ಷಣಕ್ಕೆ ಇನ್ನೂ ಹೆಚ್ಚಿನ ಅಪ್ಪುಗೆಗಳು ಬೇಕಾಗಿವೆ' ಎಂದು ಕಾಲೆಳೆದಿದ್ದಾರೆ.

Rahul Gandhi mocks PM Modi after Hafeez Saeed’s release

"ನರೇಂದ್ರಭಾಯ್.. 'ಮಾಸ್ಟರ್ ಮೈಂಡ್' ಉಗ್ರ ಹೊರ ಬಂದಿದ್ದಾನೆ. ಅಧ್ಯಕ್ಷ ಟ್ರಂಪ್ ಕೇವಲ ಪಾಕಿಸ್ತಾನದ ಸೇನಾ ನಿಧಿಯನ್ನು ಎಲ್.ಇ.ಟಿಯಿಂದ ಹಿಂತೆಗೆದುಕೊಂಡಿದ್ದಾರೆ. 'ಹಗ್ ಪ್ಲೊಮಸಿ' (ಅಪ್ಪುಗೆ ರಾಜತಾಂತ್ರಿಕತೆ) ವಿಫಲವಾಗಿದೆ. ಹೆಚ್ಚು ಅಪ್ಪುಗೆಗಳ ತುರ್ತು ಅಗತ್ಯವಿದೆ," ಎಂದು ಮೋದಿಯವರನ್ನು ವ್ಯಂಗ್ಯವಾಡಿದ್ದಾರೆ.

ಇದೇ ನವೆಂಬರ್ 24ರಂದು ಹಫೀಸ್ ಸಯೀದ್ ಗೃಹ ಬಂಧನದಿಂದ ಬಿಡುಗಡೆಯಾಗಿದ್ದ. ಆತನ ಮನೆ ಸುತ್ತ ನಿಯೋಜಿಸಲಾಗಿದ್ದ ಪೊಲೀಸರನ್ನು ವಾಪಸ್ ಪಡೆಯಲಾಗಿತ್ತು.

ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರ ಎಂದು ಘೋಷಣೆಯಾಗಿರುವ ಹಫೀಸ್ ಸಯೀದ್ ಕಳೆದ ಜನವರಿಯಿಂದ ಗೃಹಬಂಧನದಲ್ಲಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress vice president Rahul Gandhi mocked Prime Minister Narendra Modi after Pakistan released 2008 Mumbai attacks mastermind and Lashkar-e-Taiba chief Hafiz Saeed from house arrest.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ